Friday, 23rd February 2018

Recent News

1 week ago

ಬೆಂಗಳೂರಿನಲ್ಲಿ ಮ್ಯಾನ್ ಹೋಲ್ ದುರಂತ: ರಾಯಚೂರು ಮೂಲದ ಇಬ್ಬರು ಕೂಲಿ ಕಾರ್ಮಿಕರು ಬಲಿ

ಆನೇಕಲ್: ಕಳೆದ ಕೆಲ ದಿನಗಳ ಹಿಂದಯಷ್ಟೇ ಬೆಂಗಳೂರಿನ ಸೋಮಸಂದ್ರ ಪಾಳ್ಯದಲ್ಲಿ ನಡೆದಿದ್ದ ಮ್ಯಾನ್ ಹೋಲ್ ದುರಂತ ಮಾಸುವ ಮುನ್ನವೇ ಮಂಗಳವಾರ ಚರಂಡಿ ನೀರನ್ನು ಶುಚಿಗೊಳಿಸಲು ಹೋಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ. ಬೆಂಗಳೂರಿನ ಎಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಇಸಿಎಸ್ ಬಡಾವಣೆಯ ವಾಣಿಜ್ಯ ಕಟ್ಟಡದಲ್ಲಿ ಘಟನೆ ಸಂಭವಿಸಿದ್ದು, ರಾಯಚೂರು ಮೂಲದ ರಾಮು(35) ಹಾಗೂ ರವಿ(28)ಮೃತ ದುರ್ದೈವಿಗಳಾಗಿದ್ದಾರೆ. ಇಂದು ಮಧ್ಯಾಹ್ನ ಯಮ್ ಲೋಕ್ ಹೋಟೆಲ್ ನ ಚರಂಡಿ ನೀರನ್ನು ಕ್ಲೀನ್ ಮಾಡಲು ವೇಳೆ ರಾಮು ಮ್ಯಾನ್ ಹೋಲ್ […]

1 month ago

ಬೈಕ್ ಸಮೇತ ಓಪನ್ ಮ್ಯಾನ್ ಹೋಲ್ ಗೆ ಬಿದ್ದು, ಟಯರ್ ಸ್ಫೋಟಗೊಂಡು ಯುವಕ ದುರ್ಮರಣ

ಮುಂಬೈ: ಬೈಕ್ ಸಮೇತ ಮ್ಯಾನ್ ಹೋಲ್ ಗೆ ಬಿದ್ದು ಬಳಿಕ ಟಯರ್ ಸ್ಫೋಟಗೊಂಡ ಪರಿಣಾಮ ಸ್ಥಳದಲ್ಲೇ ಸವಾರರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ಈ ಘಟನೆ ಮುಂಬೈನಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದ್ದು, ಮೃತ ದುರ್ದೈವಿ ಯುವಕನನ್ನು ಮೋಹನ್ ರಾಥೋಡ್(27) ಎಂದು ಗುರುತಿಸಲಾಗಿದೆ. ಇವರು ಉಲ್ವೆ ನಿವಾಸಿ ಎನ್ನಲಾಗಿದೆ. ಏನಿದು ಘಟನೆ?: ಮಧ್ಯರಾತ್ರಿ ಸುಮಾರು 12.30ರ ಸುಮಾರಿಗೆ ತನ್ನ...

ಮಂಗಳೂರು: ಪೌರ ಕಾರ್ಮಿಕರಿಂದ ಮ್ಯಾನ್‍ಹೋಲ್ ಸ್ವಚ್ಛ ಮಾಡಿಸಿದ ಗುತ್ತಿಗೆದಾರ

4 months ago

ಮಂಗಳೂರು: ಮ್ಯಾನ್ ಹೋಲ್ ಕ್ಲೀನಿಂಗ್‍ಗಾಗಿ ಪೌರ ಕಾರ್ಮಿಕರನ್ನು ಹೊಂಡಕ್ಕೆ ಇಳಿಸಿ ಕೆಲಸ ಮಾಡಿಸಬಾರದೆಂದಿದ್ದರೂ ಆಡಳಿತ ವರ್ಗ ಮಾತ್ರ ಅಸಡ್ಡೆ ವಹಿಸುತ್ತಿದೆ. ಮಂಗಳೂರಿನ ನಗರ ಪ್ರದೇಶದ ಹಳೆ ಬಂದರಿನಲ್ಲಿ ಪೌರ ಕಾರ್ಮಿಕರನ್ನು ಮ್ಯಾನ್ ಹೋಲ್ ಗೆ ಇಳಿಸಿ ಸ್ವಚ್ಛ ಮಾಡಿಸಿದ ಘಟನೆ ನಡೆದಿದೆ....

