– ಜೀವನದ ಬ್ಯೂಟಿಯನ್ನು ವರ್ಣಿಸಿದ ಸುದೀಪ್
– ದುಬೈನಿಂದ ಪಬ್ಲಿಕ್ ಟಿವಿ ಪ್ರಶ್ನೆಗಳಿಗೆ ವಿಕ್ರಾಂತ್ ರೋಣ ಉತ್ತರ
ಬೆಂಗಳೂರು/ ಸೌದಿ ಅರೇಬಿಯಾ: ಇವತ್ತಿನ ಯುವಜನತೆ ನಮಗೆ ಪ್ರೇರಣೆ. ಎಂಜಿನಿಯರಿಂಗ್ ಮಾಡಿ ದುಡ್ಡು ಕೊಟ್ಟು ಕಲಿತ ವಿದ್ಯೆ, ನಾಲೆಡ್ಜ್ ತಲೇಲಿ ಕೂರಲಿಲ್ಲ. ಆವಾಗ ಏನಾದ್ರೂ ಮಾಡಲೇಬೇಕು ಅಂದ್ಕೊಂಡೆ. ಆಗ ಪ್ರಿಯಾನ ಇನ್ನೂ ಮದುವೆಯಾಗಿರಲಿಲ್ಲ. ಆಗ ಅವಳು ಗರ್ಲ್ ಫ್ರೆಂಡ್. ಬಾ ನನ್ನ ಪಿಕ್ಚರ್ ನೋಡೋಣ ಅಂತ ಕರ್ಕೊಂಡು ಹೋದೆ. ಥಿಯೇಟರಲ್ಲಿ ಐದೇ ಜನ ಇದ್ದರು. ಆಗ ಒಂದು ಹೌಸ್ ಫುಲ್ ಬೇಕಾಗಿತ್ತು. ಅದಾದ ಮೇಲೆ ಒಳ್ಳೊಳ್ಳೆಯ ಸಿನೆಮಾ ಬಂತು. ಒಳ್ಳೆಯ ನಿರ್ದೇಶಕರು ಸಿಕ್ಕಿದ್ರು. ಫ್ಲೋ ಜೊತೆ ನಾನು ಹೋದೆ ಎಂದು ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ 25 ವರ್ಷದ ಸಿನಿ ಜರ್ನಿಯ ಬಗ್ಗೆ ಮೆಲುಕು ಹಾಕಿಕೊಂಡರು.
Advertisement
ಸಿನಿಮಾ ಸಂಬಂಧ ಈಗಾಗಲೇ ದುಬೈ ತಲುಪಿರುವ ಕಿಚ್ಚ ಇಂದು ಅಲ್ಲಿಂದಲೇ ಕರ್ನಾಟಕದ ಪತ್ರಕರ್ತರ ಜೊತೆ ಸಂಭಾಷಣೆ ನಡೆಸಿದ್ದಾರೆ. ಬೆಂಗಳೂರಿನ ಶಾರದಾ ಚಿತ್ರಮಂದಿರದಲ್ಲಿ ಕಿಚ್ಚ ನೇರಪ್ರಸಾರದಲ್ಲಿ ಮಾತನಾಡಿದ್ದು, ಈ ವೇಳೆ ಪಬ್ಲಿಕ್ ಟಿವಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನಾನು ಯಾವುದೇ ಅಜೆಂಡಾ ಹಾಕಿ ಕೂರಲಿಲ್ಲ. ಅದರಿಂದ ನನಗೆ ತೃಪ್ತಿ ಸಿಕ್ಕಿತು. 25 ವರ್ಷ ಆದ ಮೇಲೆಯೂ ಜನ ಬರ್ತಾರಂದ್ರೆ ಸಿನೆಮಾ ನಮ್ಮ ಕೈಹಿಡಿದಿರುತ್ತೆ. ಅದೇ ನಮಗೆ ಮುಖ್ಯ, ಅದೇ ನಮಗೆ ಗೌರವ. ಎಷ್ಟೋ ಹೀರೋಗಳಿದ್ದಾರೆ. ಅವರ ನಡುವೆಯೂ ಜನ ಬರ್ತಿರೋದು ನೋಡಿ ನನಗೆ ಖುಷಿಯಿದೆ ಎಂದು ಸಂತಸ ಹಂಚಿಕೊಂಡರು.
