ಕಲಬುರಗಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸಮಲತಾ ನಡುವಿನ ಕದನದ ಕುರಿತು ಸಿಎಂ ಯಡಿಯೂರಪ್ಪ ಮೊದಲ ಬಾರಿಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದರು. ದಿ.ಅಂಬರೀಶ್ ಅವರ ಸ್ಮಾರಕ ಆಗುವ ವೇಳೆ ನನ್ನ ಕರ್ತವ್ಯ ಮಾಡಿದ್ದೇನೆ. ಆ ಕೆಲಸ ನನಗೆ ಸಮಾಧಾನ ಮತ್ತು ತೃಪ್ತಿ ತಂದಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
Advertisement
ಕುಮಾರಸ್ವಾಮಿ ಮತ್ತು ಸುಮಲತಾ ಅವರು ಈಗ ಅವರು ಪರಸ್ಪರ ಕಚ್ಚಾಟ, ಬಡಿದಾಟ ಮಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಅಣ್ಣ ತಮ್ಮರಂತೆ ಬದುಕೋದನ್ನ ಕಲಿಯಬೇಕಿದೆ. ಮಂಡ್ಯ ಸಹ ರಾಜ್ಯದ ಒಂದು ಭಾಗ. ಹಾಗಾಗಿ ಅಲ್ಲಿಯ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಇಬ್ಬರಿಗೂ ಮುಖ್ಯಮಂತ್ರಿಗಳು ಸಲಹೆ ನೀಡಿದರು.
Advertisement
Advertisement
ಇಂದು ಬೆಳಗ್ಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹೇಳಿಕೆ ಖಂಡಿಸಿ, ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಕ್ಲೈನ್ ನಿವಾಸದ ಮುಂದೆ ಸೇರಿದ್ದ ಜೆಡಿಎಸ್ ಕಾರ್ಯಕರ್ತರು, ರಾಕ್ಲೈನ್ ವೆಂಕಟೇಶ್ ಬಹಿರಂಗವಾಗಿ ಕುಮಾರಸ್ವಾಮಿ ಅವರ ಬಳಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡು ಪರಿಸ್ಥಿತಿ ತಿಳಿಗೊಳಿಸಿದರು. ಇದನ್ನೂ ಓದಿ: ಮಾತಾಡುವ ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಇದೆಯಾ?: ರಾಕ್ಲೈನ್ ವೆಂಕಟೇಶ್
Advertisement
ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ರಾಕ್ಲೈನ್ ವೆಂಕಟೇಶ್, ನಾನು ಯಾರಿಗೂ ನೋವುಂಟು ಮಾಡಿಲ್ಲ. ಕುಮಾರಸ್ವಾಮಿ ಅವರಿಗೆ ನೋವು ಉಂಟಾಗುವ ಮಾತುಗಳನ್ನು ಆಡಿಲ್ಲ. ಹಾಗಾಗಿ ನಾನ್ಯಾಕೆ ಕ್ಷಮೆ ಕೇಳಬೇಕೆಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸತ್ಯದ ಪರವಾಗಿ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ: ಸುಮಲತಾ