Monday, 25th June 2018

Recent News

ಬಾಹುಬಲಿಯ ಮಾಹಿಷ್ಮತಿ ಪಟ್ಟಣ ನೋಡಬೇಕೇ? ಹಾಗಾದ್ರೆ ನೀವು ಇಷ್ಟು ದುಡ್ಡು ಕೊಡ್ಬೇಕು!

ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನದ ಪ್ರಭಾಸ್ ಅಭಿನಯದ `ಬಾಹುಬಲಿ’ ಸಿನಿಮಾ ಪ್ರೇಕ್ಷಕರಲ್ಲಿ ಮೆಚ್ಚುಗೆಯನ್ನು ಪಡೆದು ಸೂಪರ್ ಹಿಟ್ ಆಗಿತ್ತು. ಈಗ ಬಾಹುಬಲಿ ಸಿನಿಮಾಕ್ಕಾಗಿ ನಿರ್ಮಿಸಿದ್ದ ಸೆಟ್‍ಗಳು ರಾಮೋಜಿ ಫಿಲ್ಮ್ ಸಿಟಿಯಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಬಾಹುಬಲಿ ಅಭಿಮಾನಿಗಳು ಶೀಘ್ರದಲ್ಲೇ ಹೈದರಾಬಾದ್ ಪ್ರವಾಸಕ್ಕೆ ತೆರಳಿ ಮಾಹಿಷ್ಮತಿಯ ಹಿಂಭಾಗದ ದೃಶ್ಯಗಳನ್ನು ನೋಡಬಹುದು. ಬಾಹುಬಲಿ ಸಿನಿಮಾಕ್ಕಾಗಿ ಬರೋಬ್ಬರಿ ಸುಮಾರು 100 ಎಕರೆ ವಿಶಾಲ ಪ್ರದೇಶದಲ್ಲಿ 60 ಕೋಟಿ ರೂ. ಬಜೆಟ್‍ನಲ್ಲಿ ಸೆಟ್ ನಿರ್ಮಾಣ ಮಾಡಲಾಗಿತ್ತು. ಈಗ ಅದನ್ನು ಪ್ರವಾಸಿಗರ ವೀಕ್ಷಣೆಗಾಗಿ ತೆರೆಯಲಾಗಿದೆ.

ಸಾಮಾನ್ಯ ಪ್ರವಾಸಕ್ಕೆ 1,250 ರೂ.ನಿಗದಿ ಮಾಡಿದ್ದು ಬೆಳಗ್ಗೆ 9 ರಿಂದ ಮಧ್ಯಾಹ್ನ 11.30 ವರೆಗೆ ವೀಕ್ಷಿಸಬಹುದಾಗಿದೆ. ಪ್ರೀಮಿಯಂ ಪ್ರವಾಸಕ್ಕೆ ಪ್ರವಾಸಕ್ಕೆ 2,349 ರೂ. ದರ ನಿಗದಿ ಪಡಿಸಿದ್ದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಸುತ್ತಾಡಬಹುದಾಗಿದೆ.

ರಾಮೋಜಿ ಫಿಲ್ಮ್ ಸಿಟಿ ವೆಬ್‍ಸೈಟ್ ನಲ್ಲಿ ಟಿಕೆಟ್ ಲಭ್ಯವಿದ್ದು, ವಿದ್ಯಾರ್ಥಿಗಳಿಗೆ ಮತ್ತು ಕಾರ್ಪೊರೇಟ್ ಕಚೇರಿಗಳಿಗೆ ಟಿಕೇಟ್ ಬುಕಿಂಗ್‍ನಲ್ಲಿ ವಿಶೇಷ ಪ್ಯಾಕೇಜ್‍ಗಳನ್ನು ನೀಡಲಾಗಿದೆ.

ಬಾಹುಬಲಿಯ ಎರಡು ಸಿನಿಮಾಗಾಗಿ 60 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿ ಸೆಟ್ ನಿರ್ಮಾಣ ಮಾಡಲಾಗಿತ್ತು. ಪ್ರವಾಸಿಗರು ನೋಡಲು ಇದನ್ನು ಉಳಿಸಿಕೊಂಡಿದ್ದೇವೆ. ಅನೇಕ ಚಲನಚಿತ್ರ ವಿದ್ಯಾರ್ಥಿಗಳು, ಸಿನಿಮಾ ಪ್ರಿಯರು, ಸಾಮಾನ್ಯ ಜನರು ಬರುತ್ತಿದ್ದಾರೆ. ಹೆಚ್ಚಾಗಿ ಪ್ರವಾಸಿಗರನ್ನು ಇದು ಆಕರ್ಷಿಸುತ್ತಿದೆ ಎಂದು ಸ್ಟುಡಿಯೋದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸೆಟ್‍ಗಳನ್ನು ವಿನ್ಯಾಸ ಮಾಡಿದ ಕ್ರೆಡಿಟ್ ಕೇವಲ ಪ್ರಶಸ್ತಿ ವಿಜೇತ ವಿನ್ಯಾಸಕ ಸಾಬು ಸಿರಿಲ್ ಮಾತ್ರವಲ್ಲದೆ ಅವರ ತಂಡದ ಪ್ರತಿಯೊಬ್ಬರಿಗೂ ಸಲ್ಲುತ್ತದೆ. ಮಾಹಿಷ್ಮತಿಯನ್ನು ಜೀವಂತವಾಗಿ ಪರದೆಯ ಮೇಲೆ ತರಲು ಬಹಳ ಕಷ್ಟ ಪಟ್ಟಿದ್ದಾರೆ. ಇದಕ್ಕಾಗಿ ಸುಮಾರು 1,500 ರೇಖಾಚಿತ್ರಗಳನ್ನು ಸೃಷ್ಟಿಸಲಾಗಿತ್ತು ಎಂದು ತಿಳಿಸಿದರು.

ಬಾಹುಬಲಿ ಸಿನಿಮಾ ಸುಮಾರು 150 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣವಾಗಿತ್ತು. ನಟ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಟಿ ಅನುಷ್ಕಾ ಶೆಟ್ಟಿ, ರಮ್ಯ ಕೃಷ್ಣ, ತಮನ್ನಾ ಭಾಟಿಯಾ ಮತ್ತು ಸತ್ಯರಾಜು ಅಭಿನಯಿಸಿದ್ದರು.

 

 

Leave a Reply

Your email address will not be published. Required fields are marked *