Thursday, 12th December 2019

3 days ago

ಒಡವೆ ಮಾರಿ ಸಿಸಿಟಿವಿ ಅಳವಡಿಸಿಯೂ ಪತ್ನಿಯನ್ನು ಕೊಂದೇ ಬಿಟ್ಟ

ಹಾಸನ: ಪತ್ನಿಯ ಶೀಲ ಶಂಕಿಸಿದ ಪತಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಹೊಳೆನರಸೀಪುರ ತಾಲೂಕಿನ ಕಾಳೇನಹಳ್ಳಿ ಕಾವಲು ಗ್ರಾಮದ ಶೀಲಾ ಅಲಿಯಾಸ್ ಕಾವ್ಯ(26)ಕೊಲೆಯಾದ ನತದೃಷ್ಟೆ. ಸೋಮವಾರ ರಾತ್ರಿ ಪತ್ನಿಯನ್ನು ಕೊಂದ ಆರೋಪಿ ಪತಿ ಶಂಕರ್ ಪೊಲೀಸರಿಗೆ ಶರಣಾಗಿದ್ದಾನೆ. ಕಳೆದ ಐದು ವರ್ಷಗಳ ಹಿಂದೆ ಕಡುವಿನ ಹೊಸಹಳ್ಳಿ ಗ್ರಾಮದಿಂದ ಶೀಲಾಳನ್ನು ಶಂಕರ್ ಜೊತೆ ವಿವಾಹ ನಡೆಸಲಾಗಿತ್ತು. ಈ ದಂಪತಿಗೆ 4 ವರ್ಷದ ಹೆಣ್ಣು ಮಗು ಇದೆ. ಹೆಂಡತಿ ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ […]

7 days ago

ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ- ಸೂರಜ್ ರೇವಣ್ಣ ಎ1 ಆರೋಪಿಯಾದ್ರೂ ಬಂಧನವಿಲ್ಲ

ಹಾಸನ: ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ಎ1 ಆರೋಪಿಯಾದರು ಬಂಧಿಸಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಮಂಗಳವಾರ ರಾತ್ರಿ ಉಪಚುನಾವಣೆಗೆ ಹಣ ಹಂಚಲು ಬಂದಿದ್ದಾರೆ ಎಂದು ಹಾಸನದ ಚನ್ನರಾಯಪಟ್ಟಣ ತಾ. ಕೆ.ಆರ್ ಪೇಟೆ ಗಡಿಭಾಗದ ನಂಬಿಹಳ್ಳಿ ಗ್ರಾಮದಲ್ಲಿ ಸೂರಜ್ ರೇವಣ್ಣ ಮತ್ತು ಅವರ...

ಶಾಂತಿ ಸಂದೇಶ, ಸಮಾಜದ ಒಳಿತಿಗಾಗಿ ಹಾಸನದಲ್ಲಿ ಜೈನರ ಶೋಭಾಯಾತ್ರೆ

1 week ago

ಹಾಸನ: ಶಾಂತಿ ಸಂದೇಶ ಹಾಗೂ ಸಮಾಜದ ಒಳಿತಿಗಾಗಿ ಮತ್ತು ಸ್ವಯಂ ಸಂಯಮ ಪಾಲನೆ ಸಂದೇಶ ವಿಚಾರವಾಗಿ ಹಾಸನ ನಗರದಲ್ಲಿ ಪ್ರಸಿದ್ಧ ಜೈನಗುರು ಶ್ರೀ ಮಹಾಶ್ರಮಣ್ ಜೀ ನೇತೃತ್ವದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು. ಹಾಸನ ರೈಲ್ವೇ ನಿಲ್ದಾಣದಿಂದ ಎಸ್‍ಡಿಎಂ ಆಯುರ್ವೇದ ಕಾಲೇಜಿನವರೆಗೂ ನಡೆದ...

