Tuesday, 19th June 2018

Recent News

8 hours ago

ಮೈತ್ರಿಕೂಟ ಸರ್ಕಾರ ರಚನೆ ಬಳಿಕ ಕಾಂಗ್ರೆಸ್ ದುರ್ಬಲ? ಹೈಕಮಾಂಡ್ ವಿರುದ್ಧ ಕೈ ನಾಯಕರ ಅಸಮಾಧಾನ!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಬಲಗೊಳ್ಳುತ್ತಿದ್ಯಾ? ಮೈತ್ರಿಕೂಟ ಸರ್ಕಾರ ರಚನೆ ಬಳಿಕ ಕಾಂಗ್ರೆಸ್ ದುರ್ಬಲ ಆಗಿದ್ಯಾ ಹೀಗೊಂದು ಸಂಶಯ ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿ ಹಬ್ಬಿದೆ. ದೆಹಲಿಯಲ್ಲಿ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿಯಾದ ಬಳಿಕ ಕಾಂಗ್ರೆಸ್ಸಿನಲ್ಲಿ ಒಳಗೊಳಗೆ ಅಸಮಾಧಾನದ ಕಿಡಿ ಹತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ನಾಯಕರನ್ನು ಕಡೆಗಣನೆ ಮಾಡಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದ್ದಿದೆ. ಕುಮಾರಸ್ವಾಮಿ ಪ್ರಸ್ತಾಪಿಸಿದ ಎಲ್ಲ ವಿಚಾರಗಳಿಗೂ ರಾಹುಲ್‍ಗಾಂಧಿ ಸಮ್ಮತಿ ಸೂಚಿಸಿರುವುದು […]

3 days ago

ಭಿನ್ನಮತ ಶಮನಕ್ಕೆ ಕಾಂಗ್ರೆಸ್ ಕಸರತ್ತು- 10 ದಿನದೊಳಗೆ ಮತ್ತೆ ಸಂಪುಟ ವಿಸ್ತರಣೆ

ಬೆಂಗಳೂರು: ಕಾಂಗ್ರೆಸ್ ನಲ್ಲಿರುವ ಭಿನ್ನಮತ ಶಮನಕ್ಕೆ ಫುಲ್ ಸ್ಟಾಫ್ ಹಾಕಲು ಕಾಂಗ್ರೆಸ್ ಮುಂದಾಗಿದೆ. ರಾಜ್ಯ ಸಚಿವ ಸಂಪುಟ ಇನ್ನು ಹತ್ತು ದಿನಗಳೊಳಗೆ ವಿಸ್ತರಣೆಯಾಗುವ ಸಾಧ್ಯತೆಯಿದ್ದು, ಇನ್ನು ಹತ್ತು ದಿನಗಳ ಒಳಗೆ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ನವದೆಹಲಿಯಲ್ಲಿ ಸುಳಿವು ಬಿಟ್ಟುಕೊಟ್ಟಿದ್ದಾರೆ. ಸದ್ಯ ನಾಲ್ಕು ಸ್ಥಾನಗಳನ್ನು ವಿಸ್ತರಿಸಲು ಕಾಂಗ್ರೆಸ್ ಹೈಕಮಾಂಡ್...

ಪಕ್ಷದಲ್ಲಿ ತಂದೆ-ತಾತನನ್ನ ನೋಡಿ ಮಂತ್ರಿ ಸ್ಥಾನ ಕೊಡುವ ಪರಿಸ್ಥಿತಿ ಇದೆ – `ಕೈ’ ಶಾಸಕ ಅಸಮಾಧಾನ

6 days ago

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದಲ್ಲಿ ತಂದೆ-ತಾತನನ್ನ ನೋಡಿ ಮಂತ್ರಿ ಸ್ಥಾನ ಕೊಡುವ ಪರಿಸ್ಥಿತಿ ಇದೆ. ಈ ರೀತಿ ನೋಡಿ ಮಂತ್ರಿ ಸ್ಥಾನ ಕೊಟ್ಟರೇ ದೇಶದಲ್ಲಿ ಯುವ ನಾಯಕತ್ವವವನ್ನು ಸೃಷ್ಠಿ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಸ್ಥಾನ ವಂಚಿತ ಶಾಸಕ ಸುಧಾಕರ್ ಕಾಂಗ್ರೆಸ್ ಹೈಕಮಾಂಡ್...

