ಬೆಂಗಳೂರು: ಕೊರೊನಾ ಅಟ್ಟಹಾಸದ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದಿದೆ. ಈಗ ಹಾಫ್ ಲಾಕ್ಡೌನ್ ಬಗ್ಗೆ ಚರ್ಚೆ ಶುರುವಾಗಿದೆ. ಯಾವಾಗಿನಿಂದ ಹಾಫ್ ಲಾಕ್ಡೌನ್ ಜಾರಿ ಮಾಡ್ತಾರೆ? ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಏನೆಲ್ಲಾ ಕ್ರಮ ಕೈಗೊಳ್ಳುತ್ತೆ ಎಂಬ ಪ್ರಶ್ನೆಗಳು ಎದ್ದಿವೆ. ಈ ಬೆನ್ನಲ್ಲೇ ಹಾಫ್ ಲಾಕ್ಡೌನ್ ಬಗ್ಗೆ ತಜ್ಞರು ನೀಡಿದ್ದ ವರದಿಯನ್ನು ಮರು ಪರಿಶೀಲಿಸಲು ಸರ್ಕಾರ ಮುಂದಾಗಿದೆ.
Advertisement
ಈ ಬಗ್ಗೆ ಇಂದು ಕೂಡ ಟಾಸ್ಕ್ ಫೋರ್ಸ್ ಸಭೆ ನಡೆಸಿದ ಸಿಎಂ, ತಾತ್ಕಾಲಿಕವಾಗಿ ಸಚಿವರಿಗೆ ಕೆಲವೊಂದು ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ. ಹೆಚ್ಚು ಸೋಂಕಿತರು ಕಂಡು ಬರುವ ಸ್ಥಳಗಳಲ್ಲಿ ಸೀಲ್ಡೌನ್ ಹೆಚ್ಚಿಸಿ ಬಿಗಿ ಗೊಳಿಸಲು ಸೂಚನೆ ನೀಡಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ, ಹಣ್ಣು ತರಕಾರಿ ವ್ಯಾಪಾರಿಗಳಿಗೆ, ಆದ್ಯತೆ ಮೇರೆಗೆ ಕೊರೊನಾ ಪರೀಕ್ಷೆ ನಡೆಸಲು ಸೂಚಿಸಿದ್ದಾರೆ. ಜೊತೆಗೆ ಸಿಎಂ ಯಡಿಯೂರಪ್ಪ ನಾಡಿದ್ದು ಅಂದ್ರೆ ಸೋಮವಾರ ಬೆಂಗಳೂರಿನ ಎಲ್ಲಾ ಪಕ್ಷಗಳ ಶಾಸಕರ ಸಭೆ ಕರೆದಿದ್ದಾರೆ.
Advertisement
Advertisement
ಈ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ, ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಅಂತಿಮವಾಗಿ ಗುರುವಾರ ನಡೆಯೋ ಸಚಿವ ಸಂಪುಟ ಸಭೆಯಲ್ಲಿ ಹಾಫ್ ಲಾಕ್ಡೌನ್ ಬಗ್ಗೆ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ.
Advertisement
ಹಾಫ್ ಲಾಕ್ಡೌನ್ ಹೇಗಿರುತ್ತೆ?
ಬೆಂಗಳೂರಿನ ಎಲ್ಲಾ ವಲಯಗಳಲ್ಲಿ ಅರ್ಧ ಚಟುವಟಿಕೆ, ಅರ್ಧ ನಿರ್ಬಂಧ ಮಾಡಬಹುದು. ಕಾರ್ಮಿಕರು, ಸರ್ಕಾರಿ & ಖಾಸಗಿ ಉದ್ಯೋಗಿಗಳಿಗೆ ರೊಟೇಷನ್ (ಪಾಳಿ) ಪದ್ಧತಿಯನ್ನು ಜಾರಿಗೆ ತರುವಂತೆ ಸೂಚಿಸಬಹುದು. ಸರ್ಕಾರಿ/ಖಾಸಗಿ ಉದ್ಯೋಗಿಳಿಗೆ ವರ್ಕ್ ಫ್ರಂ ಹೋಮ್ಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಗಳಿವೆ. ಬೆಂಗಳೂರಿನೊಳಗೆ ಸೀಮಿತ ಓಡಾಟಕ್ಕೆ ಮಾತ್ರ ಅವಕಾಶ ನೀಡಬಹುದು.
ಬೆಂಗಳೂರಿನಲ್ಲಿ ಕೊರೊನಾ ಬ್ರೇಕ್ ಫೇಲ್- ಒಂದೇ ದಿನ 1,172 ಮಂದಿಗೆ ಸೋಂಕು
-ರಾಜ್ಯದಲ್ಲಿ 1,839 ಮಂದಿಗೆ ಡೆಡ್ಲಿ ವೈರಸ್, 42 ಸಾವುhttps://t.co/r4Ob7I5Ub6#CoronaVirus #COVID19 #Karnataka #Bengaluru #Lockdown #SealDown #ContainmentZone #Quarantine
— PublicTV (@publictvnews) July 4, 2020
ಬಿಎಂಟಿಸಿ ಬಸ್ಗಳ ಸಂಚಾರ ಪ್ರಮಾಣದಲ್ಲಿ ಶೇ.50 ರಷ್ಟು ಇಳಿಕೆ ಮಾಡಬಹುದು. ಟ್ಯಾಕ್ಸಿ, ಆಟೋ, ಬೈಕ್ ಸಂಚಾರಕ್ಕೆ ಸಮ-ಬೆಸ ಪದ್ಧತಿ ಜಾರಿ ತರಬಹುದು. ಅಂಗಡಿ ಮುಂಗಟ್ಟು, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್ ತೆರೆಯಲು ಮತ್ತು ದೇವಸ್ಥಾನ ಸೇರಿ ಧಾರ್ಮಿಕ ಕೇಂದ್ರಗಳ ಓಪನ್ಗೆ ಸಮಯ ನಿಗದಿ ಮಾಡಬಹುದು. ಗೌರಿ ಗಣೇಶ ಹಬ್ಬದ ಆಚರಣೆಗೂ ಕೆಲವು ನಿಯಮ ಜಾರಿ ಸಂಭವವಿದೆ.
ಸಿಎಂ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ಸಭೆ- ಕೊರೊನಾ ನಿಯಂತ್ರಣಕ್ಕೆ ಯಾವ ಸಚಿವರಿಗೆ ಏನು ಜವಾಬ್ದಾರಿ?https://t.co/U1SOtKQmzm#CMYeddyurappa #CoronaVirus #COVID19 #Karnataka
— PublicTV (@publictvnews) July 4, 2020