ಕಾರವಾರ: ಜೂಜಾಟ ಆಡುತ್ತಿದ್ದ 17 ಜನರನ್ನು ಕಾರವಾರದ ಹಳಿಯಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ದುಸಗಿ ಬ್ರಿಡ್ಜ್ ನ ಕೆಳಭಾಗದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 17 ಜನರನ್ನು ಕಾರವಾರದ ಡಿ.ಸಿ.ಐ.ಬಿ ಅಧೀಕ್ಷಕ ನಿಶ್ಚಲ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ 1,43,650 ರಪಾಯಿಯನ್ನು ಹಾಗೂ ಇಸ್ಪೀಟ್ ಕಾರ್ಡ್ ವಶಕ್ಕೆ ಪಡೆದು ಬಂಧಿಸಿದೆ.
Advertisement
Advertisement
ಜಿಲ್ಲೆಯ ಹಳಿಯಾಳದಲ್ಲಿ ಹಲವು ದಿನಗಳಿಂದ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಡಿಸಿಐಬಿ ತಂಡ ದಾಳಿ ನಡೆಸಿದ್ದು, ಈ ವೇಳೆ ಹಳಿಯಾಳದ ಕರಿಯಪ್ಪ, ಶ್ರೀಕಾಂತ್, ನಾಸಿರ್, ಶಿವಾನಂದ, ಅಲ್ಬನ್, ಮಂಜುನಾಥ್, ಮೋಹನ್, ಪರಶುರಾಮ್, ರಿಯಾಜ್, ಗೌರೀಶ್, ಮುಕ್ತುಮ್, ಆನಂದ್, ತಾನಾಜಿ, ಶಿವಾಜಿ, ವಾಸೀಂ, ರಸೂಲ್, ಬಸೀರ್ ಖಾನ್, ಎಂಬುವವರನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿದೆ.