ಸಾಮಾನ್ಯವಾಗಿ ಹುಡುಗಿಯರು ತಲೆಕೂದಲಿನ ಮೇಲೆ ಹೆಚ್ಚು ಕಾಳಜಿ ವಹಿಸುತ್ತಾರೆ. ಏಕೆಂದರೆ ಹುಡುಗಿಯರ ಸೌಂದರ್ಯವನ್ನು ಹೆಚ್ಚಿಸುವುದೇ ತಲೆಕೂದಲು. ಕೂದಲನ್ನು ಹೆಚ್ಚಾಗಿ ಬೆಳೆಸಲು ಅದನ್ನು ಶೈನ್ಗೊಳಿಸಲು ವಿವಿಧ ರೀತಿಯ ಟಿಪ್ಸ್ ಗಳನ್ನು ಅನುಸರಿಸುತ್ತಾರೆ. ಅಲ್ಲದೆ ಯಾವುದೇ ಸಮಾರಂಭಗಳಿಗೆ ಹೋಗುವಾಗ ನೈಲ್ ಪಾಲಿಶ್ನಿಂದ ಹಿಡಿದು ಡ್ರೆಸ್, ಜ್ಯೂವೆಲರಿ, ಮೇಕಪ್ ಎಲ್ಲದರ ಮೇಲೂ ನಿಗಾವಹಿಸುತ್ತಾರೆ. ಆದರೆ ಎಷ್ಟೋ ಹುಡುಗಿಯರಿಗೆ ಯಾವ ಸೀಸನ್ನಲ್ಲಿ ಯಾವ ಹೇರ್ ಕಟ್ ಮಾಡಿಸಬೇಕು, ಯಾವ ಸಮಾರಂಭಗಳಿಗೆ ಹೇಗೆ ಕೇಶ ವಿನ್ಯಾಸಗೊಳಿಸಬೇಕು ಎಂಬುವುದೇ ತಿಳಿದಿರುವುದಿಲ್ಲ. ಅಂತಹವರಿಗೆ ಯಾವ ರೀತಿಯ ಹೇರ್ ಸ್ಟೈಲ್ ಮಾಡಬೇಕು ಎಂಬ ಕುರಿತಂತೆ ಕೆಲವೊಂದಷ್ಟು ಟಿಪ್ಸ್ ಈ ಕೆಳಗಿನಂತಿದೆ.
Advertisement
ಬ್ಯಾಂಗ್ಸ್ ಆನ್ ಫೋರ್ ಹೆಡ್:
ಈ ಹೇರ್ ಸ್ಟೈಲ್ ಹದಿಹರೆಯದ ಹುಡುಗಿಯರಿಗೆ ಹೇಳಿ ಮಾಡಿಸಿದಂತಿದ್ದು, ಸುಲಭವಾಗಿ ಮೈನ್ಟೆನ್ ಮಾಡಬಹುದಾದ ಹೇರ್ ಸ್ಟೈಲ್ ಆಗಿದೆ. ಅಲ್ಲದೆ ಮಾಡರ್ನ್ ಡ್ರೆಸ್ಗೆ ಈ ಹೇರ್ ಕಟ್ ಸ್ಟೈಲಿಶ್ ಲುಕ್ ನೀಡುತ್ತದೆ. ಇದೊಂದು ಟ್ರೆಂಡಿ ಹೇರ್ ಕಟ್ ಆಗಿದ್ದು, ನಿಮ್ಮ ಕೂದಲು ಮೃದುವಾಗಿ ನೇರವಾಗಿದ್ದರೆ ಬಹಳ ಚೆನ್ನಾಗಿ ಕಾಣಿಸುತ್ತದೆ. ಬೇಸಿಗೆ ಸಮಯದಲ್ಲಿ ಬ್ಯಾಂಗ್ಸ್ ಹೇರ್ ಸ್ಟೈಲ್ನನ್ನು ನೀವು ಟ್ರೈ ಮಾಡಬಹುದು.