ಪೌರಕಾರ್ಮಿಕರಿಂದ ಬರಿಗೈಯಲ್ಲೇ ಮ್ಯಾನ್ ಹೋಲ್ ಸ್ವಚ್ಛತಾ ಕಾರ್ಯ

6 months ago

ಮೈಸೂರು: ದೇಶದ ನಂಬರ್ ಓನ್ ಸ್ವಚ್ಛ ನಗರಿ ಎಂಬ ಪಟ್ಟ ಕಳೆದುಕೊಂಡ ಚಿಂತೆಯಲ್ಲಿ ಮೈಸೂರು ಮಹಾನಗರಪಾಲಿಕೆ ಇದೆ. ಆದರೆ ನಂಬರ್ 1 ಪಟ್ಟಕ್ಕಿಂತಾ ಮೈಸೂರನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರನ್ನು ಮೊದಲು ಮನುಷ್ಯರಂತೆ ನೋಡುವ ಮನಃಸ್ಥಿತಿ ಬೆಳೆಸಿಕೊಳ್ಳುವ ಅಗತ್ಯ ಇದೆ. ಮೈಸೂರು ಮಹಾನಗರಪಾಲಿಕೆ...

ಬಾಲಕನನ್ನು ಮ್ಯಾನಹೋಲ್‍ಗೆ ಇಳಿಸಿ ಕ್ಲೀನ್ ಮಾಡಿಸಿದ್ರು

8 months ago

ಹುಬ್ಬಳ್ಳಿ: ಮ್ಯಾನಹೋಲ್‍ಗಳಲ್ಲಿ ಕಾರ್ಮಿಕರನ್ನು ಇಳಿಸಿ ಕೆಲಸ ಮಾಡಬಾರದು ಎಂಬ ನಿಯಮ ಇದೆ. ಆದ್ರೆ ಆ ನಿಯಮವನ್ನೇ ಗಾಳಿಗೆ ತೂರಿ ಹುಬ್ಬಳ್ಳಿಯಲ್ಲಿ ಬಾಲಕನೊಬ್ಬನನ್ನು ಮ್ಯಾನಹೋಲ್‍ಗೆ ಇಳಿಸಿ ಕ್ಲೀನ್ ಮಾಡಿಸಿದ ಘಟನೆ ನಡೆದಿದೆ. ಹೌದು. ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ಬಳಿಯ ಸಂಗೊಳ್ಳಿ ರಾಯಣ್ಣ...

ಸಿಎಂ ಸಿದ್ದರಾಮಯ್ಯ ತವರಲ್ಲೇ ನಡೆದಿದೆ ರಾಜ್ಯದ ಮಾನ ಹೋಗೋ ಘಟನೆ

9 months ago

ಮೈಸೂರು: ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಮಾನವ ಕುಲವೇ ತಲೆ ತಗ್ಗಿಸುವ ಅನಿಷ್ಠ ಪದ್ದತಿ ಇನ್ನು ಜೀವಂತವಾಗಿದೆ. ಶೌಚಗುಂಡಿಗೆ ಪೌರಕಾರ್ಮಿಕರೊಬ್ಬರನ್ನು ಇಳಿಸಿ ಗುಂಡಿ ಸ್ವಚ್ಛಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ತಾವರೆಕಟ್ಟೆ ಗ್ರಾಮದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಎಂಬುವರು ಪೌರಕಾರ್ಮಿಕ...

ಮ್ಯಾನ್‍ಹೋಲ್‍ನಲ್ಲಿ ಉಸಿರುಗಟ್ಟಿ 3 ಕಾರ್ಮಿಕರ ಸಾವು – ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ

12 months ago

ಬೆಂಗಳೂರು: ನಗರದಲ್ಲಿ ಮ್ಯಾನ್‍ಹೋಲ್ ದುರಂತ ಸಂಭವಿಸಿದ್ದು, ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಮೂವರು ಕಾರ್ಮಿಕರು ದಾರುಣ ಸಾವನ್ನಪ್ಪಿದ್ದಾರೆ. ಕಗ್ಗದಾಸಪುರ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ದುರಂತದ ಬಳಿಕ ಎಚ್ಚೆತ್ತ ಜಲಮಂಡಳಿ, ಗುತ್ತಿಗೆದಾರ ಹಾಗೂ ಇಂಜಿನಿಯರ್ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ...