– ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸಾವಿನ ರಣಕೇಕೆ
ಬೆಂಗಳೂರು: ಹೆಮ್ಮಾರಿ ಕೊರೊನಾ ರಣಕೇಕೆ ಕಂಟ್ರೋಲ್ಗೆ ಸಿಗುತ್ತಿಲ್ಲ. ದಿನೇ ದಿನೇ ತನ್ನ ದಾಖಲೆಯನ್ನು ತಾನೇ ಮುರಿದು ಹೊಸ ದಾಖಲೆ ಸೃಷ್ಟಿಸಿ ಮುನ್ನುಗ್ಗುತ್ತಿರುವ ಕೊರೊನಾಗೆ ಇಂದು 19 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 226ಕ್ಕೇರಿದೆ.
ಆರೋಗ್ಯ ಇಲಾಖೆ ಬುಲೆಟಿನ್ ಅನ್ವಯ ಬೆಂಗಳೂರಿನಲ್ಲಿ 3, ಬಳ್ಳಾರಿಯಲ್ಲಿ 12, ಬಾಗಲಕೋಟೆ, ರಾಮನಗರ, ದಕ್ಷಿಣ ಕನ್ನಡ, ಹಾಸನದಲ್ಲಿ ತಲಾ 1 ಕೋವಿಡ್ 19 ಸಾವಿನ ಪ್ರಕರಣ ವರದಿಯಾಗಿದೆ. ಬೆಂಗಳುರಿನಲ್ಲಿ 178 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಜ್ಯದಲ್ಲಿ ಒಟ್ಟಾರೆ 268 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಸಾವನ್ನಪ್ಪಿದವರ ವಿವರ:
ಬೆಂಗಳೂರಿನಲ್ಲಿ ಮೂವರು (ರೋಗಿ- 6,878, ರೋಗಿ-10,019, ರೋಗಿ-10,033) ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಬಳ್ಳಾರಿಯಲ್ಲಿ (ರೋಗಿ-10,769, ರೋಗಿ-11,305, ರೋಗಿ-12,215, ರೋಗಿ-12,228, ರೋಗಿ-12,268, ರೋಗಿ-12,271, ರೋಗಿ-13,498, ರೋಗಿ-13,500, ರೋಗಿ-13,514, ರೋಗಿ-13,515, ರೋಗಿ-13.516, ರೋಗಿ-13,557).
Advertisement
ಬಾಗಲಕೋಟೆಯ 59 ವರ್ಷದ ವೃದ್ಧ (ರೋಗಿ-11,211), ರಾಮನಗರದ 40 ಪುರುಷ (ರೋಗಿ-13,267), ದಕ್ಷಿಣ ಕನ್ನಡದ 49 ಮಹಿಳೆ (ರೋಗಿ-13,284), ಹಾಸನದ 60 ವರ್ಷದ ವೃದ್ಧೆ (ರೋಗಿ-13,336) ಕೋವಿಡ್ಗೆ ಬಲಿಯಾಗಿದ್ದಾರೆ.