Friday, 22nd June 2018

Recent News

7 hours ago

ನಿಧಿ ತಗೆಯಲು ಹೋಗಿ ಸ್ಥಳೀಯರ ಕೈಗೆ ಸಿಕ್ಕು ಗೂಸಾ ತಿಂದರು!

ದಾವಣಗೆರೆ: ನಿಧಿ ಆಸೆಗಾಗಿ ವಾಮಾಚಾರ ಮಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ಜಗಳೂರು ತಾಲೂಕಿನ ದೊಣ್ಣೆಹಳ್ಳಿಯಲ್ಲಿ ನಡೆದಿದೆ. ಮೌನಾಚಾರಿ ಹಾಗೂ ಭಾಷಾ ವಾಮಾಚಾರ ಮಾಡುತ್ತಿದ್ದ ಆರೋಪಿಗಳು. ವಾಮಾಚಾರ ವಿಷಯ ತಿಳಿಯುತ್ತಿದ್ದಂತೆ ಮೌನಾಚಾರಿ ಹಾಗೂ ಭಾಷಾ ಎನ್ನುವ ವ್ಯಕ್ತಿಯನ್ನು ಅಕ್ಕಪಕ್ಕದ ಮನೆಯವರು ಹಿಡಿದಿದ್ದಾರೆ. ಆದರೆ ಇವರ ಜೊತೆಗಿದ್ದ ಮತ್ತಿಬ್ಬರು ಆರೋಪಿಗಳು ಸ್ಥಳೀಯರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಮುಂಜಾನೆ ಯಾರು ಇಲ್ಲದ ಸಮಯ ನೋಡಿ, ಮೌನಾಚಾರಿ, ಭಾಷಾ ಹಾಗೂ ಪರಾರಿಯಾದ ಇಬ್ಬರು ಸೇರಿ ಕೃತ್ಯ ಎಸಗಿದ್ದಾರೆ. ಮನೆಯೊಂದರ […]

2 days ago

ಮರಕ್ಕೆ ಡಿಕ್ಕಿಯಾದ KSRTC ಬಸ್- ಇಬ್ಬರ ದುರ್ಮರಣ

ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‍ಆರ್ ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಘಟನೆ ದಾವಣಗೆರೆಯ ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದ ಬಳಿ ನಡೆದಿದೆ. ಘಟನೆಯಿಂದ ಚಾಲಕ ಸೇರಿ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗ ಕಡೆಯಿಂದ ಹೊನ್ನಾಳಿಗೆ ಕೆಎಸ್‍ಆರ್‍ಟಿಸಿ ಬಸ್ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್, ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ...

ಬೈಕಿಗೆ ಐರಾವತ ಬಸ್ ಡಿಕ್ಕಿ- ತಲೆ ಜಜ್ಜಿಹೋಗಿದ್ದರಿಂದ ಪತ್ತೆಯಾಗಿಲ್ಲ ಯುವಕನ ಗುರುತು

5 days ago

ದಾವಣಗೆರೆ: ಬೈಕಿಗೆ ಹಿಂಬದಿಯಿಂದ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತ ಪಟ್ಟಿ ಘಟನೆ ದಾವಣಗೆರೆ ಸಮೀಪದ ಹೊನ್ನೂರು ಗ್ರಾಮ ಬಳಿ ಈ ಘಟನೆ ಸಂಭವಿಸಿದೆ. ಅಪಘಾತ ದಲ್ಲಿ ಸಾವನ್ನಪ್ಪಿದ ಯುವಕನ ತಲೆ ಸಂಪೂರ್ಣ ಜಜ್ಜಿದ್ದರಿಂದ ಗುರುತು...

ಎಂ.ಬಿ.ಪಾಟೀಲ್ ಬುಡಬುಡಕಿ ಆಟ ಕಾಂಗ್ರೆಸ್ಸಿನಲ್ಲಿ ನಡೆಯಲ್ಲ: ಶಾಮನೂರು

1 week ago

ದಾವಣಗೆರೆ: ಮಂತ್ರಿಗಿರಿಗೆ ಕಾಂಗ್ರೆಸ್‍ನಲ್ಲಿ ಬಂಡಾಯವೆದ್ದು, ಭಾರೀ ಸದ್ದು ಮಾಡುತ್ತಿರುವ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‍ಗೆ ಶಾಮನೂರು ಶಿವಶಂಕರಪ್ಪ ಭರ್ಜರಿ ಟಾಂಗ್ ನೀಡಿದ್ದಾರೆ. ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ಸಚಿವ ಸ್ಥಾನಕ್ಕೆ ಪಕ್ಷದಲ್ಲಿ ಒತ್ತಡ ಹೇರುತ್ತಿರುವ ಶಾಸಕ ಎಂ.ಬಿ.ಪಾಟೀಲ್ ಬುಡಬುಡಕಿ...

ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಉಳಿಯೋದು ವೇಸ್ಟ್, ನನ್ನನ್ನು ಕ್ಷಮಿಸಿ- ತಾಯಿಗೆ ಮಗನಿಂದ ಸೆಲ್ಫಿ ವಿಡಿಯೋ

1 week ago

ದಾವಣಗೆರೆ: ಪೊಲೀಸರು ಹಾಗೂ ಪೋಷಕರು ಪ್ರೇಯಸಿಯನ್ನು ದೂರ ಮಾಡಿದ್ದಕ್ಕೆ ಮನನೊಂದು ಪ್ರಿಯಕರ ಸೆಲ್ಫಿ ವಿಡಿಯೋ ಮಾಡಿದ ಘಟನೆ ದಾವಣಗೆರೆಯ ಹದಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ದಾವಣಗೆರೆಯ ಲೋಕಿಕೆರೆ ಗ್ರಾಮದ ಯುವತಿಯೊಬ್ಬಳನ್ನು ಬಳ್ಳಾರಿಯ ರಾಜೇಂದ್ರ ಪ್ರೀತಿಸುತ್ತಿದ್ದರು. ಯುವತಿಯ ಮನೆಯಲ್ಲಿ ಬೇರೆ ಯುವಕನ ಜೊತೆ...

ವಿಚ್ಛೇದನಕ್ಕೆ ಮೊದ್ಲೇ 2ನೇ ಮದ್ವೆಗೆ ತಯಾರು- ಕಲ್ಯಾಣ ಮಂಟಪಕ್ಕೆ ಪತ್ನಿ ಬರುತ್ತಿದ್ದಂತೆಯೇ ಪತಿ ಪೊಲೀಸರಿಗೆ ಶರಣು!

1 week ago

ದಾವಣಗೆರೆ: ಎರಡನೇ ಮದುವೆಯಾಗಲು ಮುಂದಾದ ಪತಿಯ ವಿವಾಹ ತಡೆಯಲು ಮೊದಲ ಪತ್ನಿ ಕಲ್ಯಾಣ ಮಂಟಪದತ್ತ ಧಾವಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ನಗರದ ನಿವಾಸಿ ಶ್ರೀದೇವಿ ಮತ್ತು ತೊಳಹುಣಸೆ ಗ್ರಾಮದ ಜಗದೀಶ್ ನಾಯ್ಕ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಶ್ರೀದೇವಿಯೇ ಹಣ...

ನನ್ನ ಪತಿಗೆ ಬೆರಳು ತೋರಿಸಿ ಮಾತಾಡ್ತೀಯಾ.. ಹುಷಾರ್- ವೈದ್ಯರಿಗೆ ಜಿ.ಪಂ. ಸದಸ್ಯೆ ಅವಾಜ್

1 week ago

ದಾವಣಗೆರೆ: ಸರ್ಕಾರಿ ವೈದ್ಯಾಧಿಕಾರಿ ಮೇಲೆ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಆಕೆಯ ಗಂಡ ದರ್ಪ ತೋರಿಸಿದ್ದು, ಅದಕ್ಕೆ ಬಿಜೆಪಿಯ ಶಾಸಕರು ಸಾಥ್ ನೀಡಿದ ಘಟನೆ ಜಿಲ್ಲೆಯ ಜಗಳೂರು ತಾಲಲೂಕಿನ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ಪರಿಶೀಲನೆಗೆ ಜಿಲ್ಲಾ ಪಂಚಾಯತ್ ಸದಸ್ಯೆ ಶಾಂತಕುಮಾರಿ ಹಾಗೂ...

ಡಿವೈಡರ್ ಗೆ ಡಿಕ್ಕಿಯಾಗಿ 4 ಸುತ್ತು ಹೊಡೆದು ಕಾರು ಪಲ್ಟಿ- ಗುರುತು ಸಿಗಲಾರದಷ್ಟು ವಿಕಾರ!

1 week ago

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆಯ ಹೊರವಲಯದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿಯಾಗಿ ನಾಲ್ಕು ಸುತ್ತು ಹೊಡೆದು ಕಾರು ಪಲ್ಟಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದವರ ಗುರುತು ಸಿಗಲಾರದಷ್ಟು ವಿಕಾರವಾಗಿದೆ. KA-17-Z-3614...