Saturday, 23rd June 2018

Recent News

1 day ago

ಮರಿ ಶ್ವಾನ ಬದುಕಿನ ನೊಗಕ್ಕೆ ಹೆಗಲು ಕೊಡುತ್ತಿದೆ ಹಂದಿ

ಯಾದಗಿರಿ: ತಾಯಿಯನ್ನು ಕಳೆದು ಕೊಂಡ ನಾಯಿ ಮರಿಯೊಂದು ಬದುಕಲು ಪರದಾಟ ನಡೆಸಿದ್ದ ವೇಳೆ ಹಂದಿಯೊಂದು ಹಾಲು ಉಣಿಸಿ ತಾಯಿ ವಾತ್ಸಲ್ಯ ತೋರುತ್ತಿರುವ ಘಟನೆ ಜಿಲ್ಲೆಯ ಶಹಾಪುರ ಪಟ್ಟಣದ ಆಶ್ರಯ ಕಾಲೋನಿ ಘಟನೆ ನಡೆದಿದೆ. ಸುಮಾರು ಒಂದು ತಿಂಗಳಿಂದ ನಾಯಿ ಮರಿಗೆ ಹಂದಿ ನಿತ್ಯವು ಹಾಲು ಉಣಿಸುತ್ತಿದ್ದು, ಮಾತೃ ಹೃದಯ ನೋಡುಗರನ್ನು ನಿಬ್ಬೆರಗಾಗಿ ನೋಡುವಂತೆ ಮಾಡಿದೆ. ನಾಯಿ ತನ್ನ ಮರಿಗೆ ಜನ್ಮ ನೀಡಿದ ಬಳಿಕ ಅಪಘಾತದಲ್ಲಿ ಸಾವನಪ್ಪಿದೆ. ಹೀಗಾಗಿ ತಬ್ಬಲಿಯಾದ ನಾಯಿ ಮರಿಗೆ ಹಂದಿ ತಾಯಿ ಮಮಕಾರ ತೋರಿಸಿ […]

3 days ago

ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗ್ತಿದ್ದ ಟೆಂಪೋ ಪಲ್ಟಿ- ಇಬ್ಬರ ದುರ್ಮರಣ

ಯಾದಗಿರಿ: ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟೆಂಪೋ ವಾಹನವೊಂದು ಪಲ್ಟಿಯಾಗಿ ಇಬ್ಬರು ಮೃತಪಟ್ಟ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನ ಸಿದ್ದಾಪುರ ಹತ್ತಿರ ನಡೆದಿದೆ. ಸಾಬಣ್ಣ, ನಾಗಮ್ಮ ಮೃತಪಟ್ಟ ಇಬ್ಬರು ಕಾರ್ಮಿಕರು. ಮೃತರು ಗಾಜರಕೋಟ್ ಗ್ರಾಮದ ನಿವಾಸಿಗಳಾಗಿದ್ದು, ಗಾಜರಕೋಟ್ ಗ್ರಾಮದಿಂದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದುಗನೂರ ಗ್ರಾಮದ ಕಡೆ ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದರು. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು,...

ವಾಕಿಂಗ್ ಹೋಗಿದ್ದವರು ಹೆಣವಾಗಿ ರಸ್ತೆಯಲ್ಲಿ ಬಿದ್ದರು!

1 week ago

ಯಾದಗಿರಿ: ಬೆಳಗ್ಗೆ ವಾಕಿಂಗ್ ಹೋಗಿದ್ದ ಇಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ದಾರಿಯಲ್ಲಿಯೇ ಮೃತಪಟ್ಟ ಘಟನೆ ಸುರಪುರ ತಾಲೂಕಿನ ಭಿ.ಗುಡಿ ಬಳಿ ನಡೆದಿದೆ. ಗಂಗಾಧರ್‍ಸ್ವಾಮಿ, ಮೋಹನ್(38) ಮೃತ ದುರ್ದೈವಿಗಳು. ಮದುವೆ ನಿಮಿತ್ತ ಗಂಗಾಧರ್ ಸ್ವಾಮಿ ಹಾಗೂ ಮೋಹನ್ ಭಿ.ಗುಡಿ ಗ್ರಾಮಕ್ಕೆ ಬಂದಿದ್ದರು....

ಬಹಿರ್ದೆಸೆಗೆ ತೆರಳಿದ್ದ ಯುವತಿಯನ್ನು ಸಿನಿಮಾ ಸ್ಟೈಲಲ್ಲಿ ಕಿಡ್ನಾಪ್ ಮಾಡ್ದ!

