– ರಾಶಿ ರಾಶಿ ಕಾಂಡೋಮ್, ವಿವಿಧ ಮಾತ್ರೆಗಳು ಪತ್ತೆ
ನವದೆಹಲಿ: ಹೋಟೆಲ್ ಸೆಕ್ಸ್ ದಂಧೆ ಮೇಲೆ ನೊಯ್ಡಾ ಪೊಲೀಸರು 12 ಯುವತಿಯರು ಸೇರಿದಂತೆ 23 ಜನರನ್ನ ಬಂಧಿಸಿದ್ದಾರೆ. ದಾಳಿ ವೇಳೆ ಕಾಂಡೋಮ್, ವಿವಿಧ ಮಾತ್ರೆಗಳು ಪತ್ತೆಯಾಗಿವೆ.
ನೋಯ್ಡಾದ ಗೌತಮಬುದ್ಧ ನಗರ ಜಿಲ್ಲೆಯ ಚೀತಿ ಗ್ರಾಮದಲ್ಲಿರುವ ಕ್ರೌನ್ ಪ್ಲಾಜಾ ಹೋಟೆಲ್ ನಲ್ಲಿ ಸೆಕ್ಸ್ ದಂಧೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಶನಿವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸೆಕ್ಸ್ ನಲ್ಲಿ ತೊಡಗಿದ್ದ ಜೋಡಿಗಳನ್ನ ರೆಡ್ ಹ್ಯಾಂಡ್ ಹಿಡಿದಿದ್ದಾರೆ. ಹೋಟೆಲ್ ಮ್ಯಾನೇಜರ್ ಸೇರಿದಂತೆ ಒಟ್ಟು 23 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಗೆಳೆಯನೊಂದಿಗೆ ಸುತ್ತಾಟ, ಸೆಕ್ಸ್ – ಮನೆಗೆ ಬಂದು ರೇಪ್ ಆಯ್ತು ಅಂದ್ಳು!
Advertisement
Advertisement
ಹೋಟೆಲ್ ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರ ಮಾಹಿತಿ ಮೇರೆಗೆ ಗ್ರೇಟರ್ ನೊಯ್ದಾದ ಡಿಸಿಪಿ ರಾಜೇಶ್ ಕುಮಾರ್ ನೇ ತೃತ್ವದಲ್ಲಿ ಶನಿವಾರ ತಡರಾತ್ರಿ ಈ ದಾಳಿ ನಡೆಸಲಾಗಿತ್ತು. ಓರ್ವ ಪೇದೆ ಮತ್ತು ಚಾಲಕ ಈ ತಂಡಕ್ಕೆ ಸಹಾಯ ಮಾಡುತ್ತಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತವಾಗಿದ್ದರಿಂದ ಇಬ್ಬರನ್ನ ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ. ಇದನ್ನೂ ಓದಿ: ಸೆಕ್ಸ್ ವೇಳೆ ಹಂದಿಯಂತೆ ಕಿರುಚಬೇಡ – ಮಹಿಳೆಗೆ ನೆರೆಮನೆಯವರಿಂದ ಪತ್ರ