– ಗಂಡಂದಿರಿಗೆ ತಿಳಿಯದಂತೆ ವೇಶ್ಯಾವಾಟಿಕೆ
– ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದ ಮಹಿಳೆಯರು
ಲಕ್ನೋ: ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರು ವಿವಾಹಿತೆಯರು, ಓರ್ವ ಯುವತಿ ಮತ್ತು ಗ್ರಾಹಕರಿಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ದಂಧೆಯ ಕಿಂಗ್ ಪಿನ್ ಎಸ್ಕೇಪ್ ಆಗಿದ್ದಾನೆ. ಉತ್ತರ ಪ್ರದೇಶದ ಆಗ್ರಾ ರಕಾಬಂಗಾಜ್ನಲ್ಲಿರುವ ಆರ್.ಬಿ.ರೆಸಿಡೆನ್ಸಿ ಹೋಟೆಲ್ ನಲ್ಲಿ ಸೆಕ್ಸ್ ದಂಧೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು.
Advertisement
ಹೋಟೆಲ್ ಮೇಲೆ ದಾಳಿ ನಡೆಸಿದಾಗ ವಿವಿಧ ಕೋಣೆಗಳಲ್ಲಿದ್ದ ಒಟ್ಟು ಏಳು ಜನರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರ ದಾಳಿಯಾಗುತ್ತಲೇ ಭಯಗೊಂಡ ಯುವತಿ ಗೋಳು ಅಂತ ಕಣ್ಣೀರಿಟ್ಟಿದ್ದಾಳೆ. ಎಲ್ಲರನ್ನ ಠಾಣೆಗೆ ಕರೆ ತಂದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Advertisement
Advertisement
ಗಂಟೆಗಳ ಲೆಕ್ಕದಲ್ಲಿ ಹಣ: ಮಹಿಳೆಯರು ಫಿರೋಜಾಬಾದ್, ಧನೌಲಿ, ಮಲ್ಪುರಾ ನಿವಾಸಿಗಳೆಂದು ತಿಳಿದು ಬಂದಿದೆ. ಹೋಟೆಲ್ ಹೊರಗೆ ನಿಲ್ಲುತ್ತಿದ್ದ ವ್ಯಕ್ತಿ ಗಂಟೆಗೆ 600 ರೂ.ಯಂತೆ ಕೋಣೆಗಳನ್ನ ಬಾಡಿಗೆ ನೀಡುತ್ತಿದ್ದನು. ಇನ್ನು ಹೋಟೆಲ್ ನಲ್ಲಿದ್ದ ಮಹಿಳೆಯರು ಸಾವಿರ ರೂಪಾಯಿ ಪಡೆದುಕೊಳ್ಳುತ್ತಿದ್ದರು.
Advertisement
ವಿವಾಹಿತ ಮಹಿಳೆಯರು: ವೇಶ್ಯಾವಾಟಿಕೆ ಸಿಲುಕಿರುವ ಮಹಿಳೆಯರಿಗೆ ಗಂಡ, ಮಕ್ಕಳು ಇವೆ. ಸ್ಪಾಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಕೊರೊನಾ ವೇಳೆ ಕೆಲಸ ಕಳೆದುಕೊಂಡಿದ್ದರು. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಇವರು ದೇಹ ವ್ಯಾಪಾರಕ್ಕೆ ಮುಂದಾಗಿದ್ದರು. ಆದ್ರೆ ಇವರ ಈ ಕೆಲಸ ಕುಟುಂಬಸ್ಥರಿಗೆ ಹೇಳಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಹೇಶ್ ಕುಮಾರ್ ಹೇಳಿದ್ದಾರೆ.
ಇದೇ ಪ್ರಕರಣದಲ್ಲಿ ಸಿಲುಕಿರುವ ಯುವತಿ ತನ್ನ ಹೆಸರು ಮತ್ತು ವಿಳಾಸ ಹೇಳಿಲ್ಲ. ಗೆಳೆಯನ ಜೊತೆ ಬಂದಿದ್ದೆ ಎಂದು ಕಣ್ಣೀರು ಹಾಕುತ್ತಿದ್ದಾಳೆ. ಆದ್ರೆ ರೂಮ್ ಬುಕ್ ಮಾಡಿದ್ಯಾಕೆ ಎಂಬ ಪ್ರಶ್ನೆಗೆ ಯುವತಿ ಉತ್ತರಿಸುತ್ತಿಲ್ಲ. ಬಂಧಿತ ಯುವಕರು ಮಲ್ಪುರಾದವರು ಎಂದು ವರದಿಯಾಗಿದೆ.