ಬೆಂಗಳೂರು: ನಾನು ಕೆಲಸ ಮಾಡಿದರೂ ನಮ್ಮ ಪಕ್ಷಕ್ಕೆ ಜನ ವೋಟು ಹಾಕುತ್ತಿಲ್ಲ. ಆದರೆ ಏನು ಕೆಲಸ ಮಾಡದವರಿಗೆ ಮತ ಹಾಕಿ ಗೆಲ್ಲಿಸುತ್ತಾರೆ ಎಂದು ಎಚ್ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ದಾಸರಹಳ್ಳಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೆರೆಯನ್ನು ನುಂಗಿ ಅಧಿಕಾರಿಗಳು, ರಾಜಕಾರಣಿಗಳು ಹೈಫೈ ಕಾಲೋನಿ ಮಾಡಿಕೊಂಡಿದ್ದರು. ಆದರೆ ಮಳೆಗಾಲ ಬಂದಾಗ ಅಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ನನ್ನ ಅವಧಿಯಲ್ಲಿ ಇವುಗಳನ್ನು ಸರಿಪಡಿಸಿದ ಕಾರಣ ಹೆಲಿಕಾಪ್ಟರ್ನಲ್ಲಿ ಹೂಮಳೆಗರೆದರು. ವಿಪರ್ಯಾಸ ಅಂದರೆ ಚುನಾವಣೆಯಲ್ಲಿ ಜನರು ಮಾತ್ರ ನಮ್ಮ ಪಕ್ಷಕ್ಕೆ ಮತ ಹಾಕಲೇ ಇಲ್ಲ ಎಂದು ಹೇಳಿದರು.
Advertisement
Advertisement
ನನ್ನ ಅವಧಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದೆ. ರೈತರ ಸಾಲಮನ್ನಾ ಮಾಡಿದೆ. ಹಲವಾರು ಯೋಜನೆಗಳನ್ನು ನೀಡಿದೆ. ಆದರೆ ಜನರು ಮಾತ್ರ ನನ್ನ ಕೈಹಿಡಿಯುತ್ತಿಲ್ಲ ಎಂದು ಕುಮಾರಸ್ವಾಮಿ ನೋವು ತೋಡಿಕೊಂಡರು. ಇದನ್ನೂ ಓದಿ: ಮಂಡ್ಯ ಜನರು ಮುಗ್ಧರು ಎಲ್ಲರನ್ನೂ ನಂಬ್ತಾರೆ – ಮಗನ ಸೋಲನ್ನು ಮರೆಯದ ಹೆಚ್ಡಿಕೆ
Advertisement
ಕೆಲಸ ಮಾಡಿದವರಿಗೆ ವೋಟು ಹಾಕುವುದಿಲ್ಲ. ಏನೂ ಕೆಲಸ ಮಾಡದವರಿಗೆ ಮಾತ್ರ ಓಟು ಹಾಕಿ ಗೆಲ್ಲಿಸುತ್ತಾರೆ. ಇದು ಇಂದಿನ ಪರಿಸ್ಥಿತಿ ಎದು ಹೇಳಿ ಜನರು ನಮ್ಮ ಕೈಹಿಡಿಯುತ್ತಿಲ್ಲವೆಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.