Tuesday, 24th April 2018

ಎಂಎಲ್‍ಎ ಆಗಲು ಹೊರಟಿದ್ದಾರೆ ಒಳ್ಳೆ ಹುಡುಗ ಪ್ರಥಮ್!

ಬೆಂಗಳೂರು: ಬಿಗ್ ಬಾಸ್ ವಿನ್ನರ್, ಒಳ್ಳೆ ಹುಡುಗ, ದೇವರಂತಾ ಮನುಷ್ಯ ಪ್ರಥಮ್ ಇದೀಗ ಎಂಎಲ್‍ಎ ಆಗಲು ಹೊರಟಿದ್ದಾರೆ.

ಅಂದಹಾಗೆ ಪ್ರಥಮ್ ಎಂಎಲ್‍ಎ ಆಗ್ತಿರೋದು ರಿಯಲ್ ಲೈಫ್‍ನಲ್ಲಿ ಅಲ್ಲ. ರೀಲ್‍ನಲ್ಲಿ. ಪ್ರಥಮ್ ಆಕ್ಟ್ ಮಾಡ್ತಿರೋ `ಎಂಎಲ್‍ಎ’ ಸಿನಿಮಾಗೆ ಸಿಎಂ ಸಿದ್ದರಾಮಯ್ಯ ಕ್ಲಾಪ್ ಮಾಡಿ ಶುಭ ಹಾರೈಸಿದ್ರು. ಎಂಎಲ್‍ಎ ಚಿತ್ರಕ್ಕೆ ಮಂಜು ಮೌರ್ಯ ಆಕ್ಷನ್ ಕಟ್ ಹೇಳಿದ್ದಾರೆ.

ಒಬ್ಬ ನಿಜವಾದ ರಾಜಕಾರಣಿ ಹೇಗಿರಬೇಕು ಅನ್ನೋದನ್ನ ಎಂಎಲ್‍ಎ ಸಿನಿಮಾದಲ್ಲಿ ತೋರಿಸೋಕೆ ಹೊರಟಿದೆ ಚಿತ್ರತಂಡ. ಎಂಎಲ್‍ಎ ಅಂದ್ರೆ ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗಲ್ಲ ಅಂತ ಹೇಳಿದ್ದು ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಅಧಿವೇಶನ ಇದ್ರೂ ಬಿಡುವು ಮಾಡಿಕೊಂಡು ಬಂದು ಸಿಎಂ ಚಿತ್ರತಂಡಕ್ಕೆ ಶುಭ ಹಾರೈಸಿದ್ರು.

Leave a Reply

Your email address will not be published. Required fields are marked *