ಬೆಂಗಳೂರು: ನಗರದ ಪೀಪಲ್ಸ್ ಟ್ರೀ ಆಸ್ಪತ್ರೆಯಲ್ಲಿ ಹೃದಯ ಸಂರಕ್ಷಣಾ ಕೇಂದ್ರವನ್ನ ಆರಂಭಿಸಲಾಗಿದೆ. ಕಾರ್ಡಿಯಾ ಕ್ಯಾಥ್ ಲ್ಯಾಬ್ ಮೂಲಕ, ಹೃದಯದ ರಕ್ತನಾಳಗಳಲ್ಲಿ ಬ್ಲಾಕೇಜ್ ಇದ್ರೆ ಅವುಗಳನ್ನ ಪತ್ತೆ ಹಚ್ಚಿ ಹೃದಯ ಸಂಬಂಧಿ ಕಾಯಿಲೆಗಳ ಮುನ್ಸೂಚನೆಯನ್ನ ಈ ಚಿಕಿತ್ಸಾ ವಿಧಾನದ ಮೂಲಕ ತಿಳಿಯಬಹುದು.
Advertisement
ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆಯನ್ನ ಕೊಡುವ ಸಂಕಲ್ಪದೊಂದಿಗೆ ಶುರು ಮಾಡಿದ ಈ ಲ್ಯಾಬ್ ನ್ನು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ಉದ್ಘಾಟಿಸಿದರು. ಮುಖ್ಯವಾಗಿ ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆಯಲು ಮೂರು ಬಗೆಯ ಕಾರ್ಡ್ ಗಳನ್ನ ಆಸ್ಪತ್ರೆಯ ಆಡಳಿತ ಮಂಡಳಿ ಬಿಡುಗಡೆ ಮಾಡಿತು.
Advertisement
Advertisement
ಇತ್ತೀಚೆಗೆ 20-40ರ ವಯಸ್ಕರಲ್ಲಿ ಹೃದಯಘಾತ ಕಾಣಿಸಿಕೊಳ್ತಿದೆ. ಅಂಜಿಯೋಗ್ರಾಂ, ಅಂಜಿಯೋ ಪ್ಲಾಸ್ಟಿ ಚಿಕಿತ್ಸೆಯನ್ನ ಹೃದಯಘಾತವಾದ ಒಂದೆರಡು ಗಂಟೆಗಳಲ್ಲಿ ಚಿಕಿತ್ಸೆ ನೀಡಿದರೆ ಪ್ರಾಣವನ್ನ ಉಳಿಸಿ, ಹೃದಯದ ಶಕ್ತಿಯನ್ನು ಹೆಚ್ಚಿಸಬಹುದು. ವಾಯು ಮಾಲಿನ್ಯದಿಂದಲೂ ಹೃದಯಘಾತವಾಗುತ್ತಿದೆ. ಭಾರತದಲ್ಲಿ ಪ್ರತಿವರ್ಷ ವಾಯುಮಾಲಿನ್ಯದಿಂದ 20 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ಟ್ರಾಫಿಕ್ ನಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ವಾಯು ಮಾಲಿನ್ಯದಿಂದ ಹೃದಯಘಾತ ಕೂಡ ಜಾಸ್ತಿಯಾಗ್ತಿದೆ. ಈ ನಿಟ್ಟಿನಲ್ಲಿ ಹೃದಯದ ಕಾಳಜಿ ಮುಖ್ಯ ಎಂದು ಹೇಳಿದರು.