ನನಗೆ ಮತದಾರರೇ ಹೈಕಮಾಂಡ್, ಅವ್ರ ಬಳಿ ಚರ್ಚಿಸಿ ನಿರ್ಧಾರ ಕೈಗೊಳ್ತೀನಿ: ಬಿಸಿ ಪಾಟೀಲ್

1 week ago

ಹಾವೇರಿ: ಮತದಾರರೇ ನನ್ನ ಹೈಕಮಾಂಡ್. ಅವರು ಯಾವ ರೀತಿ ಸೂಚಿಸುತ್ತಾರೆ ಆ ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್ ಹೇಳಿದ್ದಾರೆ. ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಕಾರ್ಯಕರ್ತರ ಜೊತೆ ಸಭೆ ನಡೆಸಿ ಮುಂದಿನ ನಿರ್ಧಾರ...

ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ, ನನಗೆ ಸ್ಥಾನ ಸಿಗಲೇಬೇಕು: ಭೀಮಾ ನಾಯ್ಕ್

1 week ago

ಬಳ್ಳಾರಿ: ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ. ನನಗೂ ಸಹ ಸಚಿವ ಸ್ಥಾನ ಸಿಗಲೇ ಬೇಕು ಎಂದು ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಎಸ್ ಭೀಮಾ ನಾಯ್ಕ್ ಹೇಳಿದ್ದಾರೆ. ಸಚಿವ ಸ್ಥಾನ ತಪ್ಪಿದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಭೀಮಾ ನಾಯ್ಕ್...

ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೋ ಅಂತಾ ತಿಳಿಯುತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

2 weeks ago

ಬೆಳಗಾವಿ: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಕ್ಕೆ ಕಾಂಗ್ರೆಸ್‍ನಲ್ಲಿ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ಉತ್ತರ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ ಸಹ ಪಕ್ಷದ ಹೈಕಮಾಂಡ್ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ...

ಎಂಬಿ ಪಾಟೀಲ್ ಬಣದಲ್ಲಿರೋ 19 ಶಾಸಕರು ಯಾರು? ಇಲ್ಲಿದೆ ಪಟ್ಟಿ

2 weeks ago

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದಲ್ಲಿ ಬಂಡಾಯ ತಣ್ಣಗಾಗಿಲ್ಲ. ಮೊದಲ ಸುತ್ತಿನಲ್ಲಿ ಸಚಿವ ಸ್ಥಾನ ಸಿಗದೆ ಇರೋದಕ್ಕೆ ಬೆಂಕಿಯಂತಾಗಿರೋ ಎಂ.ಬಿ.ಪಾಟೀಲ್ ಇಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವರಾದ ಡಿಕೆಶಿ, ಜಾರ್ಜ್, ದೇಶಪಾಂಡೆ ಹಾಗೂ ಮಾಜಿ ಸಿಎಂ...

ನೀವೆಲ್ಲ ಸೇರಿ ನನ್ನನ್ನು ಕಾಗದದ ಸಿಎಂ ಮಾಡಿದ್ದೀರಿ: ಮಲ್ಲಿಕಾರ್ಜುನ ಖರ್ಗೆ

2 weeks ago

ಕಲಬುರಗಿ: ನೀವು ಯಾವಾಗ ಸಿಎಂ ಆಗ್ತೀರಿ ಎಂದು ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ, ಪ್ರತೀ ಬಾರಿಯೂ ನೀವು ಯಾವಾಗ ಸಿಎಂ ಆಗ್ತೀರಾ ಎಂದು ಕೇಳಿ ನನ್ನನ್ನು ಕಾಗದದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ ಎನ್ನುವ ನಗೆ ಚಾಟಕಿಯ ಉತ್ತರವನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ....