Recent News

1 year ago

ಕುತ್ತಿಗೆಗೆ ಲಾಂಗ್ ಇಟ್ಟು ಮಾಂಗಲ್ಯ ಸರ ಎಗರಿಸಿದ ಕಳ್ಳರು

ರಾಮನಗರ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಕುತ್ತಿಗೆಗೆ ಲಾಂಗ್ ಇಟ್ಟು ಬೆದರಿಸಿ, ಮಾಂಗಲ್ಯ ಸರ ದೋಚಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಕೋಡಂಬಳ್ಳಿ ಗ್ರಾಮದ ನಿವಾಸಿ ಭಾಗ್ಯಮ್ಮ ಮಾಂಗಲ್ಯ ಸರ ಕಳೆದುಕೊಂಡವರು. ಭಾಗ್ಯಮ್ಮ ಅವರು ರಸ್ತೆ ಪಕ್ಕದಲ್ಲಿಯೇ ಹಸು ಮೇಯಿಸುತ್ತಿದ್ದರು. ಆಗ ಪಲ್ಸರ್ ಬೈಕ್‍ನಲ್ಲಿ ಬಂದ ಮೂವರು, ವಿಳಾಸ ಕೇಳುವ ನೆಪದಲ್ಲಿ ಅವರನ್ನು ಮಾತನಾಡಿಸಿದ್ದಾರೆ. ಭಾಗ್ಯಮ್ಮ ಅವರ ಜೊತೆ ಮಾತನಾಡುತ್ತಲೇ ತಮ್ಮ ಸುತ್ತ-ಮುತ್ತ ಯಾರು ಇಲ್ಲವೆಂದು ಖಚಿತಪಡಿಸಿಕೊಂಡ ಕಳ್ಳರು, ಲಾಂಗ್ ತೆಗೆದು ಅವರ ಕುತ್ತಿಗೆ […]

1 year ago

ಸಿನಿಮಾ ಶೈಲಿಯಲ್ಲಿ ಹೈದ್ರಾಬಾದ್ ಮ್ಯೂಸಿಯಂನಿಂದಲೇ 2 ಕೆಜಿ ಚಿನ್ನದ ಟಿಫಿನ್ ಬಾಕ್ಸ್ ದರೋಡೆ!

ಹೈದರಾಬಾದ್: ತೆಲಂಗಾಣದ ರಾಜಧಾನಿಯಲ್ಲಿರುವ ಪ್ರಸಿದ್ಧ ನಿಜಾಮ್ ಮ್ಯೂಸಿಯಂ ಸಂಗ್ರಹಾಲಯದಲ್ಲಿ ಸಿನಿಮೀಯಾ ಶೈಲಿಯಲ್ಲಿ ಕಳ್ಳರು 2 ಕೆಜಿ ಚಿನ್ನದ ಟಿಫಿನ್ ಬಾಕ್ಸ್ ಸೇರಿದಂತೆ ಹಲವು ವಸ್ತುಗಳನ್ನು ಎಗರಿಸಿದ್ದಾರೆ. ದೇಶದಲ್ಲೇ ಪ್ರಸಿದ್ಧ ಹಾಗೂ ಅತಿ ಭದ್ರತೆ ಹೊಂದಿರುವ ನಿಜಾಮಾ ಮ್ಯೂಸಿಯಂನಲ್ಲಿ ಎರಡು ದಶಕಗಳಿಗೂ ಹಳೆಯದಾದ 2 ಕೆಜಿ ತೂಕದ ಚಿನ್ನದ ಟಿಫಿನ್ ಬಾಕ್ಸ್, ಟೀ ಕಪ್, ಸಾಸರ್ ಹಾಗೂ...

1 ರೂ. ನಾಣ್ಯ ಹಾಕಿ ಪರಿಶೀಲನೆ: ಕೊನೆಗೆ ಹುಂಡಿಯೇ ಕಳ್ಳತನ!

1 year ago

– ಬೆಂಗಳೂರು ಪೊಲೀಸರಿಂದ ಕಳ್ಳರು ಅರೆಸ್ಟ್ ಬೆಂಗಳೂರು: ದೇವಸ್ಥಾನದ ಹುಂಡಿಗೆ 1 ರೂ. ನಾಣ್ಯ ಹಾಕಿ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮೈಕೋಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕುಮಾರ, ಮಂಜ, ಕೃಷ್ಣ, ವಿಜಯ, ಈ ನಾಲ್ವರು ಬಂಧಿತ ಆರೋಪಿಗಳಾಗಿದ್ದಾರೆ. ಈ ಆರೋಪಿಗಳು ಸ್ಟವ್...

ಅರೆ ಬೆತ್ತಲೆಯಾಗಿ ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಕಳ್ಳತನಕ್ಕೆ ಯತ್ನ!

