Monday, 25th September 2017

Recent News

30 mins ago

ಕಣ್ಣಿಗೆ ಖಾರದ ಪುಡಿ ಎರಚಿ, ಮಾರಾಕಾಸ್ತ್ರಗಳಿಂದ ಕೊಚ್ಚಿ ಶ್ರೀರಾಮಸೇನೆ ಕಾರ್ಯಕರ್ತನ ಬರ್ಬರ ಹತ್ಯೆ

ಬೆಳಗಾವಿ: ಕಣ್ಣಿಗೆ ಖಾರದ ಪುಡಿ ಎರಚಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಶ್ರೀ ರಾಮಸೇನೆ ಕಾರ್ಯಕರ್ತರೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಅಪ್ಸರಾ ಕೂಟದಲ್ಲಿ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ಶ್ರೀರಾಮ ಸೇನೆ ಕಾರ್ಯಕರ್ತನನ್ನು ರೋಹಿತ್ ಪಾಟೀಲ್ (23) ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ರೋಹಿತ್ ಪಾಟೀಲ್ ಅವರ ಜೊತೆಯಲ್ಲಿದ್ದ ಅಕ್ಷಯ್ ಘೋರ್ಪಡೆಗೆ ಗಂಭೀರ ಗಾಯವಾಗಿದ್ದು, ಗೋಕಾಕ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ […]

2 hours ago

ಮುಂಬರೋ ಚುನಾವಣೆಗೆ ಬಿಜೆಪಿ ರಣಕಹಳೆ – ಬೆಂಗ್ಳೂರಲ್ಲಿ ಬೈಕ್ ರ‍್ಯಾಲಿಗೆ ಪ್ಲಾನ್

ಬೆಂಗಳೂರು: ಮಂಗಳೂರು ಚಲೋ ಬೈಕ್ ಜಾಥಾ ವಿಫಲವಾದ ಬೆನ್ನಲ್ಲೇ ಮತ್ತೊಂದು ಬೈಕ್ ಜಾಥಾ ನಡೆಸಲು ರಾಜ್ಯ ಬಿಜೆಪಿ ನಾಯಕರು ಚಿಂತಿಸಿದ್ದಾರೆ. ರಾಜ್ಯದಲ್ಲಿ ಮತ್ತೊಂದು ಜಾಥಾ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಭಾನುವಾರ ರಾತ್ರಿ ನವದೆಹಲಿಯಲ್ಲಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ನಿವಾಸದಲ್ಲಿ ನಡೆಸಲಾದ ಕೋರ್ ಕಮೀಟಿ ಸಭೆಯಲ್ಲಿ ಈ ಬಗ್ಗೆ...

ಆಸೀಸ್ ಸೋಲಿಸಿ ಏಕದಿನದಲ್ಲಿ ನಂಬರ್ ಒನ್ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

13 hours ago

ದುಬೈ: ಇಂದೋರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು 5 ವಿಕೆಟ್ ಗಳೊಂದಿಗೆ ಗೆಲ್ಲುವ ಮೂಲಕ ಟೀಂ ಇಂಡಿಯಾ ಈಗ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಸೆಪ್ಟೆಂಬರ್ 24ಕ್ಕೆ ಅಂತ್ಯಗೊಂಡ ಹೊಸ ಶ್ರೇಯಾಂಕ ಪಟ್ಟಿಯ...

ಇಂದೋರ್ ಭಾರತದ ಪಾಲಿಗೆ ಅದೃಷ್ಟದ ತಾಣ ಅನ್ನೋದು ಮತ್ತೆ ಸಾಬೀತಾಯ್ತು!

13 hours ago

ಇಂದೋರ್: ಆಸ್ಟ್ರೇಲಿಯಾವನ್ನು 5 ವಿಕೆಟ್ ಗಳಿಂದ ಬಗ್ಗು ಪಡೆಯುವ ಮೂಲಕ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ ಭಾರತದ ಪಾಲಿಗೆ ಅದೃಷ್ಟದ ತಾಣ ಎನ್ನುವುದು ಮತ್ತೆ ಸಾಬೀತಾಗಿದೆ. ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದ ದಾಖಲೆಗೆ ಭಾರತ ಪಾತ್ರವಾಗಿದೆ. ಇದುವರೆಗೆ...

ಆಸೀಸ್‍ಗೆ ಮತ್ತೆ ಮುಖಭಂಗ: ಸರಣಿ ಗೆದ್ದ ಟೀಂ ಇಂಡಿಯಾ

13 hours ago

ಇಂದೋರ್: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯವನ್ನು ಭಾರತ 5 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು ಗೆದ್ದುಕೊಂಡಿದೆ. ಗೆಲ್ಲಲು 294 ರನ್ ಗಳ ಸವಾಲು ಸ್ವೀಕರಿಸಿದ ಭಾರತ 5 ವಿಕೆಟ್ ಗಳನ್ನು ಕಳೆದುಕೊಂಡು 47.5 ಓವರ್ ಗಳಲ್ಲಿ ಗುರಿಯನ್ನು ಮುಟ್ಟಿತು....

ಗೌರಿಗೆ ಬಿದ್ದಿರುವ ಗುಂಡು ನನಗೂ ಬೀಳಬಹುದು: ದಿನೇಶ್ ಅಮೀನ ಮಟ್ಟು

19 hours ago

ಮಂಗಳೂರು: ಮೊನ್ನೆ ಗೌರಿಗೆ ಬಿದ್ದಿರುವ ಗುಂಡು ನನಗೂ ಬೀಳಬಹುದು. ನನ್ನನ್ನು ಮಟ್ಟ ಹಾಕಲು ಆರ್‍ಎಸ್‍ಎಸ್ ಸಭೆಯಲ್ಲಿ ಚರ್ಚೆ ನಡೆದಿದೆ. ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯವಾಗಿದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ ಮಟ್ಟು ಹೇಳಿದ್ದಾರೆ. ಇಂಟಲಿಜೆನ್ಸ್...

ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ

23 hours ago

ಬೆಂಗಳೂರು: ನವವಿವಾಹಿತೆಯೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯದ ನೆಲಮಂಗಲ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ನಡೆದಿದೆ. 22 ವರ್ಷದ ನೇತ್ರಾವತಿ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಶನಿವಾರ ಮಧ್ಯಾಹ್ನ ನೇತ್ರಾವತಿ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರ ಅಸ್ವಸ್ಥರಾದ...

ಪ್ರೀತಿಸಿ ಮದುವೆಯಾದ ಜೋಡಿಗೆ ಗ್ರಾಮದಿಂದ ಬಹಿಷ್ಕಾರ

1 day ago

ಕೊಪ್ಪಳ: ಪ್ರೀತಿಸಿ ಮದುವೆಯಾದ ಜೋಡಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿದ ಘಟನೆ ತಡವಾಗಿ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಡ್ಡಿರಾಂಪೂರ ನಿವಾಸಿಗಳಾದ ಪರಶುರಾಮ್ ಮತ್ತು ಸ್ವರೂಪಾರಾಣಿ ದಂಪತಿಯನ್ನ ಕಳೆದ ಎರಡು ತಿಂಗಳನಿಂದ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ. ಬಹಿಷ್ಕಾರ ಹಾಕಿದ್ದರಿಂದ...