ಬೆಂಗಳೂರು: ನಾನು ಬಾಯ್ಸ್ ರೀತಿಯ ಹೇರ್ ಕಟ್ ಮಾಡಿಸಿದ್ದೇನೆ ಹೊರತು ಖಿನ್ನತೆ ಒಳಗಾಗಿ ಕೂದಲನ್ನು ಕತ್ತರಿಸಿಕೊಂಡಿಲ್ಲ ಎಂದು ನಟಿ ಸಿಂಧು ಲೋಕನಾಥ್ ಅವರು ಹೇಳಿದ್ದಾರೆ.
ಇತ್ತೀಚೆಗೆ ಸಿಂಧು ಲೋಕನಾಥ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬಾಯ್ ಹೇರ್ ಕಟ್ ಮಾಡಿಸಿಕೊಂಡಿರುವ ಫೋಟೋ ಹಾಕಿ ಕೆಲ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದರು. ಇದನ್ನು ನೋಡಿದ ಕೆಲವರು ಸಿಂಧು ಖಿನ್ನತೆಗೆ ಒಳಗಾಗಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು.
Advertisement
https://www.facebook.com/SindhuLoknath/posts/2625571134327685
Advertisement
ಈಗ ಈ ವಿಚಾರವಾಗಿ ಮತ್ತೆ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕುವ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕ್ಲಾಸ್ ತೆಗೆದುಕೊಂಡಿರುವ ಸಿಂಧು ಲೋಕನಾಥ್, ನಾನು ಕೂದಲನ್ನು ಕತ್ತರಿಸಿದ್ದೇನೆ ಎಂದರೆ ನಾನು ಅನಾರೋಗ್ಯಕ್ಕೆ ತುತ್ತಾಗಿದ್ದೇನೆ ಅಥವಾ ನಾನು ಖಿನ್ನತೆ ಒಳಗಾಗಿದ್ದೇನೆ ಎಂಬ ಅರ್ಥವಲ್ಲ. ನಾನು ಬೇರೆ ರೀತಿಯ ಹೇರ್ ಸ್ಟೈಲ್ ಮಾಡಲು ಇಷ್ಟಪಡುತ್ತೇನೆ ಅದಕ್ಕೆ ಬಾಯ್ ಕಟ್ ಮಾಡಿಸಿದ್ದೇನೆ ಎಂದಿದ್ದಾರೆ.
Advertisement
https://www.facebook.com/SindhuLoknath/posts/2633693606848771
Advertisement
ಪೋಸ್ಟ್ನಲ್ಲಿ ಏನಿದೆ?
ನಾನು ಇಲ್ಲಿ ಪೋಸ್ಟ್ ಮಾಡಿರುವ ಕೆಲ ಫೋಟೋಗಳು ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ, ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ತೋರಿಸಿದವರಿಗೆ. ಅಂಥವರಿಗೆ ನಾನು ಕೆಲ ಮಾತುಗಳನ್ನು ಹೇಳಲು ಬಯಸುತ್ತೇನೆ. ನಾನು ಕೂದಲನ್ನು ಕತ್ತರಿಸಿದ್ದೇನೆ ಎಂದರೆ ಅದರ ಅರ್ಥ ನಾನು ಅನಾರೋಗ್ಯಕ್ಕೆ ತುತ್ತಾಗಿದ್ದೇನೆ ಎಂಬುದಲ್ಲ. ನಾನು ಹೇರ್ ಕಟ್ ಮಾಡಿಸಿದರೆ ಖಿನ್ನತೆ ಒಗಾಗಿದ್ದೇನೆ ಎಂಬ ಅರ್ಥವಲ್ಲ ಅಥವಾ ಲಿಂಗ ಪಕ್ಷಪಾತ ಮಾಡುತ್ತೇನೆ ಎಂದಲ್ಲ. ನಾನು ಹೇರ್ ಕಟ್ ಮಾಡಿಸಿರುವುದು ಬೇರೆ ಸ್ಟೈಲ್ಗಾಗಿ ಎಂದು ಸಿಂಧು ಕಿಡಿಕಾರಿದ್ದಾರೆ.
