Wednesday, 20th June 2018

Recent News

ಜೈಲಿಗೆ ಹೋದ ಎರಡೇ ದಿನಕ್ಕೆ ನಲಪಾಡ್ ಕೈಗೆ ಸಿಕ್ತು ಮೊಬೈಲ್ ಫೋನ್!

ಬೆಂಗಳೂರು: ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಜೈಲು ಸೇರಿದ್ದು, ಇದೀಗ ಜೈಲ್ ನಲ್ಲೂ ತಮ್ಮ ದರ್ಬಾರ್ ಮುಂದುವರೆಸಿದ್ದಾನೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ.

ಜೈಲಿಗೆ ಹೋದ ಎರಡೇ ದಿನಕ್ಕೆ ನಲಪಾಡ್ ಕೈಗೆ ಮೊಬೈಲ್ ಸಿಕ್ಕಿದೆ. ಗುರುವಾರ ಮಧ್ಯಾಹ್ನದಿಂದ ನಲಪಾಡ್ ಕೈಯಲ್ಲಿ ಮೊಬೈಲ್ ರಿಂಗ್ ಆಗ್ತಿತ್ತು ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ದೊರತಿದೆ. ಇದನ್ನೂ ಓದಿ: ಇಂದು ನಲಪಾಡ್ ಜಾಮೀನು ಅರ್ಜಿ ವಿಚಾರಣೆ- ವಿಪಕ್ಷಗಳು, ಮಾಧ್ಯಮದ ಮೇಲೆ ಗೂಬೆ ಕೂರಿಸಿದ ರೌಡಿ

ಈ ಮೂಲಕ ರೌಡಿ ನಲಪಾಡ್ ಗೆ ಜೈಲಿನಲ್ಲೂ ರಾಜಾತಿಥ್ಯ ಸಿಗುತ್ತಿದೆ ಎನ್ನಲಾಗಿದೆ. ಮೊಬೈಲ್ ಫೋನ್ ಮೂಲಕ ಸಂಪರ್ಕದಲ್ಲಿರೋ ನಲಪಾಡ್, ತನ್ನ ಸ್ನೇಹಿತರಿಗೆ ಕರೆ ಮಾಡಿ ಜಾಮೀನು ಅರ್ಜಿ ಬಗ್ಗೆ ಮಾಹಿತಿ ಪಡೆಯುತ್ತಿದ್ದಾನೆ. ಅಲ್ಲದೇ ಕಳೆದ ರಾತ್ರಿ ನಲಪಾಡ್‍ಗೆ ಅದ್ದೂರಿ ಭೋಜನ ವ್ಯವಸ್ಥೆ ಕೂಡ ಮಾಡಲಾಗಿದೆ. ಆರೋಪಿ ಮಂಜುನಾಥ್ ಮನೆಯಿಂದ ಆರೋಪಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಜೈಲಿನಲ್ಲೂ ಮುಂದುವರಿದ ನಲಪಾಡ್ ಪುಂಡಾಟ- ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದ ಸ್ನೇಹಿತ ಅಬ್ರಾಸ್ ಮೇಲೆ ಹಲ್ಲೆ

ಜಾಮೀನು ಅರ್ಜಿ ವಿಚಾರಣೆ: ಪ್ರಕರಣ ಸಂಬಂಧ ಇಂದು ರೌಡಿ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಜಾಮೀನು ಕೋರಿ ನಲಪಾಡ್ ಸಲ್ಲಿಸಿರುವ ಅರ್ಜಿಯ ಸಂಪೂರ್ಣ ವಿವರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಅರ್ಜಿಯಲ್ಲಿ ನಲಪಾಡ್ ವಿರೋಧ ಪಕ್ಷ, ಮಾಧ್ಯಮಗಳ ಮೇಲೆಯೇ ಗೂಬೆ ಕೂರಿಸಿದ್ದಾರೆ. ರಾಜಕೀಯ ಮೈಲೇಜ್‍ಗಾಗಿ ಶತ್ರುಗಳ ಈ ರೀತಿ ಮಾಡಿದ್ದಾರೆ. ಚುನಾವಣಾ ಸಮಯವಾದ್ದರಿಂದ ನನ್ನನ್ನು ಸೋಲಿಸಲು ಈ ರೀತಿಯ ಕುತಂತ್ರ ನಡೆದಿದೆ. ತಮ್ಮ ಕ್ಷೇತ್ರದ ಮತದಾರರನ್ನು ಸೆಳೆಯಲು ಪ್ರತಿಪಕ್ಷಗಳ ಹುನ್ನಾರ ನಡೆಸಿದೆ. ಅಲ್ಲದೇ ಮಾಧ್ಯಮಗಳು ಅನಾವಶ್ಯಕವಾಗಿ ಇದನ್ನು ಹೈಪ್ ಮಾಡಿದೆ. ನನ್ನ ಮೇಲೆ ದೂರು ದಾಖಲಿಸಿರುವುದು ಸುಳ್ಳು ಕೇಸ್ ಎಂದು ಉಲ್ಲೇಖಿಸಲಾಗಿದೆ. 10 ರಿಂದ 15 ಜನರಿಂದ ಹಲ್ಲೆ ಅಂತಿದೆ. ಆದ್ರೆ ನಾನೇ ಹಲ್ಲೆ ಮಾಡಿದ್ದೇನೆ ಅಂತಿಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ನಲಪಾಡ್ ಮನವಿ ಮಾಡಿದ್ದಾನೆ. ಇದನ್ನೂ ಓದಿ: ಅಪ್ಪನ ಕೋಟೆಯಲ್ಲಿ ಮೆರೆದವ ಕೊನೆಗೂ ಜೈಲುಪಾಲು: ಎರಡು ಕೋರ್ಟ್ ಕಲಾಪ ಹೀಗಿತ್ತು

Leave a Reply

Your email address will not be published. Required fields are marked *