Saturday, 23rd June 2018

Recent News

2 weeks ago

ಖಾಸಗಿ ಶಾಲೆಯ ಮೇಲ್ಛಾವಣಿ ಕುಸಿತ- ತಪ್ಪಿತು ಭಾರೀ ಅನಾಹುತ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟಾದಲ್ಲಿ ಖಾಸಗಿ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಸ್ವಲ್ಪದರಲ್ಲೆ ಭಾರೀ ಅನಾಹುತವೊಂದು ತಪ್ಪಿದೆ. ಗ್ರಾಮದ ಟ್ಯಾಗೋರ್ ಸ್ಮಾರಕ ಪ್ರೌಢ ಶಾಲೆಯಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದೆ. ಮಕ್ಕಳು ಶಾಲೆಯಿಂದ ಮನೆಗೆ ತೆರಳಿದ ಬಳಿಕ ಮೆಲ್ಛಾವಣಿ ಹೆಂಚುಗಳು ಕುಸಿದು ಬಿದ್ದಿವೆ. ಹೀಗಾಗಿ ಘಟನೆಯ ವೇಳೆ ಮಕ್ಕಳು ಶಾಲೆಯಲ್ಲಿ ಇಲ್ಲದಿದ್ದುದರಿಂದ ಅನಾಹುತ ತಪ್ಪಿದೆ. 60 ವರ್ಷದಷ್ಟು ಹಳೆಯದಾದ ಕಟ್ಟಡವನ್ನ ದುರಸ್ತಿ ಮಾಡದ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವನ್ನ ಗ್ರಾಮಸ್ಥರು ಖಂಡಿಸಿದ್ದಾರೆ. ಶನಿವಾರ ಶಾಲೆಗೆ ಬೀಗ […]

2 weeks ago

ಜೋಡಿ ಕೊಲೆ ಎಸಗಿದ್ದ 8 ಮಂದಿಗೆ ಜೀವಾವಧಿ ಶಿಕ್ಷೆ

ರಾಯಚೂರು: ಗೋಮಾಳ ಜಾಗಕ್ಕಾಗಿ ಇಬ್ಬರ ಕೊಲೆ ಹಾಗೂ ನಾಲ್ವರ ಮೇಲೆ ಹಲ್ಲೆ ಮಾಡಿದ್ದ 16 ಜನ ಅಪರಾಧಿಗಳಲ್ಲಿ 8 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ರಾಯಚೂರಿನ ಎರಡನೇ ಜೆಎಂಎಫ್‍ಸಿ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಜಿಲ್ಲೆಯ ಮಾನ್ವಿಯ ಬೊಮ್ಮನಾಳ ಗ್ರಾಮದಲ್ಲಿ ಗೋಮಾಳ ಜಾಗಕ್ಕಾಗಿ ಜನವರಿ 10, 2014 ರಂದು ಕೊಲೆ ಮಾಡಲಾಗಿತ್ತು. ಈ ಕುರಿತು ಸಿರವಾರ ಪೊಲೀಸ್...

ಮೋದಿಯವರ ಅಚ್ಛೇ ದಿನ್ ಇನ್ನೂ ಪರಿಣಾಮಕಾರಿ ಆಗಬೇಕಿದೆ: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

3 weeks ago

ರಾಯಚೂರು: ನರೇಂದ್ರ ಮೋದಿಯವರ ಸರ್ಕಾರ ಬಂದು ನಾಲ್ಕು ವರ್ಷವಾದರು, ಚುನಾವಣೆ ಪೂರ್ವದಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನು ತರುವುದಾಗಿ ಭರವಸೆ ನೀಡಿ ಈಡೇರಿಸಿಲ್ಲ ಎಂದು ಮಂತ್ರಾಲಯದಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೋದಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಆರ್ಥಿಕತೆ...

ಸೋಲಿನ ಪರಾಮರ್ಶೆ ಸಭೆಯಲ್ಲಿ ಕಣ್ಣೀರಿಟ್ಟ ಬಿಜೆಪಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್

3 weeks ago

ರಾಯಚೂರು: ಸೋಲಿನ ಪರಾಮರ್ಶೆ ಸಭೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಗಳಗಳನೆ ಕಣ್ಣೀರಿಟ್ಟಿದ್ದಾರೆ. ರಾಯಚೂರು ನಗರದ ಹೊರವಲಯದಲ್ಲಿನ ಹರ್ಷಿತಾ ಗಾರ್ಡನ್ ನಲ್ಲಿ ನಡೆದ ಸಭೆಯಲ್ಲಿ ತಿಪ್ಪರಾಜು ಸೋತಿದ್ದಕ್ಕೆ ಅತ್ತಿದ್ದಾರೆ. 2013 ರಲ್ಲಿ ಗೆದ್ದು ಶಾಸಕನಾಗಿ ಕ್ಷೇತ್ರದಲ್ಲಿ...

