ಮುಂಬೈ: ಯುವಕನೋರ್ವ ಹಲ್ಲುಜ್ಜುತ್ತಾ ಟೂಥ್ ಬ್ರಶ್ ನುಂಗಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.
Advertisement
ವಿಜಯ್ ಜನಾರ್ಧನ್ ಬ್ರಶ್ ನುಂಗಿದ ಯುವಕ. ಡಿಸೆಂಬರ್ 26ರಂದು ಬೆಳಗ್ಗೆ ಹಲ್ಲುಜ್ಜುವಾಗ ಬ್ರಶ್ ನುಂಗಿದ್ದಾನೆ. ಕೆಲ ಸಮಯದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಾಗ ವಿಜಯ್ ನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಎಕ್ಸ್ ರೇ ಮಾಡಿದಾಗ ಅವರಿಗೂ ಗೊತ್ತಾಗಿಲ್ಲ. ಸಿಟಿ ಸ್ಕ್ಯಾನ್ ಮಾಡಿದಾಗ ಟೂಥ್ಬ್ರಶ್ ಕಂಡಿದ್ದು, ತಡಮಾಡದೇ ಶಸ್ತ್ರಚಿಕಿತ್ಸೆ ನಡೆಸಿ ಯುವಕನ ಜೀವ ಉಳಿಸಿದ್ದಾರೆ.
Advertisement
Advertisement
ಸರ್ಜರಿ ಬಳಿಕ ವಿಜಯ್ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ನಿಗಾದಲ್ಲಿದ್ದಾನೆ. ಡಾ.ಜುನೈದ್ ಶೇಖ್, ಅವಿನಾಶ್ ಘಡಗೆ, ಡಾ.ಓಮರ್ ಖಾನ್, ಡಾ.ಸಂದೀಪ್, ಡಾ.ಸುಕನ್ಯ, ಡಾ, ಗೌರವ್, ಡಾ.ಅನಿಕೇತ್ ಮತ್ತು ಡಾ. ವಿಶಾಖಾ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ.
Advertisement