ವಿಡಿಯೋ: ವ್ಯಕ್ತಿಯ ಹೊಟ್ಟೆಯಿಂದ ಜೀವಂತ ಈಲ್ ಮೀನು ಹೊರತೆಗೆದ ವೈದ್ಯರು!

ಬೀಜಿಂಗ್: ಅಪ್ಪಿ ತಪ್ಪಿ ಚಿಕ್ಕ ಮೀನನ್ನ ನುಂಗಿದ್ರೆ ಏನಾಗುತ್ತೆ? ಹೀಗೆ ಊಹೆ ಮಾಡಿಕೊಂಡ್ರೇನೇ ಹೊಟ್ಟೆಯಲ್ಲಿ ಗುಳುಗುಳು ಅನುಭವವಾಗುತ್ತೆ. ಹೀಗಿರೋವಾಗ ದೊಡ್ಡ ಈಲ್ ಮೀನೊಂದು ವ್ಯಕ್ತಿಯ ಹೊಟ್ಟೆ ಸೇರಿತ್ತು ಅಂದ್ರೆ ನೀವು ನಂಬಲೇಬೇಕು.

ಹೌದು. ವೈದ್ಯರು ಜೀವಂತ ಈಲ್ ಮೀನನ್ನ ವ್ಯಕ್ತಿಯ ಹೊಟ್ಟೆಯಿಂದ ಹೊರತೆಗೆಯೋ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಕ್ತಿ ಹೊಟ್ಟೆ ಸೇರಿದ್ದ ಮೀನನ್ನ ವೈದ್ಯರು ಹೊರತೆಗೆದಿದ್ದು, ಆ ಮೀನು ಇನ್ನೂ ಜೀವಂತವಾಗಿರುವಂತೆ ವಿಡಿಯೋದಲ್ಲಿ ಕಾಣಿಸುತ್ತದೆ. ಈ ವಿಡಿಯೋವನ್ನ ಚೀನಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.

ಮೀನು ಹೊಟ್ಟೆ ಸೇರಿದು ಹೇಗೆ?: ಮಲಬದ್ಧತೆಯಿಂದ ಬಳಲುತ್ತಿದ್ದ ಚೀನಾದ 49 ವರ್ಷದ ವ್ಯಕ್ತಿಯೊಬ್ಬರು ನಾಟಿ ವೈದ್ಯ ಚಿಕಿತ್ಸೆಗೆ ಮೊರೆ ಹೋಗಿದ್ರು. ಅದಕ್ಕಾಗಿ ಈಲ್ ಮೀನನ್ನ ಗುದದ್ವಾರದಲ್ಲಿ ಇಟ್ಟುಕೊಂಡಿದ್ದರಂತೆ. ಆದ್ರೆ ಈ ಪ್ಲಾನ್ ವರ್ಕೌಟ್ ಆಗಿಲ್ಲ. ಆ ವ್ಯಕ್ತಿಗೆ ಹೊಟ್ಟೆ ನೋವು ಉಲ್ಬಣಿಸಿ ಕೊನೆಗೆ ಆಸ್ಪತ್ರೆಗೆ ಓಡಿದ್ದಾರೆ. ಹೇಗಾದ್ರೂ ಮಾಡಿ ಮೀನನ್ನ ಹೊರತೆಗೆಯಿರಿ ಅಂತ ಕೇಳಿಕೊಂಡಿದ್ದಾರೆ. ಅದರಂತೆ ವೈದ್ಯರು ವ್ಯಕ್ತಿಯ ಹೊಟ್ಟೆಯಲ್ಲಿದ್ದ ಸುಮಾರು ಒಂದೂವರೆ ಅಡಿಯಷ್ಟು ಉದ್ದದ ಮೀನನ್ನ ಆಪರೇಷನ್ ಮಾಡಿ ಹೊರತೆಗೆದಿದ್ದಾರೆ.

ಮೊದಲಿಗೆ ಮೀನು ಹೊಟ್ಟೆ ಸೇರಿದ್ದು ಹೇಗೆ ಅಂತ ಕೇಳಿದಾಗ ಮೀನು ಈಜಿಕೊಂಡು ತಾನಾಗೇ ದೇಹದೊಳಗೆ ಹೋಯಿತು ಎಂದು ಆ ವ್ಯಕ್ತಿ ರೀಲ್ ಬಿಟ್ಟಿದ್ದರು. ಆದ್ರೆ ಕೊನೆಗೆ ತಾನೇ ಮಾಡಿದ ಎಡವಟ್ಟಿನಿಂದ ಹೀಗಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಇವೆಲ್ಲದರ ನಡುವೆ ಆತನ ಪ್ಯಾಂಕ್ರಿಯಾಸ್‍ಗೆ ತೊಂದರೆಯಾಗಿದೆ ಎಂದು ಮಿರರ್ ಪತ್ರಿಕೆಯಲ್ಲಿ ವರದಿಯಾಗಿದೆ.

You might also like More from author

Leave A Reply

Your email address will not be published.

badge