Wednesday, 19th February 2020

Recent News

21 hours ago

ದಾಖಲೆಯಿಲ್ಲದೇ ಸಾಗಿಸ್ತಿದ್ದ 56.96 ಲಕ್ಷ ರೂ. ವಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚಿಪಗಿ ನಾಕಾ ಬಳಿ ಕಾರಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಅಂದಾಜು 56 ಲಕ್ಷ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಿದ್ದಾಪುರ ತಾಲೂಕಿನ ಹೇರೂರಿನ ಅಬ್ದುಲ್ ಮುತಲಿಫ್ (31) ಹಾಗೂ ಅಬ್ದುಲ್ ಸೌದ್ (42) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಅಬ್ದುಲ್ ಮುತಲಿಫ್ ಮತ್ತು ಅಬ್ದುಲ್ ಸೌದ್ ಇವರು ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ಕಾರಿನಲ್ಲಿ ಹಣ ಸಾಗಿಸುತ್ತಿದ್ದರು. ಆದರೆ ಚಿಪಗಿ ನಾಕಾ ಬಳಿ […]

7 days ago

ಜೋಳದ ಹೊಲದಲ್ಲಿ ಹುಲಿ ಪತ್ತೆ- ವ್ಯಾಘ್ರವನ್ನ ಸೆರೆಹಿಡಿಯಲು ಅರಣ್ಯ ಇಲಾಖೆ ಹರಸಾಹಸ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮತ್ತು ಧಾರವಾಡದ ಕಲಘಟಗಿ ತಾಲೂಕಿನ ಗಡಿ ಭಾಗದ ಬೆಂಡ್ಲಗಟ್ಟಿ ಗ್ರಾಮದ ಹುಲಿ ಕಾಣಿಸಿಕೊಂಡಿತ್ತು. ಗೋವಿನಜೋಳದ ಗದ್ದೆಯೊಂದರಲ್ಲಿ ಹುಲಿ ಕಂಡಿದ್ದಕ್ಕೆ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಬೆಂಡ್ಲಗಟ್ಟಿ ಗ್ರಾಮದ ಜಮೀನಿನ ಮಾಲೀಕ ತಮ್ಮ ಗೋವಿನ ಜೋಳದ ಬೆಳೆಗೆ ನೀರು ಹರಿಸಲು ತೆರೆಳಿದ್ದರು. ಈ ವೇಳೆ ಕೆಲಸದಲ್ಲಿ ನಿರತರಾಗಿದ್ದ ಮಾಲೀಕ...

ರೋಗ ತಡೆಗೆ ಹೊಟ್ಟೆಗೆ ಸೂಜಿದಾರ- ತಲೆಮೇಲೆ ದೀಪ ಹೊತ್ತು ದಾಡ್ ದೇವಿಯ ದರ್ಶನ

1 week ago

– ಕಾರವಾರ, ಗೋವಾ ಗಡಿಯಲ್ಲಿ ವಿಚಿತ್ರ ಆಚರಣೆ ಕಾರವಾರ: ಕೊರೊನ ವೈರಸ್‍ನಂತಹ ಮಾರಣಾಂತಿಕ ರೋಗಗಳು ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡ್ತಿದೆ. ಇಂತಹ ರೋಗ-ರುಜಿನಗಳು ತಮಗೆ ಬರಬಾರದೆಂಬ ಉದ್ದೇಶದಿಂದ ಊರಿನ ಜನ ತಮ್ಮ ಹೊಟ್ಟೆಗೆ ಸೂಜಿದಾರ ಪೋಣಿಸಿಕೊಂಡ್ರೆ, ಮಹಿಳೆಯರು ತಲೆ ಮೇಲೆ...

ಕಾಂಗ್ರೆಸ್‍ನವರದ್ದು ತಿರುಕನ ಕನಸು- ಜಿ.ಪರಮೇಶ್ವರ್‌ಗೆ ಬಿಎಸ್‍ವೈ ಟಾಂಗ್

2 weeks ago

– ಸೋಮವಾರವೇ ನೂತನ ಸಚಿವರಿಗೆ ಖಾತೆ ಹಂಚಿಕೆ ಕಾರವಾರ: ಕಾಂಗ್ರೆಸ್‍ನವರದ್ದು ತಿರುಕನ ಕನಸಾಗಿದೆ. ಅವರ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಕದಂಬೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ,...

