Thursday, 21st September 2017

Recent News

ಸಿನಿಮಾ ಶೂಟಿಂಗ್ ಮೊದಲೇ ಶ್ರದ್ಧಾಗೆ ಮಾತು ಕೊಟ್ಟ ಪ್ರಭಾಸ್

ಹೈದರಾಬಾದ್: ಟಾಲಿವುಡ್‍ನ ಬಾಹುಬಲಿ ಪ್ರಭಾಸ್ ಬಾಲಿವುಡ್ ಆಶೀಕಿ ಬೆಡಗಿ ಶ್ರದ್ಧಾ ಕಪೂರ್ ಗೆ ಮಾತೊಂದನ್ನು ನೀಡಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ.

ಶ್ರದ್ಧಾ ಟಾಲಿವುಡ್‍ನ ಬಹುನಿರೀಕ್ಷಿತ `ಸಾಹೋ’ ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಎಲ್ಲರಿಗೂ ಗೊತ್ತಿದೆ. ಶ್ರದ್ಧಾಗೆ ಇದು ಮೊದಲ ಟಾಲಿವುಡ್ ಸಿನಿಮಾ ಇದಾಗಿದ್ದು, ಹಾಗಾಗಿ ಶ್ರದ್ಧಾ ತೆಲುಗು ಡೈಲಾಗ್ ಹೇಳಬೇಕಾಗಿದೆ. ತೆಲುಗು ಬರದ ಶ್ರದ್ಧಾಗೆ ತಮ್ಮ ಭಾಷೆಯನ್ನು ಕಲಿಸುವುದಾಗಿ ಎಂದು ಪ್ರಭಾಸ್ ಮಾತನ್ನು ನೀಡಿದ್ದಾರೆ.

ತಮ್ಮ ಮಾತಿಗೆ ಪ್ರತಿಯಾಗಿ ಶ್ರದ್ಧಾ ಕೂಡ ಮಾತೊಂದನ್ನು ನೀಡಿದ್ದು, ಪ್ರಭಾಸ್ ಗೆ ಹಿಂದಿ ಕಲಿಸಿ ಕೊಡುವುದಾಗಿ ಹೇಳಿದ್ದಾರೆ. ಸಿನಿಮಾ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿ ಬರಲಿದೆ. ಹೀಗಾಗಿ ಪ್ರಭಾಸ್ ಕೂಡ ಹಿಂದಿ ಡೈಲಾಗ್ ಗಳನ್ನು ಹೊಡೆಯಲಿದ್ದಾರೆ ಎಂದು ಚಿತ್ರ ತಂಡ ತಿಳಿಸಿದೆ.

ಬಾಹುಬಲಿ ಸಿನಿಮಾದ ನಂತರ ಪ್ರಭಾಸ್ ಮೊದಲ ಸಿನಿಮಾ ಇದಾಗಿದ್ದು, ಸಿನಿಲೋಕದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಸಿನಿಮಾ ಆ್ಯಕ್ಷನ್ ಮತ್ತು ರೋಮ್ಯಾಂಟಿಕ್ ಕಥೆಯನ್ನು ಹೊಂದಿದ್ದು, ಕೆಲವೊಂದು ಆ್ಯಕ್ಷನ್ ಸೀನ್‍ಗಳಲ್ಲಿ ಶ್ರದ್ಧಾ ಕೂಡ ನಟಿಸಲಿದ್ದಾರೆ. ಸಾಹೋಗಾಗಿ ಶ್ರದ್ಧಾ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ಸಿನಿಮಾ ಸುಜೀತ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ವಂಶಿ ಕೃಷ್ಣ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಶಂಕರ್-ಇಹಾಸನ್-ಲಾಯ್ ಸಂಗೀತವಿದೆ. ಸಾಹೋ ತೆಲಗು,ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬರಲಿದೆ.

Leave a Reply

Your email address will not be published. Required fields are marked *