ಸೋತಿದ್ದಕ್ಕೆ ಕಣ್ಣಿರಿಟ್ಟ ಮಾಜಿ ಬಿಜೆಪಿ ಶಾಸಕ ತಿಪ್ಪರಾಜು ಹವಾಲ್ದಾರ್

3 weeks ago

ರಾಯಚೂರು: ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರಿಂದ ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಅವರು ಮಂಗಳವಾರ ಗಳಗಳನೆ ಕಣ್ಣಿರಿಟ್ಟಿದ್ದಾರೆ. ನಗರದ ಹೊರವಲಯದ ಹರ್ಷಿತಾ ಗಾರ್ಡನ್‍ನಲ್ಲಿ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಭಾವುಕರಾಗಿ ಮಾತನಾಡಿದ ಅವರು, ಕಳೆದ ಬಾರಿ ಕ್ಷೇತ್ರದಲ್ಲಿ ಸಾಕಷ್ಟು...

ಅಹಿತಕರ ಘಟನೆ ನಡೆಯದಿರಲೆಂದು ವೈಟಿಪಿಎಸ್ ಅಧಿಕಾರಿಗಳಿಂದ ಕುರಿ ಬಲಿ!

4 weeks ago

(ಸಾಂದರ್ಭಿಕ ಚಿತ್ರ) ರಾಯಚೂರು: ವಿದ್ಯುತ್ ಕೇಂದ್ರದಲ್ಲಿ ಅಹಿತಕರ ಘಟನೆ ನಡೆಯಬಾರದು ಎಂದು ಯರಮರಸ್ ಸೂಪರ್‍ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ(ವೈಟಿಪಿಎಸ್) ಅಧಿಕಾರಿಗಳು ಕುರಿ ಬಲಿಕೊಟ್ಟ ಮೂಢನಂಬಿಕೆ ಮೆರೆದಿದ್ದಾರೆ. ಜಿಲ್ಲೆಯ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮಹಾದ್ವಾರ ಎದುರಿಗಿರುವ ತಾಯಮ್ಮ ದೇವಿಗೆ 5 ಕುರಿಗಳನ್ನು...

ಪ್ರಣಾಳಿಕೆಗೆ ತಕ್ಕಂತೆ ನಡೆಯದಿದ್ದರೆ ಪ್ರತಿಭಟನೆ ಎದುರಿಸಿ: ಶ್ರೀರಾಮುಲು

4 weeks ago

ರಾಯಚೂರು: ಪ್ರಣಾಳಿಕೆಯನ್ನು ಕಾರ್ಯರೂಪಕ್ಕೆ ತರಬೇಕು, ಇಲ್ಲದಿದ್ದರೆ ಒಂದು ಕ್ಷಣ ಕೂಡ ನೀವು ಅಧಿಕಾರದಲ್ಲಿ ಉಳಿಯದಂತೆ ಪ್ರತಿಭಟನೆ ಮಾಡುತ್ತೇವೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ. ವಿಧಾನ ಪರಿಷತ್ ಪದವಿಧರ ಕ್ಷೇತ್ರದ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಜಿಲ್ಲೆಗೆ ಭೇಟಿ ನೀಡಿ...

ವರುಣನ ಅಬ್ಬರಕ್ಕೆ ರಾಜ್ಯದಲ್ಲಿ ಸಿಡಿಲಿಗೆ ಬಾಲಕ ಸೇರಿ 6 ಬಲಿ

1 month ago

ಬೆಂಗಳೂರು/ಮಂಗಳೂರು: ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮುನ್ನವೇ ಮಳೆರಾಯ ರುದ್ರ ತಾಂಡವವಾಡಿದ್ದಾನೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಹೊಡೆದು 6 ಮಂದಿ ಸಾವನ್ನಪ್ಪಿದ್ದಾರೆ. ಅರಬ್ಬೀ ಸಮುದ್ರದಲ್ಲಿ ಕಾಣಿಸಿಕೊಂಡಿರುವ ‘ಮೆಕುನು’ ಚಂಡಮಾರುತದಿಂದಾಗಿ ಮಳೆರಾಯ ಆರ್ಭಟಿಸುತ್ತಿದ್ದಾನೆ. ರಾಜ್ಯದ ವಿವಿಧ ಭಾಗಗಳಲ್ಲಿ ಸಿಡಲಿಗೆ 6 ಮಂದಿ ಬಲಿಯಾಗಿದ್ದಾರೆ....