ಹಾವೇರಿ: ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಐತಿಹಾಸಿಕ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರೆಯನ್ನು ನಿಷೇಧಿಸುವಂತೆ ಹಾವೇರಿ ಜಿಲ್ಲಾಧಿಕಾರಿ ಶ್ರೀಯುತ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಒಳ್ಳೆಯದಾಗಲಿ ನಿಮಗೆ ಮತ್ತಷ್ಟು ಶಕ್ತಿ ಬರಲಿ – ಅಶೋಕ್ಗೆ ಪರಮೇಶ್ವರ್ ಹಾರೈಕೆ
ಕೋವಿಡ್-19 ಎರಡನೇ ಅಲೆ ಸಾಂಕ್ರಾಮಿಕ ರೋಗದ ನಿಯಂತ್ರಣದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ ಇದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳಿಂದ ಆದೇಶ ಹೊರಡಿಸಲಾಗಿದೆ.
Advertisement
Advertisement
ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರೆಯೂ ಜೂನ್ 29 ರಿಂದ ಜುಲೈ 1ರವರೆಗೆ ನಡೆಯುತ್ತಿತ್ತು. ಆದರೆ ಈ ಆದೇಶದಿಂದ ರೈತರಿಗೆ ನಿರಾಸೆಯುಂಟಾಗಿದೆ. ಜಾತ್ರೆಯ ಮೂರನೇಯ ದಿನ ಎತ್ತುಗಳನ್ನು ಅಲಂಕಾರಗೊಳಿಸಿ ಬಹಳ ವಿಜೃಂಭಣೆಯಿಂದ ಬಂಡಿಗೆ ಕಟ್ಟಿ ಓಡಿಸಲಾಗುತ್ತದೆ. ಸುತ್ತಮುತ್ತಲಿನ ಹತ್ತಾರೂ ಹಳ್ಳಿಗಳಿಂದ ಸಾವಿರಾರು ರೈತ ಬಾಂಧವರು ಸೇರುವುದರಿಂದ ಕೋವಿಡ್ ಮಾರ್ಗಸೂಚಿ ಅನುಸಾರ ಹಾವೇರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಪ್ರವಾಹದಿಂದ ನೀರು ವ್ಯರ್ಥವಾಗುವುದನ್ನು ತಡೆದು, 35 ಕೆರೆ ತುಂಬಿಸಲು ಯಾದಗಿರಿ ಜಿಲ್ಲಾಡಳಿತ ಪ್ಲಾನ್
Advertisement