1 week ago

ಯಾದಗಿರಿ: ಯುವತಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಯುವಕನೊಬ್ಬ ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಿದ ಘಟನೆ ಯಾದಗಿರಿ ನಗರದ ಗಂಜ್ ಬಳಿಯ ಬುಡ್ಗಜಂಗಮ ಕಾಲೋನಿಯಲ್ಲಿ ನಡೆದಿದೆ. ಬಾಬು(25) ಯುವತಿಯನ್ನು ಕಿಡ್ನಾಪ್ ಮಾಡಿದ ಯುವಕ. ಕಳೆದ 10ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಯುವತಿ...

ಹುಳು ತುಂಬಿದ ನೀರನ್ನೇ ಕುಡಿಯುವ ದುಸ್ಥಿತಿ ಯಾದಗಿರಿಯ ಜೋಗಂಡಭಾವಿ ಗ್ರಾಮಸ್ಥರದ್ದು!

3 weeks ago

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಜೋಗಂಡಭಾವಿ ಗ್ರಾಮಸ್ಥರಿಗೆ ಹುಳುಗಳಿಂದಲೇ ಆವೃತವಾಗಿರುವ ನೀರಿನ್ನೇ ಕುಡಿಯುವಂತಹ ದುಸ್ಥಿತಿ ಎದುರಾಗಿದೆ. ಈ ಗ್ರಾಮದಲ್ಲಿರುವುದು ಒಂದೇ ಬಾವಿ. ಈ ಬಾವಿಯಿಂದ ನೀರಿನ ಟ್ಯಾಂಕ್ ಮೂಲಕ ನೀರು ಪೂರೈಸಲಾಗುತ್ತೆ. ಸರ್ಕಾರ ಕೋಟಿ ಕೋಟಿ ರೂಪಾಯಿ ಕುಡಿಯುವ ನೀರು ಯೋಜನೆಗೆ ಅನುದಾನ...

ಗುಜರಿ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

3 weeks ago

ಯಾದಗಿರಿ: ಗುಜರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಗುಜರಿ ಸಾಮಾನು ಸುಟ್ಟು ಕರಕಲಾಗಿರುವ ಘಟನೆ ನಗರದ ಮುಸ್ಲಿಂಪುರಾ ಬಡಾವಣೆಯಲ್ಲಿ ನಡೆದಿದೆ. ಅಂಗಡಿಯಲ್ಲಿ ಎರಡ್ಮೂರು ಘಂಟೆಗಳ ಕಾಲ ಭೀಕರವಾಗಿ ಅಗ್ನಿ ಆವರಿಸಿದ ಪರಿಣಾಮ ಪಕ್ಕದಲ್ಲಿರುವ ಮೂರು ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ....

ಸತತ 10 ವರ್ಷ ಹೋರಾಡಿ ಕೊನೆಗೂ ಸರ್ಕಾರಿ ಹುದ್ದೆ ಸಿಕ್ತು!

4 weeks ago

ಯಾದಗಿರಿ:“ಕಾನೂನ್ ಕೆ ಘರ್ ಮೆ ದೇರ್ ಹೈ, ಲೇಕಿನ್ ಅಂಧೇರ್ ನಹೀಂ?”(ನ್ಯಾಯ ಸಿಗೋದು ತಡವಾಗಬಹುದು, ಅದ್ರೆ, ಸತ್ಯವೇ ಗೆಲ್ಲೋದು, ಕತ್ತಲು ಆವರಿಸೋಲ್ಲ) ಇಂತಹುದ್ದೊಂದು ಪ್ರಕರಣಕ್ಕೆ ಸಾಕ್ಷಿಯಾಗಿದ್ದು ಯಾದಗಿರಿ ಜಿಲ್ಲೆಯ ಬಡ ಯುವಕನೊಬ್ಬನ ಸತತ ಹೋರಾಟ. ನ್ಯಾಯಯುತವಾಗಿ ತನಗೆ ಸಿಗಬೇಕಾಗಿದ್ದ ಸರ್ಕಾರಿ ಶಿಕ್ಷಕ...

ಮಕ್ಕಳ ಕಳ್ಳತನ ವದಂತಿ- ಮೂವರಿಗೆ ಬಿತ್ತು ಸಖತ್ ಗೂಸಾ

1 month ago

ಯಾದಗಿರಿ: ರಾಜ್ಯದಲ್ಲಿ ಮಕ್ಕಳ ಕಳ್ಳತನ ವದಂತಿ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಮೂರು ಜನರಿಗೆ ಮಕ್ಕಳ ಕಳ್ಳರೆಂಬ ಸಂಶಯದಿಂದ ಗ್ರಾಮಸ್ಥರು ಅಮಾನವೀಯ ರೀತಿಯಲ್ಲಿ ಥಳಿಸಿದ್ದಾರೆ. ಈ ಘಟನೆ ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ಗುಂಜನೂರ ಗ್ರಾಮದಲ್ಲಿ ನಡೆದಿದೆ. ವಿಕಾರಬಾದ ಮೂಲದ ಬಾಲಕೃಷ್ಣ ಸೇರಿದಂತೆ...