Friday, 22nd September 2017

Recent News

7 months ago

ತಾಯಿಯನ್ನು ಕಳೆದುಕೊಂಡ ಮರಿಕೋತಿ ರೋದನೆ! ಮನ ಕಲಕುವ ವೀಡಿಯೋ ನೋಡಿ

ಚಾಮರಾಜನಗರ: ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡ ಕೋತಿ ಮರಿಯೊಂದು ರೋಧಿಸುತ್ತಿರುವ ಮನ ಕಲಕುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ನಡೆದಿದೆ. ಇಂದು ಬೆಳಗ್ಗೆ ರಸ್ತೆ ಬದಿಯಲ್ಲಿ ಕೋತಿ, ತನ್ನ ಮರಿಗಳೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ತಾಯಿ ಕೋತಿ ಸಾವನ್ನಪ್ಪಿದೆ. ಈ ವೇಳೆ ಜೊತೆಯಿದ್ದ ಕೋತಿ ಮರಿ ತನ್ನ ತಾಯಿಯನ್ನು ಕಳೆದುಕೊಂಡ ದುಃಖದಿಂದ ರೋಧಿಸುತ್ತಿತ್ತು. ಈ ದೃಶ್ಯ ಅಕ್ಕಪಕ್ಕದಲ್ಲಿದ್ದವರ ಮನ ಕಲಕುವಂತಿತ್ತು. ಸಾವನ್ನಪ್ಪಿದ ಕೋತಿಯನ್ನು ಸ್ಥಳದಿಂದ ತೆರವು ಮಾಡುವುದಕ್ಕೆ ಸಾರ್ವಜನಿಕರು ಎಷ್ಟೆ ಪ್ರಯತ್ನಿಸಿದರೂ, ಜನರನ್ನು […]

7 months ago

ಗಿರಿಜನರನ್ನು ಬೆದರಿಸಿ ಮಹಿಳಾ ಅಧಿಕಾರಿ ವಿರುದ್ಧ ಕೈ ಶಾಸಕ ಪುಟ್ಟರಂಗಶೆಟ್ಟಿಯಿಂದ ಪ್ರತಿಭಟನೆ

ಚಾಮರಾಜನಗರ: ಶಾಸಕ ಪುಟ್ಟರಂಗಶೆಟ್ಟಿ ಅವರು ಮಹಿಳಾ ಅಧಿಕಾರಿಗೆ ನೀಡಿರುವ ಮಾನಸಿಕ ಕಿರುಕುಳ ಆರೋಪವನ್ನು ಮುಚ್ಚಿ ಹಾಕಲು, ಗಿರಿಜನರನ್ನು ಬೆದರಿಸಿ ಚಾಮರಾಜನಗರಕ್ಕೆ ಕರೆತಂದು ಅಧಿಕಾರಿ ವಿರುದ್ಧ ಪ್ರತಿಭಟನೆ ಮಾಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಚಾಮರಾಜನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಅವರು ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳಾ ಅಧಿಕಾರಿ ಸರಸ್ವತಿ ಅವರು ಆರೋಪ...

ಬಿಳಿಗಿರಿ ರಂಗನ ಬೆಟ್ಟದಲ್ಲಿ ನಿಯಂತ್ರಣಕ್ಕೆ ಬಂದ ಬೆಂಕಿ

7 months ago

ಚಾಮರಾಜನಗರ: ಕಳೆದ ಎಂಟು ದಿನಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಮೂರು ದಿನಗಳಿಂದ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಣಾ ಪ್ರದೇಶ ಅಕ್ಷರಶಃ ಬೆಂಕಿಯಿಂದ ಹೊತ್ತಿ ಉರಿದಿತ್ತು. ಇದೀಗ ಬೆಂಕಿಯನ್ನು ನಂದಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಬೆಂಕಿ ಜ್ವಾಲೆಯ ನಡುವೆ ಅರಣ್ಯ ಇಲಾಖೆ...

