ಹೈದರಾಬಾದ್: ಗಲ್ವಾನಾದಲ್ಲಿ ಹುತಾತ್ಮರಾಗಿದ್ದ ಕರ್ನಲ್ ಸಂತೋಷ್ ಬಾಬು ಅವರ ಪತ್ನಿ ಸಂತೋಷಿ ಬಾಬು ಅವರನ್ನು ಡೆಪ್ಯೂಟಿ ಕಲೆಕ್ಟರ್ ಆಗಿ ಸರ್ಕಾರ ನೇಮಕ ಮಾಡಿದೆ. ಬುಧವಾರ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇಮಕ ಪತ್ರವನ್ನು ಸಂತೋಷಿ ಬಾಬು ಅವರಿಗೆ ನೀಡಿದ್ದಾರೆ.
ಬುಧವಾರ ಮುಖ್ಯಮಂತ್ರಿಗಳು ಸಚಿವರು ಮತ್ತು ಅಧಿಕಾರಿಗಳು ನೇತೃತ್ವದ ಭೋಜನದ ಕೂಟ ಆಯೋಜಿಸಿದ್ದರು. ಭೋಜನಕೂಟಕ್ಕೆ ಸಂತೋಷಿ ಬಾಬು ಅವರನ್ನು ಅಹ್ವಾನಿಸಿ, ನೇಮಕಪತ್ರ ನೀಡಲಾಯ್ತು. ಇದರ ಜೊತೆ ಕಲೆಕ್ಟರ್ ಶ್ವೇತಾ ಮೊಹಂತಿ ಹೈದರಾಬಾದನ ಬಂಜಾರ್ ಹಿಲ್ಸ್ ನಲ್ಲಿರುವ ನಿವೇಶನದ ದಾಖಲಾತಿಗಳನ್ನು ನೀಡಿದರು. ಸಂತೋಷಿ ಬಾಬು ಅವರಿಗೆ 4 ವರ್ಷದ ಮಗ ಮತ್ತು 8 ವರ್ಷದ ಮಗಳಿದ್ದಾಳೆ.
ಸಂತೋಷಿ ಬಾಬು ಅವರನ್ನು ಹೈದರಾಬಾದ್ ವ್ಯಾಪ್ತಿಯಲ್ಲಿ ನೇಮಕ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇದೇ ವೇಳೆ ಮಾತನಾಡಿದ ಸಿಎಂ, ಸರ್ಕಾರ ಹುತಾತ್ಮ ಕರ್ನಲ್ ಸಂತೋಷ್ ಬಾಬು ಅವರ ಕುಟುಂಬದ ಜೊತೆಯಲ್ಲಿರುತ್ತದೆ ಎಂದು ಭರವಸೆ ನೀಡಿದ್ದಾರೆ. ಗಲ್ವಾನಾ ಪ್ರದೇಶದಲ್ಲಿ ಚೀನಾ ಜೊತೆಗೆ ನಡೆದ ಸಂಘರ್ಷದಲ್ಲಿ ಕರ್ನಲ್ ಬಾಬು ಹುತಾತ್ಮರಾಗಿದ್ದರು.
ఇటీవల భారత్-చైనా సరిహద్దుల్లో మరణించిన కల్నల్ సంతోష్ బాబు భార్య శ్రీమతి సంతోషికి ప్రభుత్వం డిప్యూటీ కలెక్టర్ ఉద్యోగం ఇచ్చింది. దీనికి సంబంధించిన ఉత్తర్వులను సీఎం శ్రీ కేసీఆర్ ఇవాళ సంతోషికి అందించారు. హైదరాబాద్, పరిసర ప్రాంతాల్లోనే పోస్టింగ్ ఇవ్వాలని అధికారులను ఆదేశించారు. pic.twitter.com/M7MExe6HzH
— Telangana CMO (@TelanganaCMO) July 22, 2020