ಚಿಕ್ಕಮಗಳೂರು: ನೀರಿನ ಪೈಪಿಗೆ ಹಾವುಗಳು ಸಿಕ್ಕಿ ಸಾವನ್ನಪ್ಪಿದ್ದರೂ ಅದೇ ಪೈಪಿನಿಂದ ಕುಡಿಯೋಕೆ ನೀರನ್ನ ಪೂರೈಸ್ತಿರೋ ಗ್ರಾಮ ಪಂಚಾಯ್ತಿ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೋನುಗೂಡು ಗ್ರಾಮಕ್ಕೆ ಕುಡಿಯೋ ನೀರಿಗಾಗಿ ಹಳ್ಳಕ್ಕೆ ಮೋಟರ್ ಇಟ್ಟಿದ್ದಾರೆ. ತಿಂಗಳಿಗೊಂದು ಹಾವುಗಳು ಮೋಟರ್ ನ ಕೆಲ ಭಾಗಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ. ಈ ನೀರನ್ನ ಕುಡಿದು ಊರಿನ ಜನ ನಾನಾ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
Advertisement
ನೀರಿನ ಸಂಪರ್ಕವಿರೋ ಪೈಪಿಗೆ ಹಾವುಗಳು ಸಿಕ್ಕಿ ಸಾವನ್ನಪ್ಪುತ್ತಿವೆ. ಹಳ್ಳ ಕ್ಲೀನ್ ಮಾಡಿ ಇದಕ್ಕೊಂದು ಶಾಶ್ವತ ಪರಿಹಾರ ಮಾಡಿ ಎಂದು ಪಂಚಾಯ್ತಿ ಗಮನಕ್ಕೆ ತಂದರೂ ಅಧಿಕಾರಿಗಳು ಹಾಗೂ ಸದಸ್ಯರು ಯಾವುದೇ ಕ್ರಮ ಕೈಗೊಳ್ಳದೆ ಕುಡಿಯಲು ಅದೇ ನೀರನ್ನ ಪೂರೈಸುತ್ತಿದ್ದಾರೆಂದು ಸ್ಥಳೀಯರು ಹಾಗೂ ಪಂಚಾಯ್ತಿ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Advertisement
ಗ್ರಾಮ ಪಂಚಾಯ್ತಿಯ ಬೇಜಾವಾಬ್ದಾರಿ ಕಂಡ ಸ್ಥಳೀಯರು ಮೋಟರ್ ಇರೋ ಜಾಗಕ್ಕೆ ಹೋಗಿ ಪೈಪನ್ನ ಮೇಲೆತ್ತಿ ಕಬ್ಬಿಣದ ತಂತಿ ಹಾಗೂ ಕಟಿಂಗ್ ಪ್ಲೇರ್ನಿಂದ ಸತ್ತು ಪೀಸ್, ಪೀಸ್ ಆಗಿರೋ ಹಾವನ್ನ ಪೈಪಿನಿಂದ ಬಿಡಿಸಿದ್ದಾರೆ. ಸ್ಥಳೀಯರೇ ಕುಡಿಯೋ ನೀರಿನ ಮೂಲವನ್ನ ಶುಚಿ ಮಾಡಿ ಅದನ್ನ ವೀಡಿಯೋ ಮಾಡಿಕೊಂಡು ಗ್ರಾಮ ಪಂಚಾಯ್ತಿ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Advertisement