ಕಾರವಾರದ ಯುವಕನಿಗೆ ದಿಗ್ಭಂಧನ – ಪೋಷಕರು ಜಿಲ್ಲಾಡಳಿತದ ಮೊರೆ

2 weeks ago

ಕಾರವಾರ: ಕೊರೊನಾ ವೈರಸ್ ಆತಂಕ ಹಿನ್ನೆಲೆಯಲ್ಲಿ ಜಪಾನಿನ ಯುಕೋಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಯುವಕನಿದ್ದ ಹಡಗನ್ನು ತಡೆ ಹಿಡಿದು ಘಟನೆ ನಡೆದಿದ್ದು, ತಮ್ಮ ಮಗನನ್ನು ರಕ್ಷಿಸಿ ಕರೆ ತರುವಂತೆ ಅವರ ಪೋಷಕರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಜಪಾನಿನ ಡೈಮಂಡ್ ಪ್ರಿನ್ಸಸ್...

ವಿಷ ಸರ್ಪಗಳ ರಕ್ಷಣೆ ಮಾಡುತ್ತಿದ್ದಾಳೆ 12 ವರ್ಷದ ಪೋರಿ

2 weeks ago

– ಈಕೆ ಹಿಡಿಯುವ ಹಾವು ನೋಡಿದ್ರೆ ಮೈ ಝಲ್ ಎನ್ನುತ್ತೆ ಕಾರವಾರ: ಹಾವು ಎಂದ್ರೆ ಎಂಥವರಿಗೂ ಭಯ. ಆದರೆ ಇಲ್ಲೊಬ್ಬ ಪುಟ್ಟ ಬಾಲಕಿಗೆ ಹಾವು ಅಂದ್ರೆ ಪಂಚಪ್ರಾಣ. ಕಾರ್ಕೋಟಕ ವಿಷದ ಹಾವನ್ನು ಸಹ ಮುದ್ದಿಸುವ ಈ ಬಾಲಕಿ ಹಾವುಗಳ ರಕ್ಷಣೆಗೆ ನಿಂತಿದ್ದಾಳೆ....

ಜನ ನಮ್ಮನ್ನು ಮಾನ್ಯ ಮಾಡಿ ಸಿದ್ದರಾಮಯ್ಯರನ್ನ ಅಮಾನ್ಯ ಮಾಡಿದ್ದಾರೆ: ಶಿವರಾಮ್ ಹೆಬ್ಬಾರ್

2 weeks ago

ಕಾರವಾರ: ಪಕ್ಷಾಂತರ ಮಾಡಿದ ಶಾಸಕರಿಗೆ ಸಚಿವ ಸ್ಥಾನ ನೀಡಬಾರದು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ತಿರುಗೇಟು ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತನಾಡಿದ ಅವರು, ನಮ್ಮನ್ನು ಮಂತ್ರಿ ಮಾಡುವುದಿಲ್ಲ ಎಂಬ ಕಾಲ...

ದೇವರ ದುಡ್ಡಲ್ಲಿ ಕದಂಬೋತ್ಸವ- ಕಲಾವಿದರನ್ನು ಕರೆಸಲು ಕಾಣಿಕೆ ಹಣ ಕೇಳಿದ ಜಿಲ್ಲಾಡಳಿತ!

3 weeks ago

ಕಾರವಾರ: ಪಂಪನ ನಾಡು ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವಕ್ಕೆ ತಲಾ ಒಂದು ಲಕ್ಷ ರೂಪಾಯಿಗಳ ದೇಣಿಗೆ ನೀಡುವಂತೆ ತನ್ನ ಇಲಾಖೆಗೆ ಒಳಪಡುವ ಎ ಮತ್ತು ಬಿ ವರ್ಗದ ದೇವಸ್ಥಾನಗಳಿಗೆ ಮುಜರಾಯಿ ಇಲಾಖೆ ಸೂಚನೆ ನೀಡಿದೆ. ಮುಜರಾಯಿ ಇಲಾಖೆಯ ಈ...