ಮುಂಬೈ: ತಾನು ಮಾಡಿರುವ ಒಳ್ಳೆ ಕೆಲಸಗಳಿಗೆ ಪ್ರತಿಫಲ ಸಿಕ್ಕೆ ಸಿಗುತ್ತೆ ಎಂಬುದಕ್ಕೆ ಉತ್ತಮ ಉದಾಹರಣೆ ಬಾಲಿವುಡ್ ಸ್ಟಾರ್ ನಟ ಸೋನುಸೂದ್. ಜಗತ್ತಿನಾದ್ಯಂತ ಸೊಂಕು ಹರಡಿ ಕೂಲಿ ಕಾರ್ಮಿಕರು ಕಷ್ಟದಲ್ಲಿರುವಾಗ ಅವರ ಪಾಲಿನ ಆಶಾಕಿರಣವಾದ ಇವರು ಮತ್ತೊಂದು ಹೊಸ ಸಹಾಸಕ್ಕೆ ಕೈ ಹಾಕಿದ್ದಾರೆ.
ಕೊರೊನಾ ಲಾಕ್ಡೌನ್ ಸಮಯದಲ್ಲಿ ಬಾಲಿವುಡ್ ನಟ ಸೋನುಸೂದ್ ಮಾಡಿರುವ ಕೆಲಸ ಮರೆಯಲು ಸಾಧ್ಯವಿಲ್ಲ. ಜನಪರವಾದ ಇವರ ಕೆಲಸಕ್ಕೆ ಕೋಟ್ಯಂತರ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು.
Advertisement
Advertisement
ಇದೀಗ ಸೊನು ಅವರು ತಾನು ಹೊಸದೊಂದು ಹೆಜ್ಜೆಯನ್ನು ಇಟ್ಟಿದ್ದೇನೆ ಎಂಬುದನ್ನು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. “ಇನ್ನೋವೇಟಿವ್ ಸ್ಟಾರ್ಟ್ ಅಪ್..ಗೆಟ್ ರೆಡಿ ಇಟ್ಸ್ ಯುವರ್ ಟರ್ನ್” ಎಂದು ಟ್ವೀಟ್ ಮಾಡಿದ್ದಾರೆ.
Advertisement
Advertisement
ಟ್ಟಿಟ್ಟರ್ನಲ್ಲಿರುವ ಪೋಸ್ಟರ್ ನೋಡುತ್ತಿದ್ದರೆ ಸೋನು ಅವರು ಮಹತ್ತರವಾದಂತಹ ಹೆಜ್ಜೆಯನ್ನು ಇಡುತ್ತಿದ್ದಾರೆ ಎಂದು ತಿಳಿಯಬಹುದು. ಸೋನು ಅವರ ಈ ಮಹತ್ತರ ಹೆಜ್ಜೆ ಇಡಲು ಮುಂದಾಗುತ್ತಿದ್ದರೂ ಯಾವ ಸ್ಟಾರ್ಟ್ ಅಪ್ ಎನ್ನುವುದು ಇನ್ನೂ ನಿಗೂಢವಾಗಿದೆ. ಕನ್ನಡಿಗ ದಿಲ್ಮಾರ್ ಸಿನಿಮಾದ ನಾಯಕನಾಗಿ ನಟಿಸಿರುವ ರಾಮ್ ಅವರು ಸೋನು ಸೂದ್ ಜೊತೆಗೆ ಕೈ ಜೋಡಿಸಿದ್ದಾರೆ.
Stay Tuned ???? pic.twitter.com/d7MZbvC8ZK
— sonu sood (@SonuSood) November 18, 2020
ಜನರ ರಿಯಲ್ ಹೀರೋ ಆಗಿರುವ ಸೋನು ಸೂದ್ ಅವರನ್ನು ಪಂಜಾಬ್ ರಾಜ್ಯದ ಚುನಾವಣಾ ಆಯೋಗ ರಾಯಭಾರಿಯಾಗಿ ನೇಮಿಸಿದೆ. ‘ಐ ಆಮ್ ನಾಟ್ ಎ ಮೈಸೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಸೋನು ಅವರ ಲಾಕ್ಡೌನ್ ಅನುಭವದ ಪುಸ್ತಕ ಪ್ರಕಟವಾಗಲಿದೆ. ಸದ್ಯ ಸೋನುಸೂದ್ ಟ್ಟಿಟ್ಟರ್ನಲ್ಲಿ ಹಂಚಿಕೊಂಡಿರುವ ಈ ಪೋಸ್ಟರ್ ಇವರ ಮುಂದಿನ ಸಿನಿಮಾವೇ ಅಥವಾ ಸಾಮಾಜಿಕ ಕಾರ್ಯವೇ ಎಂಬ ಕುತೂಹಲ ಮೂಡಿಸಿದೆ.