1 year ago

– ಸಿಸಿಟಿವಿಯಲ್ಲಿ ಸೆರೆಯಾಯ್ತು ವಿಚಿತ್ರ ಕಳ್ಳರ ದೃಶ್ಯ ತುಮಕೂರು: ಅರೆ ಬೆತ್ತಲೆಯಾಗಿ ಸೊಂಟಕ್ಕೆ ಕಲ್ಲುಗಳು ತುಂಬಿರುವ ಬಟ್ಟೆಕಟ್ಟಿಕೊಂಡು ವಿಚಿತ್ರ ವೇಷದಲ್ಲಿ ಬಂದ ಕಳ್ಳರ ಗುಂಪೊಂದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕು ಹುಲಿಯೂರುದುರ್ಗದಲ್ಲಿ ನಡೆದಿದೆ. ಹುಲಿಯೂರು ದುರ್ಗದ ಶೃಂಗಾರ ಸಾಗರ...

ಕಳುವಾಗಿದ್ದ ಬೈಕ್ ಎಫ್‍ಬಿಯಿಂದ ಪತ್ತೆ – ಚಿಂತಾಮಣಿಯಲ್ಲಿ ಕಳವು, ದೊಡ್ಡಬಳ್ಳಾಪುರದಲ್ಲಿ ಪತ್ತೆ!

1 year ago

ಚಿಕ್ಕಬಳ್ಳಾಪುರ: ಕಳುವಾಗಿದ್ದ ಯಮಹಾ ಬೈಕ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಶುಕ್ರವಾರ ಮುಂಜಾನೆ ಮಂಜುನಾಥ್ ಅವರಿಗೆ ಸೇರಿದ್ದ ಯಮಹಾ ಬೈಕ್ ಕಳುವಾಗಿತ್ತು. ಮನೆ ಮುಂದೆ ನಿಲ್ಲಿಸಿದ್ದ...

ನಡು ರಸ್ತೆಯಲ್ಲೇ ಉದ್ಯಮಿಗೆ ಗನ್ ತೋರಿಸಿ 70 ಲಕ್ಷ ರೂ. ದೋಚಿದ ದುಷ್ಕರ್ಮಿಗಳು

1 year ago

ನವದೆಹಲಿ: ಉದ್ಯಮಿಯೊಬ್ಬರನ್ನು ಸಂಚಾರ ದಟ್ಟಣೆಯಿಂದ ಕೂಡಿದ ಫೈಓವರ್ ಮೇಲಿಯೇ ಅಡ್ಡಗಟ್ಟಿ ಹಣ ದೋಚಿದ ಘಟನೆ ಪಶ್ಚಿಮ ದೆಹಲಿಯ ನರೈನ್ ಫೈಓವರ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 40 ವರ್ಷದ ಕಾಶಿಶ್ ಬನ್ಸಾಲ್ ಹಣ ಕಳೆದುಕೊಂಡ ಉದ್ಯಮಿಯಾಗಿದ್ದಾರೆ. ಇವರು ಗುರುವಾರ ತಮ್ಮ...

ಗುಂಡ್ಯದಲ್ಲಿ ಮರಗಳ್ಳರಿಂದ ಅರಣ್ಯ ರಕ್ಷಕನ ಮೇಲೆ ಗಂಭೀರ ಹಲ್ಲೆ

1 year ago

ಮಂಗಳೂರು: ಅಕ್ರಮ ಮರ ಸಾಗಾಟ ನಡೆಸುತ್ತಿದ್ದ ಲಾರಿಯೊಂದನ್ನು ನಿಲ್ಲಿಸಿದ ಅರಣ್ಯ ರಕ್ಷಕ ಸಿಬ್ಬಂದಿಗೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪದ ಗುಂಡ್ಯದಲ್ಲಿ ನಡೆದಿದೆ. ರಾಜೇಶ್ ಗಾಯಗೊಂಡ ಅರಣ್ಯ ರಕ್ಷಕ ಸಿಬ್ಬಂದಿಯಾಗಿದ್ದಾರೆ. ಇವರು ಎಂದಿನಂತೆ ಬುಧವಾರ ಶಿರಾಡಿ...

ಶೋಕಿಗಾಗಿ ಬೈಕ್ ಕದ್ದು ದರೋಡೆ ಮಾಡುತ್ತಿದ್ದ ಕುಚುಕು ಗೆಳೆಯರು ಬಂಧನ!

1 year ago

ಬೆಂಗಳೂರು: ಶೋಕಿಗಾಗಿ ಬೈಕ್ ಕದ್ದು ದರೋಡೆ ಮಾಡುತ್ತಿದ್ದ ಇಬ್ಬರು ಕುಚುಕು ಗೆಳೆಯರನ್ನು ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಸನ ಮೂಲದ ಸುದೀಪ್ ಹಾಗೂ ದರ್ಶನ್ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ. ಕಳ್ಳತನ ಮಾಡಿದ ಬೈಕ್‍ಗಳಲ್ಲೇ ತೆರಳಿ ಮೊಬೈಲ್, ಸರಗಳ್ಳತನ, ಹಣ ದೋಚುವಿಕೆ ಸೇರಿದಂತೆ...