Tuesday, 22nd May 2018

Recent News

ಉತ್ತರ ಆಯ್ತು, ಪ್ರಧಾನಿ ನರೇಂದ್ರ ಮೋದಿ ಕಣ್ಣು ಈಗ ದಕ್ಷಿಣ ಭಾರತದತ್ತ!

ನವದೆಹಲಿ: ಉತ್ತರದಲ್ಲಿ ಬಿಜೆಪಿಯ ದಿಗ್ವಿಜಯದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ದಕ್ಷಿಣ ಭಾರತದತ್ತ ಪಕ್ಷ ಸಂಘಟನೆಗೆ ಮುಂದಾಗಿದ್ದು, ಶುಕ್ರವಾರ ವಿಶೇಷವಾಗಿ ದಕ್ಷಿಣ ಭಾರತದ ಸಂಸದರ ಸಭೆಯನ್ನು ಕರೆದಿದ್ದಾರೆ.

ಈಗಾಗಲೇ ಉತ್ತರಪ್ರದೇಶ, ಮಣಿಪುರ, ಉತ್ತರಾಖಂಡ್ ಮತ್ತು ಗೋವಾ ರಾಜ್ಯಗಳಲ್ಲಿ ಸರ್ಕಾರ ರಚಿಸಿರುವ ಬಿಜೆಪಿ ಈಗ ಉಳಿದ ದಕ್ಷಿಣ ರಾಜ್ಯಗಳತ್ತ ಮೋದಿ ಮತ್ತು ಅಮಿತ್ ಶಾ ಚಿತ್ತವನ್ನು ಹರಿಸಿದ್ದು, ಇದರ ಪೂರ್ವಭಾವಿಯಾಗಿ ಶುಕ್ರವಾರ ದೆಹಲಿಯ ಲೋಕಮಾನ್ಯ ತಿಲಕ್ ರಸ್ತೆಯಲ್ಲಿರುವ ಪ್ರಧಾನಿಯವರ ಮನೆಯಲ್ಲಿ ಬೆಳಗ್ಗೆ ಎಂಟು ಗಂಟೆಗೆ ದಕ್ಷಿಣ ಭಾರತದ ಸಂಸದರ ಸಭೆ ನಡೆಯಲಿದೆ.

ರಾಜ್ಯಗಳಲ್ಲಿ ನಡೆಯುವ ಮುಂದಿನ ವಿಧನಸಭಾ ಚುನಾವಣೆ ಕುರಿತಾಗಿ ಸಭೆ ಚರ್ಚೆ ನಡೆಯಲಿದೆ. ರಾಜ್ಯ ರಾಜಕೀಯ ಬೆಳವಣಿಗೆ ಮತ್ತು ಕೇಂದ್ರದಿಂದ ಬಂದಿರುವ ಅನುದಾನವನ್ನು ಸರ್ಕಾರ ಎಷ್ಟು ಬಳಸಿಕೊಂಡಿದೆ ಎನ್ನುವುದರ ಬಗ್ಗೆ ಚರ್ಚೆ ನಡೆಯಲಿದ ಎಂದು ಹೇಳಲಾಗುತ್ತಿದೆ.

ರಾಜ್ಯದ ಇಬ್ಬರು ನಾಯಕರಿಗೆ ಸಂಪುಟದಲ್ಲಿ ಸಚಿವ ಸ್ಥಾನವನ್ನು ಮೋದಿಯವರು ನೀಡಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿಗೆ ನಾಳಿನ ಸಭೆಯಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ.

ಮುಂದಿನ ಚುನಾವಣೆಗೆ ಮೋದಿಯವರು ಸಂಸದರಿಂದ ಸಲಹೆಗಳನ್ನು ಪಡೆಯಲಿದ್ದು, ಚುನಾವಣಾ ರೂಪುರೇಷಗಳನ್ನು ಸಿದ್ದಪಡಿಸಲಿದ್ದಾರೆ. ಈ ಸಭೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯದ ಸಂಸದರು ಭಾಗಿಯಾಗಲಿದ್ದಾರೆ. ಕರ್ನಾಟಕ ರಾಜ್ಯದ ಬಿಜೆಪಿ ನಾಯಕರಾದ ಯಡಿಯೂರಪ್ಪ, ಅನಂತಕುಮಾರ್, ಸದಾನಂದಗೌಡ, ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

 

Leave a Reply

Your email address will not be published. Required fields are marked *