Tuesday, 23rd January 2018

Recent News

ಸ್ನೇಹಿತರಿಂದ್ಲೇ ಕಾಲ್‍ಸೆಂಟರ್ ಯುವತಿಯ ರೇಪ್&ಮರ್ಡರ್- ಸೂಟ್‍ ಕೇಸ್‍ನಲ್ಲಿ ಶವ ಪತ್ತೆ

ಬೆಳಗಾವಿ: ನಗರದ ಭೂತರಾಮನಹಟ್ಟಿ ಬಳಿಯ ಮ್ಯಾನ್‍ಹೋಲ್‍ನಲ್ಲಿ ಕಾಲ್‍ಸೆಂಟರ್ ಯುವತಿ ಶವವೊಂದು ಸೂಟ್‍ಕೇಸ್‍ನಲ್ಲಿ ಪತ್ತೆಯಾಗಿದೆ.

ಮುಂಬೈ ಮೂಲದ 23 ವರ್ಷದ ಅಂಕಿತಾ ಕನೋಜಿಯಾ ಕೊಲೆಯಾದ ಯುವತಿ. ಅಂಕಿತಾ ಮೂಲತಃ ಮಾಹಾರಾಷ್ಟ್ರದ ನಾಗಪುರ ನಗರದವರಾಗಿದ್ದು, ಸಹಾಯಕ ಸಬ್ ಇನ್ಸ್ ಪೆಕ್ಟರ್ ಮಗಳು. ಮುಂಬೈನಲ್ಲಿ ಸೆಪ್ಟೆಂಬರ್ 4 ರಂದು ತನ್ನಿಬ್ಬರು ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದರು. ಇದೇ ವೇಳೆ ಸ್ನೇಹಿತರ ಮಧ್ಯೆ ಜಗಳ ನಡೆದು ಇಬ್ಬರು ಸ್ನೇಹಿತರು ಸೇರಿ ಅಂಕಿತಾ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ.

ನಂತರ ಸ್ನೇಹಿತರು ಸೂಟ್ ಕೇಸ್‍ವೊಂದರಲ್ಲಿ ಶವವನ್ನು ತುಂಬಿಕೊಂಡು ಮುಂಬೈನಿಂದ ಗೋವಾ ಮಾರ್ಗವಾಗಿ ಪ್ರಯಾಣ ಆರಂಭಿಸಿದ್ದಾರೆ. ಬೆಳಗಾವಿಯ ಬಳಿಯ ಭೂತರಾಮನಟ್ಟಿ ಬಳಿ ಬರುವ ವೇಳೆಗೆ ಕಾರು ಚಾಲಕನಿಗೆ ನಿದ್ರೆ ಆವರಿಸಿದೆ. ಆತ ಮಲಗಿದ್ದನ್ನು ಗಮಿಸಿದ ಇಬ್ಬರು ಆರೋಪಿಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದ ಮ್ಯಾನ್ ಹೋಲ್‍ಗೆ ಅಂಕಿತಾ ಶವ ತುಂಬಿದ್ದ ಸೂಟ್ ಕೇಸ್ ಬಿಸಾಡಿದ್ದಾರೆ

 

ಶವ ಬಿಸಾಡಿದ ನಂತರ ಗೋವಾಕ್ಕೆ ತೆರಳಿದ್ದು ಅಲ್ಲಿ ಸೂಟ್ ಕೇಸ್ ಇಲ್ಲದೇ ಇರೋದು ಗಮನಿಸಿದ ಕಾರು ಚಾಲಕ ಈ ಬಗ್ಗೆ ಪ್ರಯಾಣಿಕರನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಈ ಭೀಕರ ಅತ್ಯಾಚಾರ, ಕೊಲೆ ಪ್ರಕರಣ ಬಹಿರಂಗವಾಗಿದೆ. ನಂತರ ಕಾರು ಚಾಲಕ ಇಬ್ಬರಿಗೆ ಪೊಲೀಸರ ಮುಂದೆ ಶರಣಾಗುವಂತೆ ಹೇಳಿದ್ದು, ಆರೋಪಿಗಳು ಮುಂಬೈನ ಥಾಣೆ ಪೊಲೀಸರ ಮುಂದೆ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳಗಾವಿಯ ಕಾಕತಿ ಪೊಲೀಸರಿಗೆ ಮಾಹಿತಿ ನೀಡಿ ಸೂಟ್ ಕೇಸ್ ಇರುವ ಬಗ್ಗೆ ಥಾಣೆ ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಸೂಟ್ ಕೇಸ್ ನಿಂದ ತೀವ್ರ ರಕ್ತ ಹೊರಗೆ ಬಂದಿದ್ದು, ದುರ್ವಾಸನೆ ಬೀರುತ್ತಿತ್ತು. ಅಂಕಿತಾ ತಂದೆ ಹಾಗೂ ಕುಟುಂಬಸ್ಥರು ಶವ ಸಿಕ್ಕ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬುಧವಾರ ತಡರಾತ್ರಿ ಮುಂಬೈನ ಥಾಣೆ ಪೋಲಿಸರು ಆರೋಪಿಗಳಾದ ಅಕ್ಷಯ ತಾಳುದೆ ಮತ್ತು ಅಲ್ಕೇಶ್ ಪಾಟೀಲ್‍ನನ್ನ ಮುಂಬೈನಿಂದ ಬೆಳಗಾವಿಗೆ ಕರೆತಂದಿದ್ದಾರೆ.

ಪೊಲೀಸರು ಕೊಲೆ ಮಾಡಿ ಎಸೆದ ಸ್ಥಳ ಪರಿಶೀಲನೆ ನಡೆಸಿದ್ದು, ಸೂಟ್ ಕೇಸ್ ನಲ್ಲಿ ತುಂಬಿ ಮ್ಯಾನ ಹೋಲ್ ಗೆ ಎಸೆದಿದ್ದ ಅಂಕಿತ ಮೃತ ದೇಹವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

 

Leave a Reply

Your email address will not be published. Required fields are marked *