ಬೆಂಗಳೂರು: ಆಪಲ್ ಐಫೋನ್ ತಯಾರಿಸುವ ತೈವಾನಿನ ವಿಸ್ಟರ್ನ್ ಕಂಪನಿ ಬೆಂಗಳೂರಿನ ಹೊಸಕೋಟೆ ಸಮೀಪ ದೊಡ್ಡ ಗೋದಾಮು ಸ್ಥಾಪಿಸಲು ಮುಂದಾಗಿದೆ.
ವಿಸ್ಟರ್ನ್ ಕಂಪನಿ ಈಗಾಗಲೇ ಬೆಂಗಳೂರಿನ ಪೀಣ್ಯ ಮತ್ತು ಕೋಲಾರದ ನರಸಾಪುರದಲ್ಲಿ ಐಫೋನ್ ಜೋಡಣಾ ಘಟಕವನ್ನು ಸ್ಥಾಪಿಸಿದೆ. ಈಗ ತನ್ನ ಉತ್ಪನ್ನವನ್ನು ಸಂಗ್ರಹಿಸಲು ಹೊಸಕೋಟೆ ಬಳಿ ದೊಡ್ಡ ಗೋದಾಮು ಸ್ಥಾಪನೆಗೆ ಮುಂದಾಗಿದೆ.
Advertisement
ಈ ಗೋದಾಮಿನಲ್ಲಿ 3 ಸಾವಿರ ಮಂದಿಗೆ ಉದ್ಯೋಗ ಸಿಗುವ ಸಾಧ್ಯತೆಯಿದೆ. ಗೋದಾಮು, ಜೋಡಣಾ ಘಟಕ ಸೇರಿ ಒಟ್ಟು 10 ಸಾವಿರ ಮಂದಿಗೆ ಉದ್ಯೋಗ ನೀಡಲು ವಿಸ್ಟರ್ನ್ ಕಂಪನಿ ಮುಂದಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ. ವಿಸ್ಟರ್ನ್ ಮತ್ತು ಆಪಲ್ ಕಂಪನಿ ಗೋದಾಮು ತೆರೆಯುವ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಬೆಂಗಳೂರಿನಲ್ಲಿ ದೊಡ್ಡ ಕಚೇರಿ ತೆರೆಯಲಿದೆ ಆಪಲ್
Advertisement
Advertisement
ನರಾಸಪುರದಲ್ಲಿ 43 ಎಕ್ರೆ ಜಾಗದಲ್ಲಿ ಘಟಕ ತೆರೆದಿರುವ ವಿಸ್ಟರ್ನ್ 3 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ. ಈಗಾಗಲೇ ಕಂಪನಿ 1 ಸಾವಿರ ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದೆ.
Advertisement
ಕೋವಿಡ್ 19 ಬಳಿಕ ಚೀನಾ ಅವಲಂಬನೆ ಕಡಿಮೆ ಮಾಡಿ ಬೇರೆ ದೇಶಗಳಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಕಂಪನಿಗಳು ಮುಂದಾಗುತ್ತಿವೆ. ಭಾರತ ಈಗ ವಿಶ್ವದ ಕಂಪನಿಗಳನ್ನು ಆಕರ್ಷಿಸುತ್ತಿವೆ. ಸರ್ಕಾರಗಳು ಮೂಲಸೌಕರ್ಯ ಅಭಿವೃದ್ಧಿ ಪಡಿಸಿ ಘಟಕ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದರೆ ಸಾವಿರಾರು ಮಂದಿಗೆ ಉದ್ಯೋಗ ಸಿಗಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಇದನ್ನೂ ಓದಿ: ಚೀನಾ ವಿರುದ್ಧ ಹಾರ್ಡ್ವೇರ್ ಸ್ಟ್ರೈಕ್ – ಐಫೋನ್ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್ ಹೂಡಿಕೆ
ಆಪಲ್ ಕಂಪನಿ ಗುತ್ತಿಗೆ ನೀಡುತ್ತಿರುವ ಫಾಕ್ಸ್ಕನ್, ಪೆಗಟ್ರಾನ್ ಮತ್ತು ವಿಸ್ಟರ್ನ್ ಭಾರತದಲ್ಲಿ ಭಾರೀ ಹೂಡಿಕೆ ಮಾಡಲು ಮಂದಾಗಿದೆ. ಫಾಕ್ಸ್ಕನ್ ಕಂಪನಿ ಐಫೋನ್ ಎಕ್ಸ್ ಆರ್ ತಯಾರಿಸುವ ಶ್ರೀಪೆರಂಬದೂರು ಘಟಕ್ಕೆ 1 ಶತ ಕೋಟಿ ಡಾಲರ್ ಹ ಣವನ್ನುಹೂಡಿಕೆ ಮಾಡಲಿದ್ದರೆ , ಪೆಗಾಟ್ರನ್ ಕಂಪನಿ 150 ದಶಲಕ್ಷ ಡಾಲರ್ ಹಣವನ್ನು ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗುತ್ತಿದ್ದೇವೆ ಎಂದು ಹೇಳಿದೆ.
ಆಪಲ್ ಕಂಪನಿಗೆ ಚಾರ್ಜರ್ ಪೊರೈಕೆ ಮಾಡುವ ಸಲ್ಕಾಂಪ್ ಕಂಪನಿ ಚೆನ್ನೈ ಎಸ್ಇಝಡ್ನಲ್ಲಿ ಮುಚ್ಚಲ್ಪಟ್ಟಿರುವ ನೋಕಿಯಾ ಘಟಕವನ್ನು ಖರೀದಿಸಿದ್ದು ಮುಂದಿನ 5 ವರ್ಷದಲ್ಲಿ 2 ಸಾವಿರ ಕೋಟಿ ರೂ. ಹಣವನ್ನು ಹೂಡಿಕೆ ಮಾಡಲಿದೆ.
ಇತ್ತೀಚಿಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಮುಂದಿನ 5 ವರ್ಷದಲ್ಲಿ 11 ಲಕ್ಷ ಕೋಟಿ ಹಣವನ್ನು ಭಾರತ ಮತ್ತು ವಿದೇಶದ ಕಂಪನಿಗಳು ದೇಶದಲ್ಲಿ ಹೂಡಿಕೆ ಮಾಡಲಿವೆ ಎಂದು ತಿಳಿಸಿದ್ದರು.
ಭಾರತವನ್ನು ಮೊಬೈಲ್ ಉತ್ಪಾದನಾ ಹಬ್ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಯನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಮತ್ತು ವಿಶ್ವದ ಹಲವು ಕಂಪನಿಗಳು ಆಯ್ಕೆಯಾಗಿವೆ. ಇದನ್ನೂ ಓದಿ: ದೇಶೀಯ ಫೋನ್ ತಯಾರಿಕಾ ಕಂಪನಿ ಖರೀದಿಗೆ ಮುಂದಾದ ಜಿಯೋ