Saturday, 23rd June 2018

Recent News

ಕಪಿಲ್ ಶರ್ಮಾ ಶೋದಿಂದ ಹೊರ ಬಂದ ಅಜಯ್ ಹೇಳಿದ್ದೇನು?

ಮುಂಬೈ: ಇತ್ತೀಚಿಗೆ ಅಜಯ್ ದೇವ್‍ಗನ್ ತಮ್ಮ ಬಾದ್‍ಶಾವೋ ಚಿತ್ರದ ಪ್ರಮೋಷನ್‍ಗಾಗಿ ಕಪಿಲ್ ಶರ್ಮಾ ಶೋಗೆ ತೆರಳಿದ್ದರು. ಕಪಿಲ್ ಅನಾರೋಗ್ಯದ ಕಾರಣದಿಂದಾಗಿ ಶೂಟಿಂಗ್‍ನನ್ನು ರದ್ದುಗೊಳಿಸಿದ್ದರಿಂದ ಅಜಯ್ ದೇವ್‍ಗನ್ ಕೋಪಗೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈ ಸುದ್ದಿಗೆ ನಟ ಅಜಯ್ ದೇವ್‍ಗನ್ ಪ್ರತಿಕ್ರಿಯಿಸಿದ್ದಾರೆ.

ಅಜಯ್ ದೇವ್‍ಗನ್ ತಮ್ಮ ಮುಂಬರುವ ‘ಬಾದ್‍ಶಾವೋ’ ಚಿತ್ರದ ಪ್ರಮೋಷನ್‍ಗಾಗಿ ಕಪಿಲ್ ಶರ್ಮಾ ಶೋಗೆ ಹೋಗಿದ್ದರು. ಕೊನೆಯ ನಿಮಿಷದಲ್ಲಿ ಕಪಿಲ್ ಶೋವನ್ನು ರದ್ದುಗೊಳಿಸಿದ ಕಾರಣ ಅಜಯ್ ಕೋಪದಿಂದ ಕಪಿಲ್ ಶರ್ಮಾ ಶೋನಿಂದ ಹೊರಟು ಹೋದರು ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

 

ಅಲ್ಲಿ ಏನಾಯಿತು ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ಪತ್ರಿಕೆಗಳಲ್ಲಿ ನಾವು ಕೋಪದಿಂದ ಹೊರಟು ಹೋದೆವು ಎಂದು ಹೇಳಲಾಗಿತ್ತು. ಇದು ನಿಜವಲ್ಲ ಕಪಿಲ್ ಶೋನ ಸೆಟ್‍ಗೆ ಇನ್ನೂ ಬಂದಿಲ್ಲದ ಕಾರಣ ನಾವು ಹೊರ ಬಂದಿದ್ದೇವೆ. ಕಪಿಲ್ ನನಗೆ ಒಳ್ಳೆಯ ಸ್ನೇಹಿತ. ಮುಂದಿನ ಬಾರಿ ಕಪಿಲ್‍ನನ್ನು ಭೇಟಿಯಾದಾಗ ಏನಾಯಿತು ಎಂದು ಕೇಳುತ್ತೇನೆ. ಕಪಿಲ್ ಯಾವುದೋ ತೊಂದರೆಯಲ್ಲಿ ಇದ್ದಾರೆ ಎಂದು ಅಜಯ್ ಸ್ಪಷ್ಟಪಡಿಸಿದ್ದಾರೆ.

ಈ ಮೊದಲು ಶಾರೂಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಜಬ್ ಹ್ಯಾರಿ ಮೇಟ್ ಸೆಜಲ್ ಚಿತ್ರದ ಪ್ರಮೋಷನ್‍ಗಾಗಿ ಕಪಿಲ್ ಶರ್ಮಾ ಶೋಗೆ ತೆರಳಿದ್ದ ವೇಳೆಯೂ ಇದೇ ರೀತಿಯಾಗಿ ಶೋ ರದ್ದಾಗಿತ್ತು. ಆದರೆ ಈ ಬಗ್ಗೆ ಶಾರೂಖ್ ಖಾನ್ ಇದೂವರೆಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಕಪಿಲ್ ಮಾತ್ರ ತಮ್ಮ ಟ್ವಿಟರ್ ನಲ್ಲಿ ಅನಾರೋಗ್ಯದ ಕಾರಣ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಯಿತು ಎಂದು ತಿಳಿಸಿದ್ದರು.

ಇದನ್ನೂ ಓದಿ: ಕಪಿಲ್ ಶರ್ಮಾ ಶೋನಿಂದ ಕೋಪಗೊಂಡು ಹೊರಬಂದ ಅಜಯ್ ದೇವ್‍ಗನ್

Leave a Reply

Your email address will not be published. Required fields are marked *