ನನ್ನ ಕತ್ತರಿಸಿದ ಕೂದಲ ಮೇಲೆ ವಿವಾದವನ್ನು ಹುಟ್ಟು ಹಾಕಿದವರಿಗೆ ನಾನು ಹೇಳುವುದೆನೆಂದರೆ. ನನ್ನ ಕೂದಲು ಮುಂಚೆಗಿಂತಲೂ ತುಂಬ ಚೆನ್ನಾಗಿ ಬೆಳೆಯುತ್ತದೆ. ನಾನು ಹಿಂದೆ ಹಾಕಿರುವ ಪೋಸ್ಟ್ ಅನ್ನು 10 ಬಾರಿ ಸರಿಯಾಗಿ ಓದಿ ಆಗ ನಿಮಗೆ ನಾನು ಏನನ್ನು ಬರೆದಿದ್ದೇನೆ ಎಂಬುದು ಅರ್ಥವಾಗುತ್ತದೆ. ನಿಮ್ಮ ಒಂದು ಉಪಯೋಗಕ್ಕಾಗಿ ಬೇರೆಯವರನ್ನು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಖಿನ್ನತೆಗೆ ಒಳಗಾಗಿದ್ದಾರೆ ಎಂದು ಇನ್ನೊಬ್ಬರ ವೈಯಕ್ತಿಕ ಜೀವನಕ್ಕೆ ತಲೆ ಹಾಕಬೇಡಿ. ಅದು ಅವರ ಇಮೇಜ್ ಅನ್ನು ಹಾಳು ಮಾಡುತ್ತದೆ ಎಂದು ಸಿಂಧು ತಿಳಿಸಿದ್ದಾರೆ.
ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿ ವ್ಯಕ್ತಿಗಳನ್ನು ಖಿನ್ನತೆಯ ಕಡೆಗೆ ತಳ್ಳುವುದನ್ನು ಬಿಡಿ. ನಾನು ಮೌನವಾಗಿದ್ದೇನೆ ಎಂದು ನೀವು ನನ್ನ ಬಗ್ಗೆ ಸುಳ್ಳು ಸುದ್ದಿ ಮಾಡುವ ಸ್ವಾತಂತ್ರ್ಯವನ್ನು ತೆಗೆದುಕೊಂಡರೆ, ಅದರ ವಿರುದ್ಧ ಧ್ವನಿ ಎತ್ತುವ ಸ್ವಾಂತತ್ರ್ಯ ನನಗೂ ಇದೆ. ಈ ಕೊರೊನಾ ರೀತಿಯ ಸಮಯದಲ್ಲಿ ಒಳ್ಳೆಯ ಸುದ್ದಿಗಳನ್ನು ನೀಡಲು ಮುಂದಾಗಿ. ನಾನೂ ಕೂಡ ನನ್ನ ಒಳ್ಳೆಯ ವಿಚಾರವನ್ನು ಸುದ್ದಿ ಮಾಡಲು ಅನುಮತಿ ಕೊಟ್ಟಿದ್ದೇನೆ. ಆದರೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಸಿಂಧು ಖಾರವಾಗಿ ಪೋಸ್ಟ್ ಹಾಕಿದ್ದಾರೆ.
ಇದರ ಜೊತೆಗೆ ಈ ಸುಳ್ಳು ಸುದ್ದಿಯನ್ನು ನಂಬಿ, ನನ್ನ ಆರೋಗ್ಯವನ್ನು ವಿಚಾರಿಸಲು ಕರೆ ಮಾಡಿದ ಜನರಿಗೆ ಮತ್ತು ನನ್ನ ಆರೋಗ್ಯದ ಬಗ್ಗೆ ಕಾಳಜಿ ಇರುವ ಎಲ್ಲರಿಗೂ ಧನ್ಯವಾದ. ನಾನೂ ಚೆನ್ನಾಗಿ ಇದ್ದೇನೆ ಎಂದು ಸಿಂಧು ಫುಟ್ ಬಾಲ್ ಆಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.