Advertisement
2012ರಲ್ಲಿ ದುಬೈಗೆ ಬಂದಿದ್ದೆ. ಆಗ ನಾನೇ ಕ್ಯಾಬ್ ಬುಕ್ ಮಾಡಿದ್ದೆ. ಹೋಟೆಲಿಂದ ಬಂದು ಪಿಕ್ ಅಪ್ ಮಾಡಿದ್ರು. ಆಗ ಮಗಳು ಇನ್ನೂ ಚಿಕ್ಕವಳಿದ್ಳು. ಮೊನ್ನೆ ಬಂದಾಗ ನಿರ್ಮಾಪಕರು ಕಾರು ಮಾಡಿರ್ತಾರೆ ಅಂದ್ಕೊಂಡಿದ್ದೆ. ಲೆಗ್ ಸ್ಪೇಸ್ ಜಾಸ್ತಿ ಇರೋ ಕಾರು ಬೇಕು ಅಂತ ಕೇಳಿದ್ದೆ. ಚಿಕ್ಕ ಕಾರು ಹಾಕ್ಬಿಟ್ಟೀಯಾ ಅಂತ ಹೇಳಿದ್ದೆ. ಇಲ್ಲಿ ಬಂದಾಗ ಸಿಕ್ಕಿದ ಸ್ವಾಗತ ನೋಡಿ ಆಶ್ಚರ್ಯ ಆಯ್ತು ಎಂದರು.
Advertisement
Advertisement
ನಿನ್ನೆ ತುಂಬಾ ಹೊಟ್ಟೆ ಹಸೀತಾ ಇತ್ತು. ಫ್ಯಾಮಿಲಿ ಜೊತೆ ಹೋಟೆಲ್ ಗೆ ಹೋಗಿದ್ವಿ. ಸಿಝಾನ್ ಬುರಾಕ್ ಹೋಟೆಲ್ ಗೆ ಹೋಗಿದ್ವಿ. ಅಲ್ಲಿ ಹೋದಾಗ ದೊಡ್ಡ ನಾನ್ ಮಾಡ್ಕೊಂಡು ಬಂದ್ರು. ಅದ್ರಲ್ಲಿ ಕಿಂಗ್ ಕಿಚ್ಚ ಅಂತ ಬರೆದಿದ್ರು. ಇದೆಲ್ಲವೂ ನನಗೆ ಹೊಸದು, ನಾನು ಕೇಳಿರಲಿಲ್ಲ. ನನಗೆ ಸ್ಪೆಷಲ್ ಫೀಲ್ ಮಾಡಿದ್ರು. ನನ್ನ ಪರಿಚಯ ಇವರಿಗೆ ಯಾವಾಗ ಆಯ್ತು ಅಂದ್ಕೊಂಡೆ. ಇವರು ಯಾವಾಗ ನನ್ನ ನೋಡಿದ್ರು. ಇದೆಲ್ಲವೂ ನನಗೆ ಸರ್ ಪ್ರೈಸ್. ಪಾಕಿಸ್ತಾನಿಗಳು ಬಂದು ಫೋಟೋ ತೆಗೆಸಿಕೊಂಡ್ರು. ಅದೇ ಜೀವನದ ಬ್ಯೂಟಿ ಎಂದು ಕಿಚ್ಚ ಬಣ್ಣಿಸಿದರು.
ಯಾವುದರಿಂದ ಬೆಳೆದ್ವಿ, ಯಾರಿಂದ ಬೆಳೆದ್ವಿ ಅನ್ನೋದಕ್ಕಿಂತ ಬೆಳೆದ್ವಿ, ಕೈಹಿಡ್ಕೊಂಡು ಕರ್ಕೊಂಡು ಹೋಯಿತು. ಬುರ್ಜ್ ಖಲೀಫಾ ಮುಂದೆ ನಿಂತ್ಕೊಂಡು ಹೇಗೆ ಬರಬಹುದು, ಹೇಗೆ ಕಾಣಬಹುದು ಟೈಟಲ್ ಅಂತ ಯೋಚನೆ ಮಾಡ್ತೀವಿ. ಈ ಸಿನೆಮಾದಲ್ಲಿರೋರು ಎಲ್ಲರೂ ಹೊಸಬರು. ಅವರೆಲ್ಲ ನನಗಿಂತ ಜಾಸ್ತಿ ಎಕ್ಸೈಟ್ ಆಗಿದ್ದಾರೆ. ನನ್ನ ಪಿಚ್ಚರ್ ರಿಲೀಸ್ ಆದಾಗ ಐದು ಜನ ಇರಲಿಲ್ಲ. ನಿಮಗೆ ಒಂದು, ಎರಡು ಪಿಕ್ಚರ್ ಗೇ ಈ ಪುಣ್ಯ ಸಿಗ್ತಾ ಇದೆ ಅಂತ ಹೇಳ್ತಿರ್ತೀನಿ. ಇವೆಲ್ಲವೂ ನೈಸ್ ಫೀಲಿಂಗ್ ಎಂದು ಹೇಳಿದರು.