Sunday, 24th June 2018

Recent News

3 hours ago

ಒಳ್ಳೆಯ ಕೆಲಸ ಮಾಡಿದ ಉದಾಹರಣೆ ನೀಡಲಿ: ಜಾಮದಾರಗೆ ಶಾಮನೂರು ಟಾಂಗ್

ದಾವಣಗೆರೆ: ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಯಾವುದೇ ಅಧಿಕಾರಕ್ಕಾಗಿ ನಾನು ಪ್ರಯತ್ನಿಸಿಲ್ಲ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾವು ಲಾಬಿ ನಡೆಸಿಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ದಾವಣಗೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ಪಕ್ಷದಲ್ಲಿ ನಾನು ಯಾವತ್ತು ನನ್ನ ಮಗನ ಪರವಾಗಿ ನಿಂತಿಲ್ಲ. ಅಲ್ಲದೇ ಸಚಿವ ಸ್ಥಾನಕ್ಕಾಗಿ ತಲೆ ಕೆಡಿಸಿಕೊಂಡಿಲ್ಲ. ಈಗ ಕ್ಷೇತ್ರದ ಅಭಿವೃದ್ಧಿ ಮೇಲಷ್ಟೇ ನನ್ನ ಗಮನ ಎಂದು ತಿಳಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಶಿವಾನಂದ ಜಾಮದಾರ್ ವಿರುದ್ಧ […]

5 hours ago

ನಡು ರಸ್ತೆಯಲ್ಲಿ ಹೊತ್ತಿ ಉರಿದ ಕಾರ್ – ನಾಲ್ವರು ಪಾರು

ದಾವಣಗೆರೆ: ಚಲಿಸುತ್ತಿದ್ದ ಕಾರಿಗೆ ದಿಢೀರ್ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದ ಬಳಿ ನಡೆದಿದೆ. ದಾವಣಗೆರೆ ಮೂಲದ ಸಿದ್ದರಾಜ್ ಗೆ ಸೇರಿದ ಕಾರಾಗಿದ್ದು, ಇವರು ಮಲೆಬೆನ್ನೂರಿನಲ್ಲಿ ಕಾರ್ಯಕ್ರಮವನ್ನು ಮುಗಿಸಿ ಶಿವಮೊಗ್ಗದ ಸೊರಬ ಕಡೆ ಹೋಗುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಾರಂಭದಲ್ಲಿ ಕಾರಿನಲ್ಲಿ ಹೊಗೆ...

ಪ್ರೀತಿಯಿಂದ ಸಾಕಿದ್ದ ಶ್ವಾನ ಸಾವು- ಅಂತಿಮ ದರ್ಶನಕ್ಕಿಟ್ಟು ಪೂಜೆ ಸಲ್ಲಿಸಿ, ಅಂತ್ಯ ಸಂಸ್ಕಾರ

1 day ago

ದಾವಣಗೆರೆ: ನೆಚ್ಚಿನ ನಾಯಿಗೆ ಮೃತಪಟ್ಟ ಹಿನ್ನೆಲೆಯಲ್ಲಿ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರ ನಡೆಸಿದ ಘಟನೆ ದಾವಣಗೆರೆಯ ಗಾಂಧಿನಗರದಲ್ಲಿ ನಡೆದಿದೆ. ಕಳೆದ 13 ವರ್ಷಗಳಿಂದ ಗಾಂಧಿನಗರದ ಮಂಜು ಹಾಗೂ ಸುನೀಲ್, ಅಡಿವ್ಯಾ ಎನ್ನುವ ನಾಯಿಯನ್ನು ಪ್ರೀತಿಯಿಂದ ಸಾಕಿದ್ದರು. ಆದರೆ ಶುಕ್ರವಾರ ರಾತ್ರಿ...

ನಿಧಿ ತಗೆಯಲು ಹೋಗಿ ಸ್ಥಳೀಯರ ಕೈಗೆ ಸಿಕ್ಕು ಗೂಸಾ ತಿಂದರು!

2 days ago

ದಾವಣಗೆರೆ: ನಿಧಿ ಆಸೆಗಾಗಿ ವಾಮಾಚಾರ ಮಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ಜಗಳೂರು ತಾಲೂಕಿನ ದೊಣ್ಣೆಹಳ್ಳಿಯಲ್ಲಿ ನಡೆದಿದೆ. ಮೌನಾಚಾರಿ ಹಾಗೂ ಭಾಷಾ ವಾಮಾಚಾರ ಮಾಡುತ್ತಿದ್ದ ಆರೋಪಿಗಳು. ವಾಮಾಚಾರ ವಿಷಯ ತಿಳಿಯುತ್ತಿದ್ದಂತೆ ಮೌನಾಚಾರಿ ಹಾಗೂ ಭಾಷಾ ಎನ್ನುವ ವ್ಯಕ್ತಿಯನ್ನು...

ಮರಕ್ಕೆ ಡಿಕ್ಕಿಯಾದ KSRTC ಬಸ್- ಇಬ್ಬರ ದುರ್ಮರಣ

4 days ago

ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‍ಆರ್ ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಘಟನೆ ದಾವಣಗೆರೆಯ ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದ ಬಳಿ ನಡೆದಿದೆ. ಘಟನೆಯಿಂದ ಚಾಲಕ ಸೇರಿ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗ ಕಡೆಯಿಂದ ಹೊನ್ನಾಳಿಗೆ ಕೆಎಸ್‍ಆರ್‍ಟಿಸಿ ಬಸ್ ಹೋಗುತ್ತಿತ್ತು....

ಕಳಪೆ ಕಾಮಗಾರಿಯಿಂದ ಸೌಂದರ್ಯ ಕಳೆದುಕೊಳ್ಳುತ್ತಿದೆಯೇ ದಾವಣಗೆರೆಯ ಗ್ಲಾಸ್ ಹೌಸ್?

6 days ago

ದಾವಣಗೆರೆ: ಕ್ಯೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಗಾಜಿನ ಮನೆ ಈಗ ಕಳಪೆ ಕಾಮಗಾರಿಯಿಂದ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯೊಂದು ಇದೀಗ ಎದ್ದಿದೆ. ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಆಕರ್ಷಕವಾದ ಗಾಜಿನ ಮನೆ ಇದಾಗಿದ್ದು, ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಜಿ ಸಿ...

ತುಂಗಾಭದ್ರಾ ನದಿ ಮೈದುಂಬಿ ಹರಿಯುತ್ತಿದ್ದರಿಂದ ಖುಷಿಯಾಗಿದ್ದ ರೈತರಿಗೆ ಸಂಕಷ್ಟ!

7 days ago

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ, ಹೊಟ್ಯಾಪುರ ಮತ್ತು ಬೀರಗೊಂಡನಹಳ್ಳಿಯಲ್ಲಿ ದಿಢೀರನೆ ಮೊಸಳೆಗಳು ಪ್ರತ್ಯಕ್ಷಗೊಂಡಿವೆ. ಇದರಿಂದಾಗಿ ಸದ್ಯ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಜಿಲ್ಲೆಯ ತುಂಗಾಭದ್ರ ನದಿ ಮೈದುಂಬಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ...

ಬೈಕಿಗೆ ಐರಾವತ ಬಸ್ ಡಿಕ್ಕಿ- ತಲೆ ಜಜ್ಜಿಹೋಗಿದ್ದರಿಂದ ಪತ್ತೆಯಾಗಿಲ್ಲ ಯುವಕನ ಗುರುತು

1 week ago

ದಾವಣಗೆರೆ: ಬೈಕಿಗೆ ಹಿಂಬದಿಯಿಂದ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತ ಪಟ್ಟಿ ಘಟನೆ ದಾವಣಗೆರೆ ಸಮೀಪದ ಹೊನ್ನೂರು ಗ್ರಾಮ ಬಳಿ ಈ ಘಟನೆ ಸಂಭವಿಸಿದೆ. ಅಪಘಾತ ದಲ್ಲಿ ಸಾವನ್ನಪ್ಪಿದ ಯುವಕನ ತಲೆ ಸಂಪೂರ್ಣ ಜಜ್ಜಿದ್ದರಿಂದ ಗುರುತು...