ಬೆಂಗಳೂರು: ಹೊಸ ವರ್ಷ ಆಚರಣೆಗೆ ಬ್ರಿಗೇಡ್ ರಸ್ತೆ ಸಜ್ಜಾಗಲ್ಲ. ಯಾವುದೇ ಡೆಕೊರೇಷನ್ ಮತ್ತು ಲೈಟಿಂಗ್ಸ್ ಇರಲ್ಲ ಎಂದು ಬ್ರಿಗೇಡ್ಸ್ ಶಾಪ್ ಆ್ಯಂಡ್ ಎಸ್ಟಾಬ್ಲಿಷ್ಮೆಂಟ್ ಅಸೋಸಿಯೇಷನ್ ನಿರ್ಧಾರ ತೆಗೆದುಕೊಂಡಿದೆ ಎಂದು ಅಧ್ಯಕ್ಷ ಸುಹೇಲ್ ಹೇಳಿದ್ದಾರೆ.
Advertisement
ಕೋವಿಡ್ ಹಿನ್ನೆಲೆಯಲ್ಲಿ ಹೊಸವರ್ಷದ ಆರಂಭಕ್ಕೆ ಈ ಹಿಂದೆ ಬ್ರಿಗೇಡ್ ರೋಡ್ನಲ್ಲಿ ಮಾಡುತ್ತಿರುವ ಡೆಕೊರೇಷನ್ಗೆ ಬ್ರೇಕ್ ಹಾಕಿದೆ. ಬ್ರಿಗೇಡ್ ರಸ್ತೆ ಹೊಸ ವರ್ಷಕ್ಕೆ ಸಜ್ಜಾಗುವುದಿಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ಪ್ರತಿ ವರ್ಷ ಹೊಸ ವರ್ಷದ ಆರಂಭಕ್ಕೆ 7 ಲಕ್ಷ ವೆಚ್ಚ ಖರ್ಚು ಮಾಡಿ ಅಲಂಕಾರ ಲೈಟ್ ಹಾಗೂ ಭದ್ರತೆ ನೇಮಕ ಮಾಡಲು ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಇಂತಹ ಅಲಂಕಾರಿಕ ಲೈಟ್ ಅಥವಾ ಡೆಕೊರೇಷನ್ ಯಾವುದು ಇರುವುದಿಲ್ಲ ಎಂದು ಹೇಳಿದ್ದಾರೆ.
Advertisement
ಡಿ. 15ಕ್ಕೆ ದೀಪಗಳು ಝಗಮಗಿಸುತ್ತಿದ್ದವು. ಇಯರ್ ಎಂಡ್ ಆಫರ್ಗಾಗಿ ಶಾಪಿಂಗ್ ಭರಾಟೆ ಕೂಡ ಜೋರಾಗಿರುತ್ತಿತ್ತು. ಆದರೆ ಈ ಬಾರಿ ಲೈಟಿಂಗ್ ಇರಲ್ಲ. ನಮಗೆ ನಷ್ಟ ಆಗಬಹುದು ಆದರೆ ಜೀವನವೇ ಮುಖ್ಯವಾಗಿದೆ. ಸೆಲ್ಫಿ, ಫೋಟೋಗಾಗಿಯೇ ಹೆಚ್ಚು ಜನರು ಬರುತ್ತಿದ್ದರು. ಅಲಂಕಾರವೇ ಇಲ್ಲ ಎಂದರೆ ಜನರು ಗುಂಪು ಸೇರುವುದಿಲ್ಲ. ಸರ್ಕಾರದ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದು ಸುಹೇಲ್ ಹೇಳಿದ್ದಾರೆ.