Advertisement
Advertisement
ಲಾಗ್ ಲೆಂಥ್ ಲೂಸ್:
ಇತ್ತೀಚೆಗೆ ಲಾಗ್ ಲೆಂಥ್ ಲೂಸ್ ಹೇರ್ ಸ್ಟೈಲ್ ಟ್ರೆಂಡಿ ಹಾಗೂ ಸ್ಟೈಲಿಷ್ ಹೇರ್ ಕಟ್ ಆಗಿದ್ದು, ಇದು ಹುಡುಗಿಯರಿಗೆ ಕ್ಲಾಸಿಕ್ ಲುಕ್ ನೀಡುತ್ತದೆ. ಸುಮಾರು 30 ವರ್ಷದ ವಯೋಮಿತಿಯವರು ಈ ಹೇರ್ ಸ್ಟೈಲನ್ನು ಟ್ರೈ ಮಾಡಬಹುದು. ಸಾಂಪ್ರದಾಯಿಕ ಉಡುಪಿಗೆ ಈ ಹೇರ್ ಸ್ಟೈಲ್ ಬಹಳ ಸೂಟ್ ಆಗುತ್ತದೆ. ಹಬ್ಬ, ಸಮಾರಂಭಗಳಲ್ಲಿ ಈ ಹೇರ್ ಸ್ಟೈಲ್ ಮಾಡುವುದರಿಂದ ನೀವು ಎಲ್ಲರ ಮಧ್ಯೆ ಎದ್ದು ಕಾಣಿಸುತ್ತೀರಾ. ಗುಂಡು ಮುಖದ ಆಕಾರ ಹೊಂದಿರುವವರಿಗೆ ಈ ಹೇರ್ ಸ್ಟೈಲ್ ಚೆನ್ನಾಗಿ ಕಾಣಿಸುತ್ತದೆ ಹಾಗೂ ಚಳಿಗಾಲದಲ್ಲಿ ಈ ಹೇರ್ ಸ್ಟೈಲ್ ಟ್ರೈ ಮಾಡುವುದು ಉತ್ತಮ.
Advertisement
ಮೆಸ್ಸಿ ಬನ್:
ಸಾಮಾನ್ಯ ಹಾಗೂ ಉದ್ದದ ಕೂದಲು ಹೊಂದಿರುವ ಹುಡುಗಿಯರಿಗೆ ಈ ಹೇರ್ ಸ್ಟೇಲ್ ಮಾಡಬಹುದು. ಎಲ್ಲಾ ಕೂದಲನ್ನು ಸೇರಿಸಿ ಪಿನ್ ಅಥವಾ ಎಲೆಸ್ಟಿಕ್ ಬ್ಯಾಂಡ್ ಮೂಲಕ ಕೇವಲ 3-4 ನಿಮಿಷಗಳಲ್ಲಿ ಈ ಹೇರ್ ಸ್ಟೈಲ್ನನ್ನು ವಿನ್ಯಾಸಗೊಳಿಸಬಹುದು. ಮದುವೆ ಸಮಾರಂಭಗಳಲ್ಲಿ ಈ ಹೇರ್ ಸ್ಟೈಲ್ ಕ್ಲಾಸಿ ಲುಕ್ ನೀಡುತ್ತದೆ. ಬೇಸಿಗೆ ಸಮಯದಲ್ಲಿ ಮೆಸ್ಸಿ ಬನ್ ಹಾಕಿಕೊಳ್ಳುವುದರಿಂದ ಹೆಚ್ಚು ಉಪಯೋಗವಾಗುತ್ತದೆ.
ಐರಾನ್ಡ್ ಕಲ್ರ್ಸ್:
ಐರಾನ್ಡ್ ಕಲ್ರ್ಸ್ ಹೇರ್ ಸ್ಟೈಲ್ನನ್ನು ಸುಲಭವಾಗಿ ಮೈಂಟೇನ್ ಮಾಡಬಹುದು. ಟ್ವಿಸ್ಟ್ ರೋಲರ್ ಬಳಸುವ ಮೂಲಕ ಕೇಶ ವಿನ್ಯಾಸಗೊಳಿಸಲಾಗುತ್ತದೆ. ಉದ್ದ ಕೂದಲು ಹೊಂದಿರುವವರಿಗೆ ಈ ಹೇರ್ ಸ್ಟೈಲ್ ಸುಂದರವಾಗಿ ಕಾಣಿಸುತ್ತದೆ. ಪಾರ್ಟಿ, ಡಿನ್ನರ್ಗಳಿಗೆ ಹೋಗುವಾಗ ಮೊಣಕಾಲುದ್ದ ಡ್ರೆಸ್ ಧರಿಸಿದಾಗ ಈ ಹೇರ್ ಸ್ಟೈಲ್ ಸಖತ್ ಸ್ಟೈಲಿಶ್ ಲುಕ್ ನೀಡುತ್ತದೆ.
ಇಂಡಿಯನ್ ಲೇಯರ್ ಹೇರ್ ಸ್ಟೈಲ್:
ಸಮ ಹಾಗೂ ಉದ್ದ ಕೂದಲು ಹೊಂದಿರುವವರಿಗೆ ಈ ಸಿಂಪಲ್ ಹೇರ್ ಕಟ್ ಬಹಳ ಸುಂದರವಾಗಿ ಕಾಣಿಸುತ್ತದೆ. ಲೇಯರ್ ಹೇರ್ ಸ್ಟೈಲ್ನನ್ನು ನೀವು ಯಾವ ಸೀಸನ್ನಲ್ಲಿ ಬೇಕಾದರೂ ಟ್ರೈ ಮಾಡಬಹುದು. ಸಾರಿ ಮತ್ತು ಸಾಂಪ್ರದಾಯಿಕ ಉಡುಪಿಗೆ ಈ ಹೇರ್ ಕಟ್ ಬಹಳ ಸೂಟ್ ಆಗುತ್ತದೆ.