ರಾಮನಗರ: ಕುಮಾರಸ್ವಾಮಿ ಅವರ ಹೇಳಿಕೆಯಿಂದ ನಾನು ಈ ಪ್ರಕರಣದಿಂದ ಹಿಂದೆ ಸರಿಯಬೇಕಾಗಿದೆ. ಕುಮಾರಸ್ವಾಮಿ ಅವರ ಆರೋಪದ ವಿರುದ್ಧ ನಾನು ಈಗ ಹೋರಾಟ ಮಾಡಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಹೇಳಿಕೆಯಿಂದ ನಾನು ಈ ಪ್ರಕರಣದಿಂದ ಹಿಂದೆ ಸರಿಯಬೇಕಾಗಿದೆ. ನಾನು ಶುದ್ಧ ಹಸ್ತನಿದ್ದೇನೆ ಎಂದು ಸಾಬೀತು ಮಾಡಬೇಕು. ಹೀಗಾಗಿ ನಾನು ಈ ಪ್ರಕರಣದಿಂದ ಹಿಂದೆ ಬರಲು ಯೋಚಿಸಿದ್ದೇನೆ ಎಂದರು.
Advertisement
Advertisement
ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧ ಕಾನೂನು ಹೋರಾಟ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಎಲ್ಲೋ ಕೂತುಕೊಂಡು ಕುಮಾರಸ್ವಾಮಿ ಅವರು ಈ ರೀತಿ ಆರೋಪ ಮಾಡಬಾರದು. ಅವರ ಬಳಿ ಆಧಾರ ಇದ್ದರೆ ಪೊಲೀಸರ ಮುಂದೆಯೋ ಮಾಧ್ಯದ ಮುಂದೆಯೇ ನೀಡಬೇಕು. ಇದನ್ನು ಬಿಟ್ಟು ಹಿಟ್ ಅಂಡ್ ರನ್ ಮಾಡಬಾರದು ಎಂದು ತಿಳಿಸಿದರು.
Advertisement
Advertisement
ನಾನು ಸಿಡಿ ಪ್ರಕರಣದಲ್ಲಿ ನೀಡಿರುವ ಹೇಳಿಕೆ ಹಾಗೂ ಮಾಹಿತಿ ಎಲ್ಲವೂ ಸತ್ಯವಾಗಿದೆ. ನನ್ನ ಹೇಳಿಕೆಗಳಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಮೊದಲು ನಾನು ಶುದ್ಧನಿದ್ದೇನೆ ಎಂದು ಸಾಬೀತು ಪಡಿಸಬೇಕು. ನಂತರ ಸಿಡಿ ವಿಚಾರವಾಗಿ ಹೋರಾಟ ಮಾಡಬೇಕು. ಹೀಗಾಗಿ ನಾನು ಕೇಸ್ನ್ನು ಹಿಂಪಡೆಯುತ್ತಿದ್ದೇನೆ. ತನಿಖಾ ಅಧಿಕಾರಿಗಳು ನಾನು ಬಂದು ದೂರು ವಾಪಸ್ ಪಡೆಯಬೇಕು ಎಂದರೆ ನಾನು ಹೋಗುತ್ತೇನೆ. ನಾನು ಯಾರ ಬೆದರಿಕೆಗೂ ಹಾಗೂ ಆಮಿಷಕ್ಕೂ ಒಳಗಾಗಿಲ್ಲ. ನನ್ನ ಹೋರಾಟ ನಿರಂತವಾಗಿ ಇರುತ್ತದೆ ಎಂದು ದಿನೇಶ್ ಹೇಳಿದರು.