ವಿಜಯಪುರ: ಭೀಮಾತೀರದ ನಟೋರಿಯಸ್ ಮಹಾದೇವ ಸಾಹುಕಾರ್ ಹುಟ್ಟುಹಬ್ಬದ ದಿನದಂದೆ ಪೊಲೀಸರ ಅತಿಥಿಯಾಗಿದ್ದಾನೆ. ಜಿಲ್ಲೆಯ ಇಂಡಿ ತಾಲೂಕಿನ ಉದ್ಯಮಿಗೆ 5 ಕೋಟಿ ನಗದು ಅಥವಾ 3 ಕೆ.ಜಿ. ಚಿನ್ನಕ್ಕೆ ಬೇಡಿಕೆ ಇಟ್ಟಿದ ಆರೋಪದಡಿ ಬಂಧನವಾಗಿದ್ದಾನೆ.
ಚಿನ್ನಾಭರಣದ ವ್ಯಾಪಾರಿಯಾಗಿರುವ ನಾಮದೇವ್ ಡಾಂಗೆ ಎಂಬವರಿಗೆ ಬೇಡಿಕೆ ಇಟ್ಟಿದ್ದನು. 5 ಕೋಟಿ ಕೊಡದೇ ಇದ್ರೇ ಕಾಲು, ತಲೆ ಕಟ್ ಮಾಡ್ತೀನಿ. ಯಾರಿಗಾದ್ರೂ ಹೇಳಿದ್ರೆ ಮನೆಗೆ ಹೊಕ್ಕು ತಲೆಗೆ ಗುಂಡು ಹೊಡೆಯುತ್ತೇನೆಂದು ಧಮ್ಕಿ ಹಾಕಿದ್ದನು. ಇನ್ನು ಈ ವೇಳೆ ಮಹಾದೇವ ಸಾಹುಕಾರ್ ಜೊತೆ ಭೀಮಾತೀರದ ಮತ್ತೊಬ್ಬ ನಟೋರಿಯಸ್ ಹಂತಕ ಬಾಗಪ್ಪ ಹರಿಜನ ಮತ್ತು ಆಪ್ತ ಲಕ್ಷ್ಮಿಕಾಂತ್ ಪಾಟೀಲ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆಂದು ನಾಮದೇವ್ ದೂರು ದಾಖಲಿಸಿದ್ದರು.
Advertisement
ಸದ್ಯ ಚಡಚಣ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 384, 511, 504, 506 ಮತ್ತು ರೇ/ವು 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಗಪ್ಪ ಹಾಗೂ ಲಕ್ಷ್ಮಿಕಾಂತ್ ನಾಪತ್ತೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
Advertisement