ಅರಣ್ಯಕ್ಕೆ ಬಿದ್ದ ಬೆಂಕಿ ಆರಿಸುತ್ತಿರುವವರಿಗೆ ಬೇಕಿದೆ ಆಹಾರ, ಕುಡಿಯುವ ನೀರು

7 months ago

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿ ರಂಗನಬೆಟ್ಟದ ಅರಣ್ಯಕ್ಕೆ ಬಿದ್ದ ಬೆಂಕಿ ಆರಿಸುತ್ತಿರುವ ಅಗ್ನಿ ಶಾಮಕ ಮತ್ತು ಅರಣ್ಯ ಸಿಬ್ಬಂದಿಗೆ ಆಹಾರ ಮತ್ತು ಕುಡಿಯುವ ನೀರು ಸಿಗದೇ ಪರದಾಡುತ್ತಿದ್ದಾರೆ.     ಗುರುವಾರ ಸಂಜೆ ಬಿಳಿಗಿರಿ ರಂಗನಬೆಟ್ಟದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಿಯಂತ್ರಣಕ್ಕೆ...

ಚಾಮರಾಜೇಶ್ವರ ದೇವಸ್ಥಾನದ ರಥಕ್ಕೆ ಬೆಂಕಿಯಿಟ್ಟ ವ್ಯಕ್ತಿಯ ಬಂಧನ

7 months ago

ಚಾಮರಾಜನಗರ: ಜಿಲ್ಲೆಯ ಚಾಮರಾಜೇಶ್ವರ ದೇವಸ್ಥಾನದ ರಥಕ್ಕೆ ಬೆಂಕಿ ಹಚ್ಚಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಚಾಮರಾಜನಗರ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಮೋಹನ್ ಕುಮಾರ್ ರಥಕ್ಕೆ ಬೆಂಕಿ ಹಚ್ಚಿದವನು. ಮೋಹನ್ ಕುಮಾರ್ ನಗರ ಸಭೆ ಮಾಜಿ ಅಧ್ಯಕ್ಷೆಯೊಬ್ಬರ ಸಂಬಂಧಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈತ ಕಳೆದ...

ನಾಗರಹೊಳೆ ಅರಣ್ಯದಲ್ಲಿ ಕರಡಿಗೆ ಹೆದರಿ ಓಟ ಕಿತ್ತ ಹುಲಿರಾಯ- ವೀಡಿಯೋ ನೋಡಿ

7 months ago

ಚಾಮರಾಜನಗರ: ಹುಲಿಯಂತಹ ಬಲಿಷ್ಠ ಪ್ರಾಣಿಯನ್ನೇ ಕರಡಿಯೊಂದು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯ ನಾಗರಹೊಳೆ ಅರಣ್ಯದಲ್ಲಿ ಸಫಾರಿಗೆ ತೆರಳಿದ ಪ್ರವಾಸಿಗರೊಬ್ಬರಿಗೆ ಸೆರೆಸಿಕ್ಕಿದೆ. ಬೆಂಗಳೂರಿನ ಅಭಿಷೇಕ್ ಎಂಬುವವರು ನಾಗರಹೊಳೆಯಲ್ಲಿ ಸಫಾರಿಗೆ ಹೋಗಿದ್ದ ಸಂದರ್ಭದಲ್ಲಿ ಈ ದೃಶ್ಯ ಸೆರೆಹಿಡಿದಿದ್ದಾರೆ. ವನ್ಯಜೀವಿ ತಜ್ಞರು ಹೇಳುವ ಪ್ರಕಾರ ನೀರಿಗಾಗಿ ಇಂತಹ...

ಗುಡಿಸಲಿಗೆ ಬೆಂಕಿ ತಗುಲಿ 9 ತಿಂಗಳ ಮಗು ಸಜೀವ ದಹನ

7 months ago

ಚಾಮರಾಜನಗರ: ಗುಡಿಸಲಿಗೆ ಬೆಂಕಿ ತಗುಲಿ 9 ತಿಂಗಳ ಮಗು ಸಜೀವ ದಹನವಾಗಿರುವ ದಾರುಣ ಘಟನೆ ಚಾಮರಾಜನಗರದ ಮಹದೇಶ್ವರ ಬೆಟ್ಟದ ಆಳಂಬಾಡಿ ಗ್ರಾಮದಲ್ಲಿ ನಡೆದಿದೆ. ಆಳಂಬಾಡಿ ಗ್ರಾಮದ ಸುರೇಶ್ ಹಾಗೂ ಮುತ್ತುಲಕ್ಷ್ಮೀ ದಂಪತಿಯ ಮಗುವೇ ಬೆಂಕಿಗಾಹುತಿಯಾಗಿರುವ ಮೃತ ದುರ್ದೈವಿ. ದಂಪತಿಗೆ ಅರಣ್ಯ ಇಲಾಖೆಯು...