ದಾವಣಗೆರೆ: ಸದಾ ಒಂದಲ್ಲ ಎಂದು ವಿಚಾರದಲ್ಲಿ ಸುದ್ದಿಯಾಗುತ್ತಿರುವ ರೇಣುಕಾಚಾರ್ಯ ಈಗ ದಾವಣಗೆರೆಯಲ್ಲಿ ಹೋರಿ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕವಾಗಿ ಮತ್ತೆ ಸುದ್ದಿಯಾಗಿದ್ದಾರೆ.
ತೀರ್ಥಗಿರಿ ಡಾನ್ ಹುಟ್ಟುಹಬ್ಬ!
ಬೆಳಗುತ್ತಿ ಗ್ರಾಮದ ಯುವ ಮಿತ್ರ ಮಂಜು ಅವರಿಗೆ ಹೋರಿ ಬೆಳೆಸುವ ಕ್ರೇಜ್.
ಮಂಜು ಅವರ ತೀರ್ಥಗಿರಿ ಡಾನ್ ಹೋರಿಗೆ ಹುಟ್ಟುಹಬ್ಬದ ಸಂಭ್ರಮದ ಹಿನ್ನೆಲೆ ಪವಿತ್ರ ಶ್ರೀ ಕ್ಷೇತ್ರ ತೀರ್ಥರಾಮೇಶ್ವರ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡೆನು. pic.twitter.com/rFdH7vdwpN
— M P Renukacharya (@MPRBJP) July 12, 2021
Advertisement
ಹೋರಿ ಮಾಲೀಕನೋರ್ವ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಹೋರಿ ಹುಟ್ಟುಹಬ್ಬವನ್ನು ಆಚರಿಸಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬೆಳಗುತ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಹೊನ್ನಾಳಿ ಹೋರಿ ರೇಣುಕಾಚಾರ್ಯಗೆ ಡಿಚ್ಚಿ ಹೊಡೆದ ರಿಯಲ್ ಹೋರಿ
Advertisement
???? pic.twitter.com/WpdCMOnZMe
— M P Renukacharya (@MPRBJP) July 12, 2021
Advertisement
ಹೋರಿ ಹುಟ್ಟುಹಬ್ಬ ಆಚರಿಸಿದ ಎಂ.ಪಿ ರೇಣುಕಾಚಾರ್ಯ ತೀರ್ಥಗಿರಿ ಡಾನ್ ಎಂಬ ಕೊಬ್ಬರಿ ಹೋರಿಯ ಮಾಲೀಕ ಮಂಜುನಾಥ್, ಕೇಕ್ ಕತ್ತರಿಸಿ ತಮ್ಮ ಪ್ರೀತಿಯ ಹೋರಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇದೇ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಸಹ ಖುದ್ದಾಗಿ ಕೇಕ್ ಕತ್ತರಿಸಿ ಹೋರಿ ಹುಟ್ಟುಹಬ್ಬಕ್ಕೆ ಸಂತಸ ವ್ಯಕ್ತಪಡಿಸಿದರು.ಇದನ್ನೂ ಓದಿ: ಮತ್ತೊಮ್ಮೆ ಹೋರಿಯಿಂದ ತಪ್ಪಿಸಿಕೊಂಡ ರೇಣುಕಾಚಾರ್ಯ
Advertisement
ಯುವ ಮಿತ್ರ ಮಂಜು ಹಾಗೂ ಗ್ರಾಮಸ್ಥರ ಆಹ್ವಾನದ ಮೇರೆಗೆ ತೀರ್ಥಗಿರಿ ಡಾನ್ ಹೋರಿಯ ಹುಟ್ಟುಹಬ್ಬದದಲ್ಲಿ ಪಾಲ್ಗೊಂಡು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬದವನ್ನು ಆಚರಿಸಲಾಯಿತು. ಕಳೆದ 14 ವರ್ಷಗಳಿಂದ ಹೋರಿ ಸ್ಪರ್ಧೆಗಳಲ್ಲಿ ಯಾರ ಕೈಗೂ ಕೊಬ್ಬರಿ ಕೀಳಲು ಸಿಗದ ತೀರ್ಥಗಿರಿ ಡಾನ್ ಹೋರಿ ಮಾಲೀಕ ಮಂಜು ಅವರಿಗೆ ಸಾಕಷ್ಟು ಬಹುಮಾನ ತಂದು ಕೊಟ್ಟಿರುತ್ತದೆ.
— M P Renukacharya (@MPRBJP) July 12, 2021
ಕಳೆದ 14ವರ್ಷಗಳಿಂದ ಯಾರ ಕೈಗೂ ಕೊಬ್ಬರಿ ಕೀಳಲು ಸಿಗದೆ ತೀರ್ಥಗಿರಿ ಡಾನ್ ತನ್ನ ಮಾಲೀಕನಿಗೆ ಸಾಕಷ್ಟು ಬಹುಮಾನ ತಂದು ಕೊಟ್ಟಿದೆ. ಹೀಗಾಗಿ ಬಲಿಷ್ಠ ಹೋರಿ ಹುಟ್ಟುಹಬ್ಬವನ್ನು ಶಾಸಕ ರೇಣುಕಾಚಾರ್ಯ ಕೈಯಲ್ಲಿ ಕೇಕ್ ಕತ್ತರಿಸುವ ಮೂಲಕ ಮಂಜುನಾಥ್ ವಿಶೇಷವಾಗಿ ಆಚರಿಸಿದ್ದಾರೆ.