Bengaluru CityKarnatakaLatestMain Post

ಟಿಪ್ಪು ಫ್ಲೆಕ್ಸ್ ಹರಿದ ಪ್ರಕರಣ – ಪುನೀತ್ ಕೆರೆಹಳ್ಳಿ ಸೇರಿ ಮೂವರ ಬಂಧನ

ಬೆಂಗಳೂರು: ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ಹಾಕಿದ್ದಕ್ಕೆ ಅವಮಾನಿಸಿದ್ದಾರೆಂದು ಹಡ್ಸನ್ ಸರ್ಕಲ್ ಮತ್ತು ಕೆಆರ್ ವೃತ್ತದಲ್ಲಿ ಕಾಂಗ್ರೆಸ್ ಫ್ಲೆಕ್ಸ್‌ನಲ್ಲಿದ್ದ ಟಿಪ್ಪು ಫೋಟೋ ಹರಿದು ವಿಕೃತಿ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಮಾಲ್‍ನಲ್ಲಿ ಸಾವರ್ಕರ್ ಭಾವಚಿತ್ರ ವಿವಾದ ಮತ್ತೊಂದು ತಿರುವು ಪಡೆದುಕೊಂಡಿತ್ತು. ಸಾವರ್ಕರ್ ಭಾವಚಿತ್ರ ಹರಿದಿದ್ದಕ್ಕೆ ಪ್ರತಿಯಾಗಿ ಟಿಪ್ಪು ಭಾವಚಿತ್ರ ವಿರೂಪಗೊಳಿಸಲಾಗಿತ್ತು. ಬೆಂಗಳೂರಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಬ್ಯಾನರ್‌ನಲ್ಲಿ ಹಾಕಲಾಗಿದ್ದ ಟಿಪ್ಪು ಫೋಟೋ ಹರಿದು ರಾಷ್ಟ್ರ ರಕ್ಷಣ ಪಡೆಯ ಕಾರ್ಯಕರ್ತರು ವಿಕೃತಿ ಮೆರೆದಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಕಾಲ್ನಡಿಗೆಯ ಟಿಪ್ಪು ಫ್ಲೆಕ್ಸ್ ಧ್ವಂಸ- ಪುನೀತ್ ಕೆರೆಹಳ್ಳಿ, ಬೆಂಬಲಿಗರಿಂದ ಕೃತ್ಯ

ಶನಿವಾರ ರಾತ್ರಿ 10:30ರ ಸುಮಾರಿಗೆ ಈ ಘಟನೆ ನಡೆದಿತ್ತು. ರಾಜಧಾನಿ ಬೆಂಗಳೂರಿನಾದ್ಯಂತ ಪ್ರಮುಖ ರಸ್ತೆಗಳಲ್ಲಿ ರಾಷ್ಟ್ರ ಧ್ವಜಗಳು, ಲೈಟಿಂಗ್ಸ್‌ಗಳು ರಾರಾಜಿಸುತ್ತಿದೆ. ಆಗಸ್ಟ್ 15 ರಂದು ಕೈ ಪಡೆ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಂಡಿದ್ದು ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ಕಾಂಗ್ರೆಸ್‍ನ ಪ್ರಮುಖ ನಾಯಕರ ಫೋಟೋ ಇರುವ ಫ್ಲೆಕ್ಸ್‌ಗಳನ್ನು ರಸ್ತೆಯುದ್ದಕ್ಕೂ ಹಾಕಿದ್ದಾರೆ. ಇದು ಪುನೀತ್ ಕೆರೆಹಳ್ಳಿ ಕಣ್ಣು ಕೆಂಪಾಗಿಸಿತ್ತು. ಸಾವರ್ಕರ್ ಭಾವಚಿತ್ರ ಹರಿದಿದ್ದಕ್ಕೆ ಪ್ರತಿಯಾಗಿ ಪುನೀತ್ ಕೆರೆಹಳ್ಳಿ ಮತ್ತು ತಂಡ ಟಿಪ್ಪು ಫೋಟೋ ಹರಿದ ವೀಡಿಯೋವೊಂದು ಹರಿದಾಡುತ್ತಿತ್ತು. ಹಾಗಾಗಿ ಬೆಂಗಳೂರು ಪೊಲೀಸರು ಮನೆಯಲ್ಲಿ ಪೂಜೆ ಮಾಡುತ್ತಿದ್ದ ವೇಳೆ ಪುನೀತ್ ಕೆರೆಹಳ್ಳಿ ಮತ್ತು ಆತನ ಸ್ನೇಹಿತರಾದ ಅನಂತ್‍ರಾವ್ ಹಾಗೂ ಕುಮಾರ್ ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸಾವರ್ಕರ್‌ನಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ ನೆಹರೂ: ಸಿದ್ದರಾಮಯ್ಯ

Live Tv

Leave a Reply

Your email address will not be published.

Back to top button