ಒಂದೂವರೆ ಗಂಟೆ ಫಾಲೋ ಮಾಡಿ 3 ಲಕ್ಷ ರೂ. ಎಗರಿಸಿದ ಕಳ್ಳರು

2 weeks ago

– ಬ್ಯಾಂಕ್‍ನಿಂದ ಹಣ ಡ್ರಾ ಮಾಡುವ ಗ್ರಾಹಕರೇ ಟಾರ್ಗೆಟ್ – ಸಿಸಿಟಿವಿ ದೃಶ್ಯಾವಳಿಯಿಂದ ಕೃತ್ಯ ಬಯಲು ಹಾಸನ: ಬ್ಯಾಂಕ್‍ಗಳಲ್ಲಿ ಹಣ ಡ್ರಾ ಮಾಡೋರನ್ನ ಟಾರ್ಗೆಟ್ ಮಾಡಿ ಹಿಂಬಾಲಿಸಿ ಹಣ ಎಗರಿಸಿ ಎಸ್ಕೇಪ್ ಆಗುವ ಗ್ಯಾಂಗ್‍ಗಳೀಗ ರಾಜ್ಯದಲ್ಲಿ ತಲೆ ಎತ್ತಿದ್ದು, ಹಾಸನದಲ್ಲಿ ಬೈಕ್...

ಶಾರ್ಟ್ ಸರ್ಕ್ಯೂಟ್‍ನಿಂದ ಮನೆ ಬೆಂಕಿಗಾಹುತಿ – 1.25 ಲಕ್ಷ ನಗದು, ಒಡವೆ ಭಸ್ಮ

2 weeks ago

ಹಾಸನ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಮನೆಗೆ ಬೆಂಕಿ ಬಿದ್ದು ಸುಮಾರು 1.25 ಲಕ್ಷ ನಗದು, ಒಡವೆ ಹಾಗೂ ಗೃಹಪಯೋಗಿ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೊಡ್ಡಕಾಡನೂರು ಗ್ರಾಮದಲ್ಲಿ ನಡೆದಿದೆ. ದೊಡ್ಡಕಾಡನೂರು ಗ್ರಾಮದ ನಿವಾಸಿ ಮಂಜುಳಾ ಅವರ ಮನೆಯಲ್ಲಿ...

ಹಾಸನದಲ್ಲಿ ಗಮನಸೆಳೆದ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

2 weeks ago

ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಎರಡು ದಿನಗಳ ಅಖಿಲ ಭಾರತ ಪ್ರಥಮ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಕಲರವ ಜೋರಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಸಮ್ಮೇಳನದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ಹೆಚ್ಚುವರಿ...

ನಮ್ಮನ್ನು ಬದುಕಲು ಬಿಡಿ – ವಿಡಿಯೋ ಮಾಡಿ ಅಂಗಲಾಚಿದ ಪ್ರೇಮಿಗಳು

2 weeks ago

ಹಾಸನ: ನಮ್ಮನ್ನು ಬದುಕಲು ಬಿಡಿ ಎಂದು ಪ್ರೇಮಿಗಳು ಸೆಲ್ಫಿ ವಿಡಿಯೋ ಮಾಡಿ ಅಂಗಲಾಚಿದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಜೀವಿತಾ ಹಾಗೂ ರಾಕೇಶ್ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಅತ್ತೆಯ ಮಗನ ಜೊತೆ ಮದುವೆ ಮಾಡುತ್ತಾರೆ ಎಂದು ಜೀವಿತಾ ತನ್ನ ಪ್ರೇಮಿ...

ಪೋಷಕರಿಲ್ಲ, ಪಾಳುಬಿದ್ದ ಮನೆಯಲ್ಲೇ ವಾಸಿಸುತ್ತಿರುವ ಪುಟ್ಟ ಸಹೋದರಿಯರು

2 weeks ago

ಹಾಸನ: ಇರಲು ಮನೆ ಇಲ್ಲದೆ ಪಾಳುಬಿದ್ದ ಮನೆಯಲ್ಲೇ ಸಹೋದರಿಯರಿಬ್ಬರು ವಾಸ ಮಾಡುತ್ತಿರುವ ಸಂಗತಿ ಹಾಸನ ಸಕಲೇಶಪುರ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಹೆತ್ತೂರು ಗ್ರಾಮದಲ್ಲಿ ಮಕ್ಕಳು ಮನೆಯಿಲ್ಲದೆ ಪಾಳುಬಿದ್ದ ಮನೆಯಲ್ಲೇ ವಾಸಿಸುತ್ತಿದ್ದು, ತಾಯಿ ಇಲ್ಲದ ಈ ತಬ್ಬಲಿ ಬಾಲಕಿಯರು ತಮ್ಮ ಜೀವನವನ್ನು ನರಕದಂತೆ...