– ಬೆಲೆ, ಮಾರುಕಟ್ಟೆ ಇಲ್ಲದೆ ಬೆಳೆಗಾರರು ಕಂಗಾಲು
ಕೋಲಾರ : ಟೊಮೇಟೋಗೆ ಬೆಲೆ ಇಲ್ಲದೆ ರೈತರು ರಸ್ತೆ ಪಕ್ಕದಲ್ಲಿ ಹಾಗೂ ಕೆರೆಗಳಲ್ಲಿ ಸುರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಲಾರದಲ್ಲಿ ರೈತರು ತಾವು ಬೆಳೆದ ಬೆಳೆಗೆ ಬೆಲೆ ಇಲ್ಲ, ಮಾರುಕಟ್ಟೆ ಇಲ್ಲದ ಹಿನ್ನೆಲೆಯಲ್ಲಿ ಮನನೊಂದ ಕೆರೆಯಲ್ಲಿ ಸುರಿದು ಆಕ್ರೋಶ ಹೊರ ಹಾಕಿದ್ದಾರೆ.
Advertisement
ಟ್ರಾಕ್ಟರ್ ಮೂಲಕ ಟೊಮೇಟೋ ತುಂಬಿಕೊಂಡು ಬಂದು ಕೆರೆಯಲ್ಲಿ ಸುರಿಯುತ್ತಿದ್ದಾರೆ. ಕೆರೆಯಲ್ಲಿ ಟೊಮೇಟೋ ಸುರಿಯುತ್ತಿದ್ದಂತೆ ಅದನ್ನ ತಿನ್ನಲು ನೂರಾರು ಎಮ್ಮೆಗಳು ಜಮಾಯಿಸಿದ್ದವು. ಕೊರೊನಾ ಲಾಕ್ ಡೌನ್ ಹೊಡೆತಕ್ಕೆ ಕೋಲಾರದಲ್ಲಿ ರೈತರು ತತ್ತರಿಸಿ ಹೋಗಿದ್ದಾರೆ. ತಾನೂ ಬೆಳೆದ ಬೆಳೆಗೆ ಬೆಲೆ ಇಲ್ಲದೆ ಮಾರುಕಟ್ಟೆ ಇಲ್ಲದೆ ರೈತನ ಜೀವನ ಬೀದಿಪಾಲಾಗಿದೆ.
Advertisement
Advertisement
15 ಕೆಜಿ ತೂಕದ ಟೊಮೇಟೋ ಬಾಕ್ಸ್ ಕೇವಲ 2 ರುಪಾಯಿಗೆ ಮಾರಾಟವಾಗುವ ಮೂಲಕ ನಷ್ಟದಲ್ಲಿ ರೈತನ ಬದುಕು ಮೂರಾ ಬಟ್ಟೆಯಾಗಿದೆ. ಸಾಲ ಮಾಡಿ ಎಕರೆಗೆ ಮೂರು ಲಕ್ಷ ಖರ್ಚು ಮಾಡಿ ಬೆಳೆದ ಬೆಳೆಯನ್ನ ರಸ್ತೆ ಬದಿ ಸುರಿದು ಆಕ್ರೋಶ ಹೊರ ಹಾಕಿರುವ ಟೊಮೇಟೋ ಬೆಳೆಗಾರರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
Advertisement
ಸಾವಿರಾರು ಹೆಕ್ಟೇರು ಪ್ರದೇಶದಲ್ಲಿ ರೈತರು ಬೆಳೆಗಳನ್ನ ಸುರಿಯುತ್ತಿದ್ದಾರೆ. ಹಾಗಾಗಿ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ಪರಿಹಾರದ ಹಣ ಬಕಾಸುರನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆಯಂತ್ತಾಗಿದೆ. ಹಾಗಾಗಿ ರೈತರ ನೆರವಿಗೆ ಸರ್ಕಾರ ಇರುವುದೇ ಆದಲ್ಲಿ ಪರಿಹಾರದ ಹಣ ಹೆಚ್ಚುಮಾಡುವಂತೆ ಕೋಲಾರದ ರೈತರು ಒತ್ತಾಯ ಮಾಡಿದ್ದಾರೆ.