– ದರ್ಶನ್ ಸೇರಿದಂತೆ 8 ಜನರ ಬಂಧನ
ಬೆಂಗಳೂರು: ಡ್ರಗ್ಸ್ ಜಾಲದ ಕಬಂಧ ಬಾಹು ಮತ್ತಷ್ಟು ಚಾಚಿಕೊಳ್ಳುತ್ತಿದೆ. ತುಸು ಸೈಲೆಂಟ್ ಆಗಿದ್ದ ಡ್ರಗ್ಸ್ ವಿಚಾರ ಇಂದು ಇದ್ದಕ್ಕಿದ್ದಂತೆ ಮಹತ್ವ ಪಡೆದುಕೊಂಡಿದೆ. ಡಗ್ಸ್ ಪೆಡ್ಲರ್ ಗಳಿಗೆ ಆಶ್ರಯ ಕೊಟ್ಟ ಆರೋಪದಡಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ನನ್ನು ಸಿಸಿಬಿ ಬಂಧಿಸಿದೆ.
Advertisement
ಇದೇ ತಿಂಗಳ ಐದನೇ ತಾರೀಕು ಸುಜಯ್ ಎಂಬಾತನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಫಾರಿನ್ ಪೋಸ್ಟ್ ಮೂಲಕ ಹೈಡ್ರೊ ಗಾಂಜಾ ತರಿಸಿಕೊಳ್ತಿದ್ದ ಸುಜಯ್ ನನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದ ಸಿಸಿಬಿ, 15 ಲಕ್ಷ ಮೌಲ್ಯದ ಹೈಡ್ರೊ ಗಾಂಜಾ ವಶಪಡಿಸಿಕೊಂಡಿತ್ತು. ಅಂದು ಈತನ ಜೊತೆಗಿದ್ದ ಹೇಮಂತ್ ಮತ್ತು ಸುನೀಶ್ ಎಸ್ಕೇಪ್ ಆಗಿದ್ದರು. ಇದೀಗ ಎಸ್ಕೇಪ್ ಆಗಿದ್ದ ಡ್ರಗ್ಸ್ ಆರೋಪಿಗಳಿಗೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಗೋವಾದಲ್ಲಿ ಆಶ್ರಯ ಕೊಟ್ಟ ಆರೋಪದಡಿ ಮೂವರನ್ನ ಅರೆಸ್ಟ್ ಮಾಡಲಾಗಿದೆ.
Advertisement
Advertisement
ಭಾನುವಾರ ಗೋವಾಗೆ ತೆರಳಿದ್ದ ಸಿಸಿಬಿ ಪೊಲೀಸರ ತಂಡ ಹೇಮಂತ್ ಮತ್ತು ಸುನೀಶ್ ನನ್ನ ಪತ್ತೆ ಮಾಡಿತ್ತು. ಗೋವಾದಲ್ಲಿ ಅವಿತುಕೊಳ್ಳಲು ಸಹಕಾರ ನೀಡಿದ ಆರೋಪದ ಮೇಲೆ ಇಬ್ಬರ ಜೊತೆಯಲ್ಲೇ ಇದ್ದ ದರ್ಶನ್ ಕೂಡ ಪೊಲೀಸರ ಅತಿಥಿಯಾಗಿದ್ದಾನೆ. ಇದೀಗ ದರ್ಶನ್ ಲಮಾಣಿ ಸೇರಿದಂತೆ ಪ್ರಕರಣದಲ್ಲಿ ಎಂಟು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
Advertisement
ನವೆಂಬರ್ 5ರಂದು ಸುಜಯ್, ಹೇಮಂತ್ ಮತ್ತು ಸುನಿಶ್ ಮೂವರು ಏರ್ ಪೋರ್ಟ್ ನ ಕಾರ್ಗೊ ಆಫೀಸ್ ಗೆ ಬಂದಿದ್ರು. ಫಾರಿನ್ ಪೋಸ್ಟ್ ಮೂಲಕ ಹೈಡ್ರೊ ಗಾಂಜಾ ತರಿಸಿಕೊಳ್ಳುತ್ತಿದ್ದು ಪಕ್ಕಾ ಆದ ಹಿನ್ನೆಲೆ ಅಲ್ಲೇ ಸುಜಯ್ ನನ್ನ ಅರೆಸ್ಟ್ ಮಾಡಲಾಗಿತ್ತು. ಕ್ರೈಂ ಪೊಲೀಸರನ್ನ ನೋಡಿದ್ದ ಹೇಮಂತ್ ಮತ್ತು ಸುಜಯ್ ಎಸ್ಕೇಪ್ ಆಗಿದ್ದರು. ಇದೀಗ ಎಸ್ಕೇಪ್ ಆಗಿರೊ ಆರೋಪಿಗಳಿಗೆ ದರ್ಶನ್ , ಗೋವಾದಲ್ಲಿ ಆಸ್ರಯ ಕೊಟ್ಟಿರೋದು ಡ್ರಗ್ಸ್ ಆರೋಪಿಗಳ ಜೊತೆ ಸಂಪರ್ಕದ ಬಗ್ಗೆ ಅನುಮಾನ ಮೂಡಲಾರಂಭಿಸಿದೆ.
ಈಗ ತನಿಖೆ ನಡೆಯುತ್ತಿರುವುದರಿಂದ ಏನೂ ಹೇಳಲು ಆಗಲ್ಲ. ನ.4 ರಂದು ಕಾರ್ಗೋ ಆಪರೇಷನ್ ಮಾಡಿ ಕೆಲವರನ್ನ ಬಂಧಿಸಲಾಗಿತ್ತು. ಅದರಲ್ಲಿ ಮತ್ತೊಂದಿಷ್ಟು ಜನ ಇದ್ದಾರೆ ಅಂತ ಗೊತ್ತಾಗಿತ್ತು. ಏರ್ ಪೋರ್ಟ್ ನಲ್ಲಿ ಇಬ್ಬರು ಪಾರ್ಸಲ್ ತೆಗೆದುಕೊಳ್ಳಲು ಹೋಗಿದ್ದರು. ನಾವು ಹುಡುಕಾಟ ನಡೆಸುವಾಗ ಒಬ್ಬ ಎಸ್ಕೇಪ್ ಆಗಿದ್ದ, ಮತ್ತೋರ್ವ ಸಿಕ್ಕಿದ್ದನು.ತದನಂತರ ಹುಡುಕಾಟ ನಡೆಸಿ 7 ಜನರನ್ನ ಬಂಧಿಸಿದ್ದೇವೆ. ಬಂಧಿತರನ್ನ್ನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮುಂದಿನ ತನಿಖೆ ನಡೆಯುತ್ತಿದ್ದು, ಯಾವ ಆರೋಪಿಯ ಹೆಸರು ಹೇಳಲು ಆಗಲ್ಲ. ತನಿಖೆ ನಡೆದ ನಂತರ ಎಲ್ಲವನ್ನೂ ಹೇಳುತ್ತವೆ ಎಂದು ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಹೇಳಿದ್ದಾರೆ.