ಹಾಸನ: ಜಿಲ್ಲೆಯಲ್ಲಿ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದಲೇ ಹೊಸ ಲಾಕ್ಡೌನ್ ನಿಯಮ ಜಾರಿಯಾಗಲಿದೆ.
ಇಂದು ನಗರಸಭೆಯಲ್ಲಿ ನಡೆದ ವರ್ತಕರು, ಸಾರ್ವಜನಿಕರ ಸಭೆಯಲ್ಲಿ ಸ್ವಯಂ ಪ್ರೇರಿತವಾಗಿ ಲಾಕ್ಡೌನ್ ಮಾಡಲು ತೀರ್ಮಾನಿಸಲಾಗಿದೆ. ಅದರಂತೆಯೇ ಮಂಗಳವಾರದಿಂದ ಒಂದು ವಾರ ಹೊಸ ಲಾಕ್ಡೌನ್ ನಿಯಮ ಜಾರಿಯಾಗಲಿದೆ.
Advertisement
Advertisement
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಅಲ್ಲದೇ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ಡೌನ್ಗೆ ನಿರ್ಧಾರ ಮಾಡಲಾಗಿದೆ. ಅಗತ್ಯ ವಸ್ತು ಬಿಟ್ಟು ಬೇರೆ ವಹಿವಾಟು ನಡೆಸದಿರಲು ತೀರ್ಮಾನಿಸಲಾಗಿದೆ ಎಂದು ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ಅವರು ಮಾಹಿತಿ ನೀಡಿದ್ದಾರೆ.
Advertisement
ಈ ಮಹಾಮಾರಿ ಕೊರೊನಾದಿಂದ ಜೀವ, ಜೀವನ ಎರಡೂ ಉಳಿಯಬೇಕು. ಹೀಗಾಗಿ ಎಲ್ಲರೂ ಶನಿವಾರ ಮತ್ತು ಭಾನುವಾರ ಲಾಕ್ಡೌನ್ಗೆ ಸ್ಪಂದಿಸುವಂತೆ ಶಾಸಕ ಪ್ರೀತಂಗೌಡ ಮನವಿ ಮಾಡಿಕೊಂಡಿದ್ದಾರೆ.