LatestMain PostNational

ಸಿಧು ಮೂಸೆವಾಲಾ ಹತ್ಯೆ ಹಿಂದೆ ಆಪ್ತ ಸ್ನೇಹಿತರೂ ಸೇರಿದ್ದಾರೆ: ತಂದೆ ಆರೋಪ

ಚಂಡೀಗಢ: ಪಂಜಾಬಿ ಖ್ಯಾತ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆಯಾಗಿ 80 ದಿನಗಳು ಕಳೆದಿವೆ. ಅವರ ಹತ್ಯೆಯ ಹಿಂದೆ ಆಪ್ತ ಸ್ನೇಹಿತರು ಹಾಗೂ ರಾಜಕಾರಣಿಗಳ ಕೈವಾಡ ಇದೆ ಎಂದು ಸಿಧು ತಂದೆ ಬಾಲ್ಕರ್ ಸಿಂಗ್ ಭಾನುವಾರ ಆರೋಪಿಸಿದ್ದಾರೆ.

ಸಿಧು ಮೂಸೆವಾಲಾ ಅತ್ಯಂತ ಕಡಿಮೆ ಸಮಯದಲ್ಲಿ ಜನಪ್ರಿಯತೆ ಗಳಿಸಿದ್ದ. ಇದನ್ನು ಕೆಲವರು ಸಹಿಸಲಾಗದೇ ಕೊಲೆ ಮಾಡಿದ್ದಾರೆ. ಸಿಧು ಹತ್ಯೆ ಹಿಂದೆ ಇರುವ ಆರೋಪಿಗಳ ಹೆಸರನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ ಎಂದು ಬಾಲ್ಕರ್ ಸಿಂಗ್ ತಿಳಿಸಿದ್ದಾರೆ.

ಹತ್ಯೆ ಹಿನ್ನೆಲೆ ಸರ್ಕಾರವನ್ನು ಸಹ ದಾರಿ ತಪ್ಪಿಸಲಾಗಿತ್ತು. ಕೆಲವರು ತಮ್ಮ ವೃತ್ತಿಜೀವನದ ಎಲ್ಲಾ ವ್ಯವಹಾರಗಳನ್ನು ಅವರ ಮೂಲಕ ಮಾಡಬೇಕೆಂದು ಬಯಸಿದ್ದರು. ಆದರೆ ಸಿಧು ಸ್ವತಂತ್ರರಾಗಿದ್ದರಿಂದ ಇದನ್ನು ಅವರು ಒಪ್ಪಿರಲಿಲ್ಲ. ಇದಕ್ಕಾಗಿ ಸಿಧು ಅವರನ್ನು ಕೊಲ್ಲಲಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ; ಗಡಿಯಲ್ಲಿ ಸಿಹಿ ಹಂಚಿಕೊಂಡು ಶುಭಕೋರಿದ ಭಾರತ-ಪಾಕ್‌ ಸೇನೆ

ಸಿಧು ಮೂಸೆವಾಲಾ ಅವರ ಭದ್ರತೆಯನ್ನು ರಾಜ್ಯ ಸರ್ಕಾರ ಮೊಟಕುಗೊಳಿಸಿದ ಮರುದಿನ ಎಂದರೆ ಮೇ 29ರಂದು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂಡಿದ್ದರು. ಸಿಧು ಜೊತೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಅವರ ಸೋದರ ಸಂಬಂಧಿ ಹಾಗೂ ಸ್ನೇಹಿತರು ಕೂಡಾ ದಾಳಿಯಲ್ಲಿ ಗಾಯಗೊಂಡಿದ್ದರು.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಅಂಕಿತ್ ಸಿರ್ಸಾ ಜವಾಹರ್ಕೆ ಗ್ರಾಮದಲ್ಲಿ ಸಿಧು ಅವರನ್ನು ಗುಂಡಿಕ್ಕಿ ಕೊಂದಿದ್ದ ಎಂಬುದು ಬಳಿಕ ತಿಳಿದುಬಂದಿತ್ತು. ಸುಮಾರು 19 ಗುಂಡುಗಳನ್ನು ದೇಹಕ್ಕೆ ತಗುಲಿಸಿಕೊಂಡಿದ್ದ ಸಿಧು 15 ನಿಮಿಷಗಳಲ್ಲಿ ಮೃತಪಟ್ಟಿದ್ದರು. ಇದನ್ನೂ ಓದಿ: ಟಿಪ್ಪು ಫ್ಲೆಕ್ಸ್ ಹರಿದ ಪ್ರಕರಣ – ಪುನೀತ್ ಕೆರೆಹಳ್ಳಿ ಬಂಧನ

Live Tv

Leave a Reply

Your email address will not be published.

Back to top button