KarnatakaLatestLeading NewsMain PostNational

SDPI, PFI ಮೇಲೆ NIA, ED ದಾಳಿ – ಕರ್ನಾಟಕದಲ್ಲಿ 20, ದೇಶಾದ್ಯಂತ 106 ಮಂದಿ ಅರೆಸ್ಟ್‌

ನವದೆಹಲಿ: ಉಗ್ರ ಚಟುವಟಿಕೆಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಪ್ಯಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ಮತ್ತು ಸೋಷಿಯಲ್‌ ಡೆಮೆಕ್ರಾಟಿಕ್‌ ಪಾರ್ಟಿ ಆಫ್‌ ಇಂಡಿಯಾ(SDPI) ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸಿವೆ.

ದೇಶಾದ್ಯಂತ ಒಟ್ಟು 11 ರಾಜ್ಯಗಳಲ್ಲಿ ಎನ್‌ಐಎ(NIA), ಇಡಿ(ED), ರಾಜ್ಯಗಳ ಪೊಲೀಸ್‌ ಪಿಎಫ್‌ಐ, ಎಸ್‌ಡಿಪಿಐ ಕಚೇರಿ ಮತ್ತು ನಾಯಕರ ನಿವಾಸದ ಮೇಲೆ ದಾಳಿ ನಡೆಸಿವೆ. ಇದನ್ನೂ ಓದಿ: SDPI ಕಚೇರಿಯ ಬಾಗಿಲು ಧ್ವಂಸ ಮಾಡಿ ನುಗ್ಗಿದ NIA ಅಧಿಕಾರಿಗಳು

ಕರ್ನಾಟಕದಿಂದ(Karnataka) 20 ಮಂದಿ ಮತ್ತು ದೇಶಾದ್ಯಂತ ಒಟ್ಟು 106 ಮಂದಿಯನ್ನು ಬಂಧಿಸಿದೆ. ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಕೊಪ್ಪಳ, ಕಾರವಾರ, ಕಲಬುರಗಿಯಲ್ಲಿ ದಾಳಿ ನಡೆದಿದ್ದು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ.

ಯಾವ ರಾಜ್ಯದಿಂದ ಎಷ್ಟು?
ಆಂಧ್ರಪ್ರದೇಶ 5, ಅಸ್ಸಾಂ 9, ದೆಹಲಿ, 3, ಕರ್ನಾಟಕ 20, ಕೇರಳ 22, ಮಧ್ಯಪ್ರದೇಶ 4, ಮಹಾರಾಷ್ಟ್ರ 20, ಪುದುಚ್ಚೇರಿ 3, ರಾಜಸ್ಥಾನ 2, ತಮಿಳುನಾಡು 10, ಉತ್ತರ ಪ್ರದೇಶದ 8 ಸೇರಿ ಒಟ್ಟು 106 ಮಂದಿಯನ್ನು ಬಂಧಿಸಲಾಗಿದೆ.

ದಾಳಿ ಯಾಕೆ?
ಭಯೋತ್ಪಾದನೆಗೆ ಧನಸಹಾಯ, ನಿಷೇಧಿತ ಸಂಸ್ಥೆಗಳ ಜೊತೆ ಸಂಪರ್ಕ, ದೇಶದಲ್ಲಿ ಗಲಭೆ ನಡೆಸಲು ಪ್ರಚೋದನೆ, ಮೂಲಭೂತವಾದಿ ವ್ಯಕ್ತಿಗಳಿಗೆ ತಮ್ಮ ಸಂಸ್ಥೆಯಲ್ಲಿ ಆಶ್ರಯ ಇತ್ಯಾದಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎನ್‌ಐಎ ದೇಶಾದ್ಯಂತ ದಾಳಿ ನಡೆಸಿದೆ.

Live Tv

Leave a Reply

Your email address will not be published.

Back to top button