Wednesday, 23rd May 2018

Recent News

ಜಿಯೋ ಸ್ಫೂರ್ತಿ- ಗ್ರಾಹಕರಿಗೆ ಅನ್‍ಲಿಮಿಟೆಡ್ ಪಾನಿಪುರಿ ಆಫರ್ ನೀಡಿದ ವ್ಯಾಪಾರಿ

ಅಹಮದಾಬಾದ್: ರಿಲಯನ್ಸ್ ಜಿಯೋ ಗ್ರಾಹಕರಿಗೆ ಉಚಿತ ವಾಯ್ಸ್ ಕಾಲಿಂಗ್, ದೇಶದೆಲ್ಲೆಡೆ ಉಚಿತ ರೋಮಿಂಗ್, ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದ ಡಾಟಾ ಯೋಜನೆ ಹೀಗೆ ಅನೇಕ ಆಫರ್‍ಗಳನ್ನು ನೀಡಿ ಗ್ರಾಹಕರನ್ನ ಸೆಳೆದಿದೆ. ಜಿಯೋ ಯೋಜನೆಯಿಂದ ಸ್ಫೂರ್ತಿಗೊಂಡ ಗುಜರಾತ್‍ನ ವ್ಯಾಪಾರಿಯೊಬ್ಬರು ತನ್ನ ಗ್ರಾಹಕರಿಗೂ ಬಂಪರ್ ಆಫರ್ ನೀಡಿದ್ದಾರೆ. ಇಲ್ಲಿನ ಪಾನಿಪುರಿ ವ್ಯಾಪಾರಿಯೊಬ್ಬರು ಅನಿಯಮಿತ ಪಾನಿಪುರಿ ಯೋಜನೆಯನ್ನು ಪರಿಚಯಿಸಿದ್ದಾರೆ.

ರಿಲಯನ್ಸ್ ಜಿಯೋ 4ಜಿ ಯೋಜನೆಯಿಂದ ಸ್ಫೂರ್ತಿ ಪಡೆದ ಪೋರ್‍ಬಂದರ್ ಮೂಲದ ವ್ಯಾಪಾರಿ ರವಿ ಜಗದಂಬಾ ತನ್ನ ಗ್ರಾಹಕರಿಗೆ ದೈನಿಕ ಹಾಗೂ ಮಾಸಿಕ ಪಾನಿಪುರಿ ಆಫರ್ ನೀಡಿದ್ದಾರೆ. ಅದರಂತೆ ಗ್ರಾಹಕರು ಇವರ ಸ್ಟಾಲ್‍ನಲ್ಲಿ ದಿನಕ್ಕೆ 100 ರೂ. ಹಾಗೂ ತಿಂಗಳಿಗೆ 1000 ರೂ ನೀಡಿ ತಮಗೆ ತೃಪ್ತಿಯಾಗುವಷ್ಟು ಪಾನಿಪುರಿ ಸವಿಯಬಹುದು.

ಇದನ್ನೂ ಓದಿ: ಜಿಯೋ ಬಳಕೆದಾರರಿಗೆ ಮತ್ತೊಂದು ಗುಡ್‍ನ್ಯೂಸ್

ರಿಲಯನ್ಸ್ ಜಿಯೋನಂತೆಯೇ ರವಿ ಅವರ ವ್ಯಾಪಾರ ಜೋರಾಗಿದೆ. ಈ ಸ್ಕೀಮ್ ರವಿ ಅವರಿಗೆ ಲಾಭದಾಯಕವಾಗಿದ್ದು, ಜಿಯೋ ಪಾನಿಪುರಿ ಸ್ಕೀಮ್ ಪರಿಚಯಿಸಿದ ನಂತರ ಗ್ರಾಹಕರೂ ಕೂಡ ಹೆಚ್ಚಾಗಿದ್ದಾರಂತೆ.

ಗ್ರಾಹಕರನ್ನ ಸೆಳೆಯೋಕೆ ರವಿ ಅವರು ಜಿಯೋ ಥೀಮ್‍ನ ಪಾನಿಪುರಿ ಸ್ಟಾಲ್ ಪರಿಚಯಿಸಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಗೆ ಉಚಿತ ಡೇಟಾ ನೀಡಿದ್ದ ಜಿಯೋಗೆ ಆಗಿರುವ ನಷ್ಟ ಎಷ್ಟು ಗೊತ್ತೆ?

Leave a Reply

Your email address will not be published. Required fields are marked *