Monday, 19th March 2018

11 hours ago

ಬಾವನೊಂದಿಗೆ ಬೈಕ್ ನಲ್ಲಿ ತೆರಳ್ತಿದ್ದಾಗ ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ – ಇಂದು ವಿದ್ಯಾರ್ಥಿನಿ ಮದ್ವೆಯಾಗಿ ಪ್ರತ್ಯಕ್ಷ!

ಹಾಸನ: ನಗರದ ಹೊರವಲಯದ ಮಣಚನಹಳ್ಳಿ ಬಳಿ ಶನಿವಾರ ಸಂಜೆ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾಪತ್ತೆಯಾಗಿದ್ದ ಯುವತಿ ಇಂದು ಮದುವೆಯಾಗಿ ಪ್ರತ್ಯಕ್ಷವಾಗಿದ್ದಾಳೆ. ಪೂಜಾ ಮತ್ತು ಅಭಿಲಾಷ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಅಭಿಲಾಷ್ ತನ್ನ ಸ್ನೇಹಿತರ ಜೊತೆ ಸೇರಿ ಪೂಜಾಳನ್ನು ಮದುವೆಯಾಗುವುದಕ್ಕಾಗಿಯೇ ಅಪಹರಣ ಮಾಡಿದ್ದಾನೆ ಎಂಬ ಮಾತು ಕೇಳಿಬರುತ್ತಿತ್ತು. ಆದ್ರೆ ಅಭಿಲಾಷ್ ಮತ್ತು ಪೂಜಾ ಧರ್ಮಸ್ಥಳಕ್ಕೆ ಹೋಗಿ […]

2 days ago

ಬಾವನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳಿಂದ ವಿದ್ಯಾರ್ಥಿನಿಯ ಅಪಹರಣ!

ಹಾಸನ: ನಗರದ ಹೊರವಲಯದ ಮಣಚನಹಳ್ಳಿ ಬಳಿ ಶನಿವಾರ ಸಂಜೆ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಕರಣದ ಬಗ್ಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಹಾಸನದ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ 2 ನೇ ವರ್ಷದ ಬಿಕಾಂ ಓದುತ್ತಿರುವ ಮಣಚನಹಳ್ಳಿ ಗ್ರಾಮದ ಪೂಜಾ ಎಂಬ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಲಾಗಿದೆ. ಪೂಜಾ ನಿನ್ನೆ ಸಂಜೆ ಕಾಲೇಜು ಮುಗಿಸಿ...

ಹುಟ್ಟೂರಲ್ಲಿ ಇಂದು ಹಾಸನ ಯೋಧನ ಅಂತಿಮ ಯಾನ – ಗ್ರಾಮದಲ್ಲಿ ಮಡುಗಟ್ಟಿದೆ ನೀರವ ಮೌನ

5 days ago

ಹಾಸನ: ಛತ್ತೀಸಗಡದ ಸುಕ್ಮಾದಲ್ಲಿ ನಕ್ಸಲ್ ದಾಳಿಯಲ್ಲಿ ಹುತಾತ್ಮನಾದ ಹಾಸನದ ಯೋಧ ಚಂದ್ರು ಅವರ ಪಾರ್ಥೀವ ಶರೀರ ಇನ್ನೇನು ಕೆಲವೇ ಕ್ಷಣಗಳಲ್ಲಿ ಹುಟ್ಟೂರು ತಲುಪಿದೆ. ಬುಧವಾರ ಸಂಜೆ ಮಿಲಿಟರಿ ಅಧಿಕಾರಿಗಳ ನೇತೃತ್ವದಲ್ಲಿ ಬಂದ ಯೋಧನ ಪಾರ್ಥಿವ ಶರೀರವನ್ನು ಸಚಿವ ಎ. ಮಂಜು, ಶಾಸಕ...

ಛತ್ತೀಸ್‍ಗಢ ನಕ್ಸಲ್ ದಾಳಿ – ಹಾಸನ ಮೂಲದ ಸಿಆರ್‌ಪಿಎಫ್ ಯೋಧ ಹುತಾತ್ಮ

6 days ago

ಹಾಸನ: ಛತ್ತೀಸ್‍ಗಢದ ಸುಕ್ಮಾ ಪ್ರದೇಶದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಕ್ಸಲರು ನಡೆಸಿದ ದಾಳಿಯಲ್ಲಿ ಹಾಸನ ಮೂಲದ ಯೋಧ ವೀರ ಮರಣವನ್ನಪ್ಪಿದ್ದಾರೆ. ಜಿಲ್ಲೆಯ ಅರಕಲಗೂಡು ತಾಲೂಕಿನ ಹರದೂರು ಗ್ರಾಮದ ಎಚ್ ಎಸ್ ಚಂದ್ರ (29) ಹುತಾತ್ಮರಾದ ಯೋಧ. ಯೋಧನ ಸಾವಿನ ಸುದ್ದಿ ತಿಳಿದ ಕುಟುಂಬದಲ್ಲಿ ಮೌನ...

ವಿಡಿಯೋ: ನೀರು ಕುಡಿಯಲು ಹೋಗಿ ಕೆಸರು ಹೊಂಡಕ್ಕೆ ಬಿದ್ದ ಮರಿಯಾನೆ- ಅರಣ್ಯಾಧಿಕಾರಿಗಳಿಂದ ರಕ್ಷಣೆ

1 week ago

ಹಾಸನ: ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಮುಳುಗಿದ್ದ ಮರಿಯಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಆಲೂರು ತಾಲೂಕಿನ ಮಗ್ಗೆ ಬಳಿ ಆನೆ ಹಿಂಡು ಭಾನುವಾರ ರಾತ್ರಿ ನೀರು ಕುಡಿಯಲು ಬಂದಿತ್ತು. ಕೆರೆಯ ಒಂದು ಭಾಗದಲ್ಲಿ ಮೊದಲೇ ಜೆಸಿಬಿಯಿಂದ ಗುಂಡಿ ತೋಡಿದ್ದರಿಂದ...

ತೋಟದಲ್ಲಿ ತೆಂಗಿನಕಾಯಿಯನ್ನು ಕಿತ್ತಿದ್ದಕ್ಕೆ ಮಗನನ್ನೇ ಕೊಂದ ತಂದೆ!

1 week ago

ಹಾಸನ: ಆಸ್ತಿಗಾಗಿ ತಂದೆಯೇ ಮಗನ ಕೊಲೆ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಹೊಳೇನರಸೀಪುರ ತಾಲೂಕಿನ ಅತ್ತಿಚೌಡನಹಳ್ಳಿ ಗ್ರಾಮದ ನಿವಾಸಿ ಚಂದ್ರು ಮೃತ ದುರ್ದೈವಿ. ಸಮೀಪದ ಕರಗನಹಳ್ಳಿಯಲ್ಲಿರುವ ತೆಂಗಿನ ತೋಟದಲ್ಲಿ ತೆಂಗಿನಕಾಯಿಯನ್ನು ಕಿತ್ತಿದ್ದಕ್ಕೆ ಆಕ್ರೋಶಗೊಂಡ ಹೆತ್ತ ತಂದೆ ರಾಜಣ್ಣ ತನ್ನ ಸಂಗಡಿಗರೊಂದಿಗೆ ಸೇರಿ...

ಒಂದೇ ಪ್ಲಾಟ್‍ಫಾರ್ಮ್ ಗೆ ಬಂದ 2 ರೈಲುಗಳು- ಹೊಳೆನರಸೀಪುರ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ

1 week ago

ಹಾಸನ: ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗುವ ಭಾರೀ ಅಪಘಾತವೊಂದು ತಪ್ಪಿದೆ. ಹಾಸನ ಜಿಲ್ಲೆ ಹೊಳೆನರಸೀಪುರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮೈಸೂರಿನಿಂದ ಹೊರಟ ತಾಳಗುಪ್ಪ ಪ್ಯಾಸೆಂಜರ್ ಮತ್ತು ಅರಸೀಕೆರೆಯಿಂದ ಹೊರಟ ಮೈಸೂರು ಪ್ಯಾಸೆಂಜರ್ ರೈಲು, ನಿಲ್ದಾಣಕ್ಕೆ ಏಕಕಾಲದಲ್ಲಿ ಬಂದಿವೆ. ತಾಳಗುಪ್ಪ ರೈಲು...

ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗ

2 weeks ago

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಜಯ ಸಿಕ್ಕಿದ್ದು ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಆದೇಶಕ್ಕೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ತಾತ್ಕಾಲಿಕವಾಗಿ ತಡೆ ನೀಡಿದೆ. ನಿಯಮಗಳ ವಿರುದ್ಧವಾಗಿ ಅವಧಿಗೂ ಮುನ್ನ...