– ಇಂದು 11 ಪ್ರಕರಣಗಳು ಪತ್ತೆ
ಹಾಸನ: ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ 5 ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿದ್ದು, ಮದುವೆ ಮಾತುಕತೆಗೆ ಬಂದವರಿಂದ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.
ಇಂದು ಐದು ವರ್ಷದ ಬಾಲಕ ಸೇರಿ ಹಾಸನದಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಬಾಲಕ ವಾಸವಿದ್ದ ಗ್ರಾಮವನ್ನು ಸೀಲ್ಡೌನ್ ಮಾಡಲು ಚಿಂತನೆ ನಡೆಸಲಾಗಿದೆ. ಅರಕಲಗೂಡು ತಾಲೂಕಿನ ಬಾಲಕ ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಆದರೂ ಆತನಿಗೆ ಕೊರೊನಾ ಸೋಂಕು ತಗುಲಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿದಾಗ ಐದು ವರ್ಷದ ಬಾಲಕನ ಮನೆಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮೂಲದವರು ಮದುವೆ ಮಾತುಕತೆಗೆ ಆಗಮಿಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅವರ ಮೂಲಕ ಬಾಲಕನಿಗೆ ಕೊರೊನಾ ತಗುಲಿರುವ ಶಂಕೆ ವ್ಯಕ್ತವಾಗಿದೆ.
Advertisement
Advertisement
ಇಂದು ದಾಖಲಾದ 11 ಪ್ರಕರಣಗಳಲ್ಲಿ ಶುಕ್ರವಾರ ಮೃಪಟ್ಟ ವೃದ್ಧನ ಮಗ ಮತ್ತು ವೃದ್ಧನ ಪತ್ನಿಗೆ ಕೊರೊನಾ ಸೋಂಕು ತಗುಲಿದೆ. ಉಳಿದವರು ಮಹಾರಾಷ್ಟ್ರದ ನಂಟು ಹೊಂದಿದ್ದಾರೆ. ಹಾಸನದಲ್ಲಿ ಇದುವರೆಗೂ ಒಟ್ಟು 237 ಸೋಂಕು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 184 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ 52 ಸಕ್ರಿಯ ಪ್ರಕರಣಗಳಿದ್ದು, ಹಾಸನದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.