– ಮಕ್ಕಳಿಗೆ ದಿನ ಬಿಟ್ಟು ದಿನ ತರಗತಿ
ಬೆಂಗಳೂರು: ಮೂರು ತಿಂಗಳ ಬಳಿಕ ವಿದ್ಯಾಗಮ ತರಗತಿಗಳು ಮತ್ತೆ ಆರಂಭವಾಗುತ್ತದೆ. ಪರಿಷ್ಕೃತ ರೂಪದಲ್ಲಿ ವಿದ್ಯಾಗಮ ಜಾರಿಗೆ ತರಲು ಸರ್ಕಾರ ಆದೇಶ ನೀಡಿದೆ. ಹೀಗಾಗಿ ಹೊಸ ಮಾರ್ಗಸೂಚಿ, ನಿಯಮದಲ್ಲಿ ವಿದ್ಯಾಗಮ ಶುರುವಾಗುತ್ತದೆ. ಹಾಗಿದ್ರೆ ಪರಿಷ್ಕೃತ ವಿದ್ಯಾಗಮ ಕ್ಲಾಸ್ಗಳಿಗೆ ಮಾರ್ಗಸೂಚಿ ಏನು..?, ಹೇಗಿದೆ ಪರಿಷ್ಕೃತ ವಿದ್ಯಾಗಮ…? ಎಂಬುದರ ಕಂಪ್ಲೀಟ್ ವರದಿ ಇಲ್ಲಿದೆ.
Advertisement
ವಿದ್ಯಾಗಮ ಮಾರ್ಗಸೂಚಿಗಳೇನು..?
ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಆವರಣದಲ್ಲಿ ವಿದ್ಯಾಗಮ ನಡೆಯುತ್ತದೆ. ಆನ್ಲೈನ್, ಡಿಡಿ ವಾಹಿನಿಯ ಪಾಠಗಳನ್ನು ಮುಂದುವರಿಸಬೇಕು. ಆನ್ಲೈನ್ ಕ್ಲಾಸ್ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅರ್ಧ ದಿನ ಪಾಠ ಮಾಡಬೇಕು.
Advertisement
ಪೋಷಕರ ಲಿಖಿತ ಒಪ್ಪಿಗೆಯೊಂದಿಗೆ ಮಕ್ಕಳು ವಿದ್ಯಾಗಮಕ್ಕೆ ಹಾಜರಾಗಬೇಕು. ಪ್ರತಿ ಶಾಲೆಯಲ್ಲಿ ಮಕ್ಕಳಿಗೆ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷೆ ನಡೆಸಬೇಕು. ಜ್ವರ, ಕೆಮ್ಮು, ನೆಗಡಿ, ಕೊರೊನಾ ಲಕ್ಷಣಗಳಿರುವ ವಿದ್ಯಾರ್ಥಿಗಳು ಹಾಜರಾಗುವಂತಿಲ್ಲ. ಪ್ರತಿ ವಿದ್ಯಾರ್ಥಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
Advertisement
Advertisement
ಶಾಲೆಗಳಲ್ಲಿ ಸ್ಯಾನಿಟೈಸರ್, ಸೋಪ್, ಇತರೆ ನೈರ್ಮಲೀಕರಣ ವ್ಯವಸ್ಥೆ ಮಾಡಬೇಕು. ಗ್ರಾಪಂ, ನಗರಸಭೆ, ಪುರಸಭೆಗಳು ಈ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳು ಬೇರೆ ಕಡೆ ಇದ್ದಲ್ಲಿ, ಸನಿಹದ ಶಾಲೆಗೆ ತೆರಳಿ ವಿದ್ಯಾಗಮದಲ್ಲಿ ಪಾಲ್ಗೊಳ್ಳಬಹುದು. ಶಿಕ್ಷಕರು, ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಮಕ್ಕಳನ್ನು ಗುಂಪುಗಳಾಗಿ ವಿಂಗಡಣೆ ಮಾಡಬೇಕು.
ಪ್ರತಿ ಗುಂಪಿನಲ್ಲಿ ಗರಿಷ್ಠ 15-20 ವಿದ್ಯಾರ್ಥಿಗಳು ಇರಬಹುದು, 7ರಿಂದ 8 ಗುಂಪು ಇರಬೇಕು. ಕೊಠಡಿ ಲಭ್ಯ ಇಲ್ಲದೇ ಇದ್ದಲ್ಲಿ ವಾಚನಾಲಯ, ಪ್ರಯೋಗಾಲಯ, ವರಂಡಾಗಳಲ್ಲಿ ವಿದ್ಯಾಗಮ ನಡೆಸಬೇಕು. ಪಾಳಿ ಪದ್ದತಿಯಲ್ಲಿ ವಿದ್ಯಾಗಮ, ಪ್ರತಿ ತರಗತಿಯ ಅವಧಿ 45 ನಿಮಿಷ ಇರಬೇಕು. ಬೆಳಗಿನ ಪಾಳಿಯಲ್ಲಿ 3 ತರಗತಿ, ಮಧ್ಯಾಹ್ನದ ಪಾಳಿಯಲ್ಲಿ 3 ತರಗತಿ ನಡೆಸಬೇಕು.
ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತರಲು ಸೂಚಿಸಬೇಕು. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯಗಳ ನೈರ್ಮಲ್ಯ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಸೋಂಕು ಲಕ್ಷಣ ಕಂಡು ಬಂದಲ್ಲಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಹಾಗೂ ಜಿಲ್ಲಾ ಪಂಚಾಯತ್ ಸಿಇಓಗೆ ಮೇಲ್ವೀಚಾರಣೆ, ಉಸ್ತುವಾರಿ ಹೊಣೆ ವಹಿಸಬೇಕು.
ವಿದ್ಯಾಗಮ ಯಾವ್ಯಾವ ತರಗತಿಗೆ ನಡೆಯುತ್ತೆ?
10ನೇ ತರಗತಿ: ಪ್ರತಿದಿನವೂ ವಿದ್ಯಾಗಮ ಕ್ಲಾಸ್ ನಡೆಯುತ್ತೆ. 8 ತಂಡಗಳಿಂದ ವಿದ್ಯಾರ್ಥಿಗಳಿಗೆ ಬೋಧನೆ ನೀಡಲಾಗುತ್ತದೆ. ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆ ಪ್ರತಿದಿನ ತರಗತಿ ನಡೆಸಲಾಗುತ್ತದೆ.
9ನೇ ತರಗತಿ: ದಿನ ಬಿಟ್ಟು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ವಿದ್ಯಾಗಮ ಕ್ಲಾಸ್ ನಡೆಯಲಿದ್ದು, ವಾರದಲ್ಲಿ 3 ದಿನ ಅಷ್ಟೇ ವಿದ್ಯಾಗಮ ತರಗತಿ ನಡೆಯುತ್ತದೆ.
8ನೇ ತರಗತಿ: ಮಂಗಳವಾರ, ಗುರುವಾರ ಪಾಠ ಬೋಧನೆ ಮಾಡಲಾಗುತ್ತದೆ. ವಾರದಲ್ಲಿ 2 ದಿನ ಮಾತ್ರ ವಿದ್ಯಾಗಮ ತರಗತಿ ನಡೆಯುತ್ತದೆ.
1-5 ನೇ ತರಗತಿ: ದಿನ ಬಿಟ್ಟು ದಿನ ತರಗತಿ ನಡೆಸಲಾಗುತ್ತದೆ. 1- 3ರವರೆಗೆ ಸೋಮವಾರ, ಬುಧವಾರ, ಶುಕ್ರವಾರ ತರಗತಿಗಖಳು ನಡೆದರೆ, 4-5 ನೇ ತರಗತಿ- ಮಂಗಳವಾರ, ಗುರುವಾರ, ಶನಿವಾರ ಕ್ಲಾಸ್ ಇರುತ್ತದೆ. 1-8ನೇ ಕ್ಲಾಸ್ ಹೊಂದಿರೋ ಶಾಲೆಯಲ್ಲಿಯೂ ದಿನ ಬಿಟ್ಟು ದಿನ ತರಗತಿ ನಡೆಯುತ್ತದೆ. 1-5ನೇ ತರಗತಿವರೆಗೆ ಸೋಮವಾರ, ಬುಧವಾರ, ಶುಕ್ರವಾರ ಕ್ಲಾಸ್ ಇದ್ದರೆ, 6-8ನೇ ತರಗತಿವರೆಗೆ ಮಂಗಳವಾರ, ಗುರುವಾರ, ಶನಿವಾರ ತರಗತಿ ಇರುತ್ತದೆ.
ಪುನರಾರಂಭಿಸಲು ಕಾರಣಗಳೇನು..?
ಶಾಲೆ ಆರಂಭದವರೆಗೆ ಶಿಕ್ಷಣ ತಲುಪಿಸುವ ಉದ್ದೇಶವಾಗಿದೆ. ಖಾಸಗಿ ಶಾಲೆ ಮಕ್ಕಳಿಗೆ ಆನ್ಲೈನ್ ಕ್ಲಾಸ್, ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾಗಮ ಮೂಲಕ ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀಳದಂತೆ ತಡೆಯೋದು. ಬಾಲ್ಯವಿವಾಹ ಹೆಚ್ಚಳ ತಡೆಗೆ ವಿದ್ಯಾಗಮ ಮರು ಜಾರಿ ಮಾಡಲಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಬಾಲ ಕಾರ್ಮಿಕ ಪದ್ಧತಿ ತಡೆಯಲು ಮರುಜಾರಿ. ಗ್ರಾಮೀಣ ಭಾಗದಲ್ಲಿ ಆನ್ಲೈನ್ ಶಿಕ್ಷಣ, ದೂರದರ್ಶನ ಕಲಿಕೆಯಿಂದ ವಂಚಿತ, ವಿದ್ಯಾಗಮದಿಂದ ಮಕ್ಕಳಿಗೆ ನಿತ್ಯ ಶಿಕ್ಷಣ, ಕಲಿಕಾ ಸಾಮರ್ಥ್ಯ ಸಮಚಿತ್ತದಲ್ಲಿಡಲು ವಿದ್ಯಾಗಮ ಮರುಜಾರಿ ಮಾಡಲಾಗುತ್ತಿದೆ.